Meta tags:
Headings (most frequently used words):
2015, ಇಟ್ಟಿಗೆ, ಸಿಮೆಂಟು, wednesday, july, 15, monday, march, 16, saturday, december, 2014, blog, archive, contributors, hit, count, ನನ್ನ, ಮೂರನೆಯ, ಪುಸ್ತಕ, whos, amung, us, followers, ಕತ್ತಲೆ, ವೈರುಧ್ಯ, ಷಂಡ,
Text of the page (most frequently used words):
ನನ್ನ (67), ನಾನು (42), ನಿನ್ನ (22), ನನಗೆ (21), ನನ್ನನ್ನು (15), ತಾರೆ (14), ಕೃಷ್ಣಾ (14), ನೀನು (12), ಕೃಷ್ಣ (12), ಹೆಣ್ಣಿನ (11), ಬದುಕು (11), ಅಂತ (11), ಹೆಣ್ಣು (11), ತನ್ನ (11), ಅವನ (10), ನಗು (10), ಸುಖ (10), ಒಂದು (9), ನಮ್ಮ (9), ಭೀಷ್ಮಾ (9), ಯಾಕೆ (8), ಗಂಡು (8), ಮತ್ತೆ (8), ನೋಡಿ (8), ಅವಳ (8), ನೋಡು (8), ಧೃತರಾಷ್ಟ್ರ (8), ಕುಂತಿ (8), november (7), december (7), ಬದುಕಿನುದ್ದಕ್ಕೂ (7), ಇದು (7), ಮಾತ್ರ (7), ಮಗಳೆ (7), october (6), january (6), march (6), june (6), july (6), ಚಂದ್ರ (6), ಅದು (6), ಪ್ರಕೃತಿ (6), ಯಾವ (6), ಬಂತು (6), ಸಹಜ (6), ಬೇಕು (6), ಸುಖದ (6), ಇಲ್ಲ (6), ಗಾಂಧಾರಿ (6), ಕಣ್ಣಿಗೆ (6), ಪ್ರತಿಜ್ಞೆ (6), ನೋವು (6), ಕುರುಡು (6), september (5), may (5), august (5), ಚಂದದ (5), ಕೂಡ (5), ಮಾಡಿದೆ (5), ಅವಳು (5), ಅಪ್ಪ (5), ಮುಂದೆ (5), ಬಂದು (5), ಒಂದೇ (5), ಪುರುಷ (5), ಅಗತ್ಯ (5), ಕಾಮವನ್ನು (5), ಹುಟ್ಟು (5), ಹಾಗೆ (5), ಗಡ್ಡ (5), ಮುಖ (5), ಏನು (5), ಬದುಕಿನಲ್ಲಿ (5), ಬದುಕಿನ (5), ಮಾಧವಾ (5), ಅಲ್ಲವೆ (5), ಜೊತೆ (5), ಸದ್ಧು (5), ittigecement (4), february (4), april (4), ಓದಿ (4), ಮಾತು (4), ಅಕ್ರಮ (4), ಗುರು (4), ಮುನಿವರ್ಯಾ (4), ಸಂಬಂಧ (4), ಗೊತ್ತಾ (4), ಅವಳನ್ನು (4), ಮಾನಸಿಕ (4), ಬಗೆಗೆ (4), ಬ್ರಹಸ್ಪತಿ (4), ಮಗುವಿನ (4), ತುಂಬಾ (4), ಅಂದರೆ (4), ಇನ್ನೂ (4), ಕಾಮದ (4), ಆಧ್ಯಾತ್ಮ (4), ದೇಹದ (4), ಗಂಡಿನ (4), ಕಣ್ (4), ನಕ್ಕಳು (4), ನನಗೂ (4), ಬಹಳ (4), ನಿನಗೆ (4), ಕುರುಡನ (4), ಕನಸುಗಳು (4), ಒಬ್ಬ (4), ಮಕ್ಕಳು (4), ನಿನ್ನನ್ನು (4), ಎಷ್ಟೆಲ್ಲ (4), ಬಟ್ಟೆ (4), ಬಣ್ಣದ (4), ಅಮ್ಮ (4), hit (3), ಸಿಮೆಂಟು (3), ಕತ್ತಲೆ (3), 2015 (3), comments (3), posted (3), ದಯವಿಟ್ಟು (3), ಪ್ರೀತಿಯ (3), ನೋಡಿದೆ (3), ಆಸೆ (3), ಮಾತನ್ನು (3), ಮಗು (3), ಮಗುವನ್ನು (3), ಮಾಡುವ (3), ಪ್ರತಿಯೊಂದೂ (3), ಪರಿ (3), ನೀರು (3), ಮುಗ್ಧವಾಗಿ (3), ದೊಡ್ಡ (3), ಕುರಿತು (3), ಬಳಿ (3), ಜೋರಾಗಿ (3), ಪತಿ (3), ಮಾತನಾಡಲಿಲ್ಲ (3), ಬಂದಳು (3), ಮಗುವಿಗೆ (3), ಕೇಳಿ (3), ದಿನ (3), ಅಲ್ಲ (3), ಪ್ರಕೃತಿಯ (3), ಚಂದ (3), ದಾಂಪತ್ಯದ (3), ಅಗತ್ಯವಿಲ್ಲ (3), ನಾವು (3), ಬಿಟ್ಟು (3), ಕಷ್ಟ (3), ಕಣ್ಣುಗಳಲ್ಲಿ (3), ಬಂದ (3), ಒಮ್ಮೆ (3), ಇಲ್ಲಿ (3), ಗೊತ್ತಲ್ಲವೆ (3), ನಾನೂ (3), ಇಂದು (3), ಕ್ಷಣ (3), ಬದುಕಿದೆ (3), ನಕ್ಕ (3), ಪಾಂಡು (3), ಕುರುಡ (3), ಹರಿ (3), ಬದುಕನ್ನು (3), ಬಾಣಗಳ (3), ಬೇಕಿಲ್ಲ (3), ಆಗಲಿಲ್ಲ (3), ಯಾರೋ (3), ಯುದ್ಧದಲ್ಲಿ (3), ಬದುಕಿಗೆ (3), ಮೇಲೆ (3), ರಾತ್ರಿ (3), ಮುನ್ನ (3), ಹೇಳಿದ (3), ಕತ್ತಲಲ್ಲಿ (3), ದಾಂಪತ್ಯದಲ್ಲಿ (3), ಅಂದವನ್ನು (3), ಇತ್ತು (3), ಸಂವೇದನೆ (3), ಸ್ನಾನ (3), ಚಂದವನ್ನು (3), counter (2), ಮಧ್ಯೆ (2), 2014 (2), posts (2), ಪ್ರತಿಕ್ರಿಯೆಗಳಿವೆ (2), ಮತ್ತು (2), ಸತ್ಯ (2), ಇರುವ (2), ತನಕ (2), ಇರುತ್ತಾನೆ (2), ತಪ್ಪು (2), ಕೋಪದಿಂದ (2), ಕೇಳಿದ (2), ನಿಮ್ಮ (2), ಷಂಡ (2), ನೆನಪಿನಲ್ಲಿರಬೇಕು (2), ಶಾಪ (2), ಧಿಕ್ಕರಿಸಿ (2), ಪರಿಯಾಗಿ (2), ಕಾಲು (2), ಅಲ್ಲವೇ (2), ಗಂಡಸು (2), ಸೊಕ್ಕಿನ (2), ಸುಲಭ (2), ಸುಮ್ಮನೆ (2), ಧ್ಯಾನದಲ್ಲೇ (2), ಚಂದ್ರನನ್ನು (2), ಆದರೆ (2), ಸಹಜವಾಗಿ (2), ತಾರೆಗೆ (2), ಇಹಲೋಕದ (2), ಸಭೆಯಲ್ಲಿ (2), ಸಮಯದಲ್ಲಿ (2), ಮೌನವಾಗಿ (2), ಹಿರಿಯರು (2), ಪ್ರಶ್ನೆ (2), ವಿಷಯ (2), ಬಿಸಿ (2), ಚರ್ಚೆ (2), ಶುರುವಾಯಿತು (2), ಹೂಂಕರಿಸಿದ (2), ಹಕ್ಕು (2), ಕಾರ್ಯಕ್ರಮವನ್ನು (2), ಕಿಲ (2), ಸಮಸ್ತ (2), ಲೋಕದ (2), ಸಂಭ್ರಮ (2), ಅತ್ಯಂತ (2), ಬಸುರಿ (2), ಎದ್ದು (2), ಪುರುಷನ (2), ಅಬಲೆ (2), ಹೇಳಿದ್ದು (2), ಹೆಣ್ಣಿಗೆ (2), ತೃಪ್ತಿ (2), ಬೆಳೆಸುವ (2), ಇದ್ದರೆ (2), ಸೊಗಸು (2), ಹಸಿವೆಗೆ (2), ಇದೆ (2), ಅಂಥಹ (2), ಕೋಪ (2), ದೇವಲೋಕದ (2), ಎಲ್ಲ (2), ಸಾಧನೆ (2), ಚಿಂತನೆ (2), ಸಂತಾನೋತ್ಪತ್ತಿಗೋಸ್ಕರ (2), ಜಗತ್ತಿನಲ್ಲಿ (2), ಮದುವೆಯ (2), ನೀವ್ಯಾಕೆ (2), ವಿಚಾರ (2), ಹೆಣ್ಣನ್ನು (2), ಅಲ್ಲಿ (2), ಮಿಲನದ (2), ತನಗೆ (2), ಹೇಗೆ (2), ಹುಟ್ಟಿದ್ದು (2), ಹೊಲವನ್ನು (2), ಯಾರೂ (2), ಮೀಸೆಗಳಿಂದ (2), ಭಾವನೆಗಳು (2), ಹೋದರೆ (2), ಭಾವ (2), ಅತ್ತಿತ್ತ (2), ನನ್ನವಳ (2), ಸ್ವಲ್ಪ (2), ಹಂಬಲ (2), ಬಿಸಿಯ (2), ಮದುವೆಯಾದ (2), ದಿನಗಳು (2), ಬ್ರಹಸ್ಪತಿಯ (2), ಅಲ್ಲಿಂದ (2), ಸುಂದರ (2), ಪ್ರತಿಕ್ರಿಯೆಗಳನ್ನೂ (2), ಕ್ಷಮೆ (2), ಧ್ವನಿ (2), ನಡುಗುತ್ತಿತ್ತು (2), ಲೆಕ್ಕಿಸದೆ (2), ಸಾರ್ಥಕ (2), ವೈಭೋಗದ (2), ಮಾಡಿದ (2), ನಿನಗೂ (2), ಹೇಳಲಿ (2), ನಗುತ್ತಿದ್ದ (2), ಹೀಗೆ (2), ಯಾವಾಗಲೂ (2), ಸಿಂಹಾಸನವನ್ನು (2), ಇದುವರೆಗೂ (2), ಸಾವಿಗೆ (2), ಸಾಲ್ವ (2), ಮರ್ಯಾದೆಯಿಂದ (2), ಮಾಡಿದ್ದೇನು (2), ಕಾಡುವ (2), ಹೋಯ್ತು (2), ಹೋದ (2), ಅನುಭವಿಸಲು (2), ಸಾವನ್ನು (2), ಸಾವು (2), ಖಂಡಿತ (2), ಮಡದಿಯನ್ನು (2), ಭಯಂಕರ (2), ಇನ್ನೊಂದು (2), ಅದೊಂದು (2), ಆಗಿ (2), ಹೋಯಿತು (2), ಬಣ್ಣಗಳ (2), ಸನ್ಯಾಸಿಯಾಗಿ (2), ಮರದ (2), ಇದಕ್ಕೆಲ್ಲ (2), ಕುಟುಂಬದ (2), ವೈರುಧ್ಯ (2), ತಲೆ (2), ಪ್ರಯತ್ನ (2), ಹೆಂಗಳೆಯರ (2), ಕನಸು (2), ಕಂಡವ (2), ರಾಜಕುವರ (2), ವೀರ (2), ಯೋಧ (2), ಸೇನಾನಿ (2), ನೋಡುತ್ತ (2), ಆಸ್ಥಾನದಲ್ಲಿ (2), ಬಲ್ಲೆ (2), ಕಾಣುತ್ತಿತ್ತು (2), ದೈಹಿಕ (2), ನೋವಾ (2), ಕಣ್ಣಲ್ಲಿ (2), ಆರಾಧ್ಯ (2), ದೈವ (2), ಶ್ರೀಕೃಷ್ಣ (2), ಯಾರದ್ದೋ (2), ಯಾರೆಲ್ಲ (2), ಕುರುಕ್ಷೇತ್ರ (2), ನಡೆದ (2), ವರವನ್ನು (2), ಒಂಟೀ (2), ಜೀವ (2), ಒಸರುತ್ತಿದೆ (2), ಪ್ರತಿಜ್ಞೆಯನ್ನು (2), ಎಂದಿಗೂ (2), ಅವನಿಗಾಗಿ (2), ಯುದ್ಧ (2), ಅವರ (2), ಎಂದೂ (2), ಹೋಗುವ (2), ಒಂಟಿಯಾಗಿ (2), ಅಸಾಧ್ಯ (2), ಎಷ್ಟು (2), ಒಳಗೆ (2), ಬೆಳಕು (2), ಪತ್ನಿಯಾಗಿ (2), ಹಾಗಲ್ಲ (2), ಭೋಗಿಸಲಾಗದ (2), ಪ್ರಣಯಕ್ಕೆ (2), ಮಾನಸಿಕವಾಗಿಯಾದರೂ (2), ಅವರಿಗೆ (2), ನಿನಗಿತ್ತು (2), ಅದನ್ನು (2), ಖುಷಿ (2), ಭಾಗ್ಯ (2), ಅದೆಲ್ಲ (2), ಪುಟ್ಟ (2), ಮಕ್ಕಳೂ (2), ಕಳೆದು (2), ನನ್ನಂದವನ್ನು (2), ಅನುಭವಿಸುವ (2), ಪತಿಯೂ (2), ಗುಲಾಬಿ (2), ಅರ್ಥವಾಗಿರಲಿಲ್ಲ (2), ಕೋಣೆಯಲ್ಲಿ (2), ಅಕ್ಕಾ (2), ಪರ್ಯಂತ (2), ನೋಡುತ್ತದೆ (2), ಹೆಮ್ಮೆ (2), ಮದುವೆ (2), ಪಟ್ಟುಕೊಳ್ಳುತ್ತಿದ್ದೆ (2), ನಾಚಿಕೆ (2), ಗೊತ್ತಿಲ್ಲ (2), ಏಕಾಂತದಲ್ಲಿ (2), ಸಮಯ (2), ನನ್ನನ್ನೇ (2), ಇಟ್ಟಿಗೆ (2), followers, medifast, coupons, free, whos, amung, ಸಂಪರ್ಕಿಸಿ, kash531, gmail, com, ಮೂರನೆಯ, ಪುಸ್ತಕ, count, ಮರಳಿನ, contributors, 2008, 2009, 2010, 2011, 2012, 2013, blog, archive, subscribe, atom, home, older, ಪ್ರತಿಕ್ರಿಯೆಗಳನ್ನು, ಇವರಿಗೆ, ನಮನಗಳು, ವಾಜಪೇಯಿ, ಅಣ್ಣ, ಸುಬ್ರಮಣ್ಯ, ದೀಕ್ಷಾ, ಕಾಲೇಜು, ಹುಬ್ಬಳ್ಳಿ, ಗೆಳೆಯ, ಕಥೆಯನ್ನು, ಚರ್ಚಿಸಿ, ಸಲಹೆ, ಸೂಚನೆ, ನೀಡಿದ, ಮೈಯೆಲ್ಲ, ಉರಿಯುತ್ತಿತ್ತು, ಬಾನಿನಲ್ಲಿ, ನಕ್ಕಂತೆ, ಕಂಡ, ಹುಣ್ಣಿಮೆಯಾಗಿತ್ತು, ಆಕಾಶ, ಕೋಪವಿನ್ನೂ, ಆರಿರಲಿಲ್ಲ, ಸೂರ್ಯನಷ್ಟೆ, ಅನೈತಿಕ, ಸಂಬಂಧಳೂ, ಶಾಶ್ವತವಾಗಿ, ಇರುತ್ತವೆ, ಹೇಳುವ, ಪೌರುಷ, ಅಹಂಕಾರ, ಸೊಕ್ಕೂ, ನೆನಪಾಗುತ್ತದೆ, ನೆರವೇರಿಸದ, ಒಲಿದ, ಪ್ರೀತಿಸಿದ, ಬುಧನೂ, ಸೂರ್ಯ, ವಿಶ್ವದಲ್ಲಿ, ಕಂಪಿಸುತ್ತಿದ್ದಳು, ಧಡಕ್ಕನೆ, ಎದ್ದಳು, ಬಿರುಸಿನ, ನಿರ್ವೀರ್ಯ, ನೆನಪಾಗಬೇಕು, ನೆನಪಾದಗಲೆಲ್ಲ, ನಿಮ್ಮಿಬ್ಬರಿಗೆ, ನೆನಪಿಸಿಕೊಂಡು, ಕೊರಗುತ್ತಿರಬೇಕು, ನೀನೂ, ಪ್ರತಿಯೊಬ್ಬ, ಗಂಡಸಿಗೂ, ಹೆಣ್ಣಿಗೂ, ಪತಿಯನ್ನು, ದೈನ್ಯವಾಗಿ, ನೋಡಿದಳು, ದಳನೆ, ನೀರಿಳಿವ, ಕಣ್ಣಿಂದ, ಘೋರವಾದ, ಕೊಟ್ಟೆ, ಬಗ್ಗಲಿಲ್ಲ, ಬೇಡಿಕೊಂಡಳು, ನಿರ್ವೀರ್ಯದ, ಸಾಗಿಸಲಿ, ಗಂಡಾಗಿ, ಹುಟ್ಟಿದ್ದರೂ, ಷಂಡನಾಗಲಿ, ನನ್ನದಲ್ಲದ, ದೂರ, ಹೋಗಿ, ಬಿದ್ದಳು, ಝಾಡಿಸಿದೆ, ಗಾಭರಿಯಿಂದ, ಹಿಡಿದುಕೊಂಡಳು, ಕಮಂಡಲದಿಂದ, ತೆಗೆದುಕೊಂಡೆ, ಕೆಣಕುವಂತಿತ್ತು, ಹಂಕಾರವನ್ನು, ಅಣಕಿಸಿದಂತಿತ್ತು, ಗಂಡಸುತನವನ್ನು, ನಗುತ್ತಿತ್ತು, ಆಶ್ರಮಕ್ಕೆ, ಬಂದವನೇ, ಎತ್ತಿಕೊಂಡೆ, ಗಡಸುತನದಿಂದ, ಶಬ್ದ, ಉತ್ಪತ್ತಿಯಾದದ್ದು, ಅಹಮ್, ಸುಮ್ಮನಿರಬೇಕಲ್ಲ, ನನ್ನೊಳಗಿನ, ಉಪದೇಶ, ಬೇರೆಯವರಿಗೆ, ಕೊಡುವದು, ಒಳಗೊಳಗೆ, ಜ್ವಾಲಾಮುಖಿ, ಕುದಿಯುತ್ತಿತ್ತು, ಅವಡುಗಚ್ಚಿ, ಹೊರಗೆ, ಬಂದೆ, ಕ್ಷಮಿಸಿ, ಮನುಷ್ಯನಾಗಿಬಿಡು, ಮುಖಕ್ಕೆ, ಬೀಳಿಸಿಕೊಳ್ಳುತ್ತೀಯಾ, ಎಂಜಲು, ಉಗಿದು, ಆಕಾಶಕ್ಕೆ, ವಿಷಯವನ್ನು, ದೊಡ್ಡದಾಗಿಸಿ, ಇದ್ದಳು, ವ್ಯಭಿಚಾರವಲ್ಲ, ಸದಾಚಾರವಲ್ಲವೇ, ಸೇರುವಾಗಲೂ, ವ್ಯಭಿಚಾರವಾಗುತ್ತದೆ, ಬೇರೆ, ವ್ಯಕ್ತಿಯ, ಚಿಂತಿಸಿದರೆ, ಮಿಲನದಲ್ಲಿ, ಇದ್ದಳಂತೆ, ಸೇರಿದಾಗ, ಮೊದಲ, ಕಾಮದಾಸೆ, ಆದಾಗ, ಪುರಸ್ಕರಿಸಲಿಲ್ಲ, ಜಗದ, ಜಂಜಡಗಳಿಗೆ, ಬೀಳಬೇಡ, ಋಷಿಯಾದವನು, ಐಹಿಕ, ಸಾಂಗತ್ಯವನ್ನು, ತ್ಯಜಿಸಿ, ಶಾಂತನಾಗು, ಆಮೇಲೆ, ಕರೆದ, ಚಂದ್ರನನ್ನೂ, ತಾರೆಯನ್ನೂ, ಪ್ರತ್ಯೇಕವಾಗಿ, ಕರೆದು, ಮಾತನಾಡಿದ, ಬ್ರಹ್ಮದೇವ, ನ್ಯಾಯ, ಕೊಡಿಸು, ಅವಮಾನವಾಗಿದೆ, ಮೊಮ್ಮಗಳಿಂದ, ದೇವತೆಗಳ, ಗುರುವಾದ, ಅನ್ಯಾಯವಾಗಿದೆ, ಸೃಷ್ಟಿಕರ್ತಾ, ಬ್ರಹ್ಮನ, ಹೋದೆ, ತಾರೆಯ, ಅಜ್ಜ, ನೇರವಾಗಿ, ಕಾಲನ್ನು, ಒದೆಯುತ್ತ, ಅವಮಾನದಿಂದ, ತುಂಬಿದ, ನಾನಿಲ್ಲದ, ಜಾರಿದಳೆ, ಧರ್ಮವನ್ನು, ನಿಷ್ಠೆಯಿಂದ, ಪಾಲಿಸಿಕೊಂಡು, ಬಂದವನು, ಪ್ರತಿಕ್ರಿಯಿಸುವ, ತ್ರಿಲೋಕ, ಸುಂದರಿಯರಾದ, ಅಪ್ಸರೆಯರನ್ನು, ನಿರ್ವಿಕಾರವಾಗಿ, ಇಂದ್ರ, ಲೋಕದಲ್ಲಿ, ಗರ್ವಕ್ಕೆ, ಕೊಡಲಿ, ಏಟು, ಬಿದ್ದಂತಾಗಿತ್ತು, ಸುಮ್ಮನಿದ್ದುಬಿಟ್ಟಿದ್ದಳು, ಪ್ರಶ್ನೆಗೂ, ಉತ್ತರಿಸಲಿಲ್ಲ, ಯಾರು, ಕೇಳಿದರು, ಅಲ್ಲಿರುವ, ಸಭೆಗೆ, ತಲೆಯನ್ನು, ತಗ್ಗಿಸಿ, ತಾಯಿಯನ್ನು, ಕರೆಸಿರಿ, ಗೊತ್ತಾಗುವದಿಲ್ಲ, ಇಬ್ಬರೂ, ರೀತಿ, ಜಗಳವಾಡಿದರೆ, ಇಂದ್ರದೇವ, ಎಲ್ಲರನ್ನೂ, ಶಾಂತಗೊಳಿಸಿದ, ವಾಗ್ವಾದ, ಗದ್ದಲ, ಚಂದಿರ, ಮಾತನಾಡುತ್ತಿರುವೆಯೆಂದು, ಪ್ರಜ್ಞೆ, ಇಟ್ಟುಕೊ, ಯಾರ, ನೀಚನಂತೆ, ಮಾತನಾಡಬೇಡ, ಮರ್ಯಾದೆ, ಮಣ್ಣು, ಪಾಲಾಗುತ್ತಿದೆ, ಮಾನ, ನೆರೆದಿರುವ, ಅತಿಥಿಗಳನಡುವೆ, ದಿಘ್ಬ್ರಾಂತನಾದೆ, ಹೆಸರಿಡುವೆ, ನಾಮಕರಣ, ಗುರುವರ್ಯಾ, ನೋಡಿದ, ಶಿಷ್ಯ, ಧ್ವನಿಯತ್ತ, ತಿರುಗಿ, ಇಷ್ಟಕ್ಕೇ, ನಿಲ್ಲಿಸಿ, ಘರ್ಜನೆ, ಗದ್ದಲದಿಂದ, ಸಂಭ್ರಮಕ್ಕೆ, ಕಳೆ, ಕಟ್ಟಿತ್ತು, ಸಂಭಾಷಣೆ, ಅತಿಥಿಗಳ, ಪುರೋಹಿತ, ವರ್ಗದವರ, ಮಂತ್ರ, ಘೋಷಣೆ, ಮುಗಿಲು, ಮುಟ್ಟಿತ್ತು, ಗಣ್ಯರನ್ನು, ಆಹ್ವಾನಿಸಿದೆ, ವಿಜ್ರಂಭಣೆಯಿಂದ, ಆಚರಿಸಲು, ನಿಶ್ಚಯಿಸಿದೆ, ನಾಮಕರಣದ, ಎಲ್ಲೆಡೆ, ಮುದ್ದಾದ, ಅಪ್ಪನೂ, ಆದೆ, ಮುಂದೊಂದು, ಸಂತೋಷವಾಯಿತು, ದೇವಲೋಕದಿಂದ, ಬಂದಮೇಲೆ, ಗೊತ್ತಾಯಿತು, ಇಂಥಹ, ನಮ್ಮಿಬ್ಬರಲ್ಲಿ, ಮಾಮೂಲಿ, ಹೋದಳು, ಜಗತ್ತಿನ, ಭೋಗಸ್ಕೋರ, ಕುಲವಿರುವದು, ಪಡುವ, ವಿಷಯದಲ್ಲೂ, ಶಾರೀರಿಕವಾಗಿ, ಅದಕ್ಕಾಗಿಯೇ, ಹೌದು, ಇವಳಿಗೊಂದು, ಉತ್ತರ, ಕೊಡಬೇಕು, ಎನಿಸಿತು, ಅತೃಪ್ತಿ, ಸಹಜವೇ, ಅರ್ಥವೆ, ಇದರಲ್ಲಿ, ಅವಕಾಶ, ಇಲ್ಲವೆಂದಾದರೆ, ಪ್ರಕೃತಿಗೆ, ಕೊಟ್ಟಷ್ಟೇ, ಸುಖದಲ್ಲಿ, ಪಟ್ಟುಕೊಳ್ಳಬೇಕು, ಕೊಟ್ಟಾಗಲಷ್ಟೇ, ಅನುಭವಿಸಬೇಕು, ಮೆಂತೆ, ಸೊಪ್ಪನ್ನು, ಪುರುಷನಿಗೆ, ಏನನ್ನ, ಸಾಮರ್ಥ್ಯವಿರುವ, ಹೊಲದಲ್ಲಿ, ಆಲದಂತಹ, ಹೆಮ್ಮರವನ್ನು, ಜಾಸ್ತಿ, ಆಕ್ಷಣದ, ಸುಖಕ್ಕೆ, ಉದ್ರೇಕದ, ಬೇಕೇ, ಹಾಸಿಗೆಗೆ, ಅಲ್ಲಿಯೂ, ಅಂದ, ಹೋಮ, ಹವನಗಳಿಗೆ, ಹೆಂಡತಿಯ, ಯಜ್ಞ, ಯಾಗಾದಿಗಳಿಗೆ, ತಪಸ್ಸಿಗೆ, ಚಿಂತನೆಗಳಿಗೆ, ಅಯ್ಯೋ, ಹುಚ್ಚಿ, ನಿಮ್ಮಂಥಹ, ಋಷಿಗಳಿಗೆ, ಹೆಣ್ಣೇಕೆ, ಬದುಕುಕೊಟ್ಟಿದ್ದರೆ, ಚೆನ್ನಾಗಿತ್ತಲ್ಲವೆ, ಸಾಮಾನ್ಯರು, ಕಣ್ಣೆತ್ತಿ, ನೋಡದ, ಕುರೂಪಿಯೊಬ್ಬಳಿಗೆ, ಅಸಹಾಯಕಳಿಗೆ, ಕುರುಡಿಯೋ, ಸಾಕಾಗುತ್ತಿರಲಿಲ್ಲವೆ, ಕುಂಟಿಯೋ, ನನ್ನಂಥಹ, ಚೆಲುವೆಯ, ಚಿಂತನೆಯವರಿಗೆ, ತಡೆಯಲಾಗಲಿಲ್ಲ, ಪಾರಮಾರ್ಥಿಕತೆಯತ್ತ, ಹೊರಟವರು, ಮದುವೆಯಾಗಿ, ಎಲ್ಲರೂ, ಮದುವೆಯಾದವರು, ಸಪ್ತ, ಋಷಿಗಳನ್ನು, ಜೊತೆಗೆ, ಪಾರಮಾರ್ಥಿಕ, ಮಾಡಬೇಕು, ಮೂಲಭೂತವಾದ, ಗುಣ, ಮೂಲಗುಣವನ್ನು, ಇರಲಾಗುತ್ತದೆಯೆ, ಸನ್ಯಾಸಿ, ಅಂತಿದ್ದರೂ, ತಪಸ್ಸಿಗೋಸ್ಕರ, ಹುಟ್ಟಿರುವದು, ನಿಮಗ್ಯಾಕೆ, ನೀವು, ಸಂಸಾರದ, ಭೋಗಗಳನ್ನು, ಬಿಟ್ಟವರಲ್ಲವೆ, ಮದುವೆಯಾಗಿದ್ದೀರಿ, ಅವಳಿಗೆ, ಬಂದಿದ್ದು, ಸ್ಪಷ್ಟವಾಗಿ, ಕಾಣಿಸಿತು, ಸುಖಗೋಸ್ಕರ, ಆಗಿದೆ, ಭೋಗ, ಗಂಡಿಗೋಸ್ಕರ, ಬಂದಾಗಲೂ, ಸೃಷ್ಟಿಸಿದ, ರೀತಿಯೇ, ಹಾಗಿದೆ, ಪಡೆದು, ಮಲಗಿರುತ್ತಾನೆ, ಕ್ಷಣದ, ಬೇಕಿದ್ದರೂ, ಗಂಡಸಿನ, ತೃಪ್ತಿಯೇ, ನಿರ್ಣಾಯಕ, ಮೈಥುನದಲ್ಲಿ, ಸ್ಖಲನವೇ, ಮುಖ್ಯ, ಕಾರ್ಯ, ನಿಂತುಬಿಡುತ್ತದೆ, ಕೊನೆಯ, ಹಂತ, ತಲುಪಿದಕೂಡಲೆ, ಖುಷಿಯ, ಸೂಕ್ಷ್ಮವಾಗಿ, ಗಮನಿಸಿದ್ದೀಯಾ, ಕ್ಷಣಗಳಿವೆಯಲ್ಲ, ಅರ್ಥವಾಗಲಿಲ್ಲ, ಮುನಿವರ್ಯ, ಕಣ್ಣರಳಿಸಿದಳು, ಬೇಕೋ, ಬಳಸಿಕೊಳ್ಳುವದು, ಪುರುಷನಿಗೋಸ್ಕರವೇ, ಊಳುತ್ತಾನೆ, ಅವಶ್ಯಕತೆಗಳಿಗಷ್ಟೆ, ಬೆಳೆ, ಬೇಕೆನಿಸಿದಾಗ, ಉಳುಮೆ, ಮಾಡುವದಿಲ್ಲ, ಅಲ್ಲಿಯೆ, ತುಂಡರಿಸಿದೆ, ಭಾವನೆಗಳಿಗೂ, ಬೆಲೆಕೊಡಬೇಕಲ್ಲವೆ, ಮುಚ್ಚಿ, ಗಲಗಲನೆ, ಮುಚ್ಚಿದರೆ, ನಷ್ಟವೂ, ಕಡಿಮೆ, ಗಂಡಿಗೆ, ತುಂಬಿ, ಅಲ್ಲವ, ಮೌನ, ತುಟಿಗಳಲ್ಲೂ, ತುಂಬಿರುತ್ತವೆ, ಕೆನ್ನೆಗಳಲ್ಲಿ, ಪ್ರತಿ, ಕಣದಲ್ಲೂ, ಹರಿದಾಡುತ್ತಿರುತ್ತವೆ, ಹೂವಿನಂತೆ, ಬೊಗಸೆ, ಗೊತ್ತಾಗಿಬಿಡುತ್ತದೆ, ಓಡಾಡುವ, ಮನದ, ಗೊಂದಲ, ಹೆಣ್ಣಿಗೇಕೆ, ಮೀಸೆಗಳು, ಗಂಡಸಿಗೆ, ಮಾತನಾಡಿಸುವ, ಉಂಟಾಯಿತು, ಕಣ್ಣರಳಿಸಿ, ನಗುವಾಗ, ಮುಖವೆಲ್ಲ, ಅರಳುತ್ತದೆ, ಜ್ಞಾಪಕವಾಗುವದಕ್ಕೆ, ಬಿಟ್ಟಿದ್ದೇನೆ, ಗಡ್ಡದ, ಇರುವು, ಪ್ರತಿಕ್ಷಣ, ಗೊತ್ತಾದಾಗ, ನನ್ನಂಥವನಿಗೆ, ಬಾಹ್ಯ, ಸೌಂದರ್ಯ, ಇದ್ದರೆಷ್ಟು, ಬಿಟ್ಟರೆಷ್ಟು, ಪೂರ್ತಿ, ಪರಮಾತ್ಮನ, ಚಿಂತನೆಯಲ್ಲಿ, ಮುಳುಗಿದವನು, ಬಂಧನದೊಳಗೆ, ಇದ್ದು, ಪರಿಧಿಯಾಚೆ, ನೋಡುವವನು, ಕ್ಷಣಿಕ, ಸುಖಗಳು, ಮಿಥ್ಯ, ನಂಬಿದವನು, ಪರಮಾತ್ಮಿಕ, ವಿಚಾರಗಳಲ್ಲಿ, ತಪಸ್ಸು, ಮಾಡುವವನು, ಬಿಟ್ಟಿದ್ದೀರಿ, ಪ್ರಶ್ನೆಗಳು, ವಿಚಿತ್ರ, ಹೊಸ, ದಿನಗಳಲ್ಲವೆ, ತಾರೆಯನ್ನು, ಸ್ವಗತ, ತಾರೆಯರಲ್ಲಿ, ಏರ್ಪಡುತ್ತದೆ, ಆಶ್ರಮದಲ್ಲಿ, ಇಲ್ಲದ, ಅಲ್ಲಿಗೆ, ಗಣನೆಗೆ, ತೆಗೆದುಕೊಳ್ಳದೆ, ದೇವಲೋಕದತ್ತ, ಹೋಗುತ್ತಾನೆ, ಕಾಮದಾಸೆಯನ್ನು, ನಿವೇದಿಸುತ್ತಾಳೆ, saturday, ಆಸ್ತಿಕ, ಮನಸ್ಸುಗಳ, ಕೋರುವೆ, ಧಾರಾಕಾರವಾಗಿ, ನೀರಿಳಿಯುತ್ತಿತ್ತು, ಮೃದುವಾಗಿ, ಮೈದವಡುತ್ತಿದ್ದ, ಭಕ್ತಿಯಿಂದ, ಪರವಶನಾದೆ, ಕಣ್ಮುಚ್ಚಿ, ಕೈಮುಗಿದೆ, ಎತ್ತಿ, ರಕ್ತಸಿಕ್ತ, ಕೈಗಳನ್ನು, ಬಾಣಗಳಿಂದ, ಜರ್ಜರಿತವಾದ, ನೋವುಗಳನ್ನು, ನಿನ್ನದು, ಗೆದ್ದಿದ್ದೀಯಾ, ಛಲವನ್ನು, ಬಿಡಲಿಲ್ಲ, ಕಾಮಕೂಪದಲ್ಲಿದ್ದರೂ, ಅಪ್ಪನಿಗಾಗಿ, ಪ್ರತಿಜ್ನೆಗಾಗಿ, ಬದುಕನ್ನೇ, ಮುಡಿಪಾಗಿಟ್ಟೆ, ಅಪ್ಪಿ, ಕೊಳ್ಳುವ, ಅಗತ್ಯವೇನಿಲ್ಲ, ಒಪ್ಪಿದರೂ, ಸಹಜತೆಯನ್ನು, ಕಾಮವೂ, ಸೃಷ್ಟಿ, ಹಾಗೆಯೇ, ಬ್ರಹ್ಮಚಾರಿ, ಕೃಷ್ಣನ, ಮುಖವನ್ನು, ತುಂಬಿಕೊಂಡೆ, ಮುದ್ದು, ಮುಖದ, ನಗುವ, ಸವನೆ, ಏನೂ, ಇಲ್ಲವೆ, ಹೊರತಾಗಿ, ಸ್ತ್ರೀಯನ್ನು, ವಿರೋಧಿಸಿ, ಬದುಕಿದ್ದು, ತಪ್ಪಾ, ಬ್ರಹ್ಮಚಾರಿಯಾಗಿರಬೇಕು, ಎಂದರೆ, ಗೆಲ್ಲಬೇಕು, ವಿಪರ್ಯಾಸಗಳನ್ನು, ಹಾಕುವದು, ರೀತಿಯಾಗಿ, ಮನೆಯ, ಸೊಸೆ, ದ್ರೌಪದಿಯಿಂದಾಗಿ, ಕುರುವಂಶ, ನಾಶವಾಗುತ್ತಿದೆ, ವೈರಿಗಳಿಂದ, ಕಾಪಾಡಿಕೊಂಡು, ಬಂದಿದ್ದೆ, ಕುರುವಂಶದ, ಶಿಖಂಡಿಯಾಗಿ, ಕಾರಣಳಾಗಿದ್ದಾಳೆ, ಅಂಬೆ, ಅಂಬೆಯನ್ನು, ತಿರಸ್ಕರಿಸಿದರೆ, ತಪ್ಪೇನಿದೆ, ಮಹಾರಾಜ, ಅವನಲ್ಲಿ, ಕಳುಹಿಸಿಕೊಟ್ಟೆ, ಮಹಾರಾಜನನ್ನು, ಪ್ರೀತಿಸಿದ್ದೇನೆ, ಎಂದಾಗ, ತಮ್ಮನಿಗಾಗಿ, ಕರೆ, ತಂದೆ, ಅಂಬೆಗೆ, ಕಾಡಿದೆ, ಕ್ಷಣದಲ್ಲೂ, ಹಠದಿಂದ, ಹತ್ತಿಕ್ಕಿ, ಆಸೆಗಳನ್ನು, ಮನಸ್ಸಿನ, ವಿರುದ್ಧವಾಗಿ, ಏನದು, ನಿನ್ನಲ್ಲಿ, ಪ್ರಶ್ನೆಯಿದೆ, ಕಿರು, ಕಾಮವೇ, ದೊಡ್ಡದಾಗಿ, ದೇಹವನ್ನೂ, ಮನಸ್ಸನ್ನೂ, ಸಾವಿನ, ಭಯವಿದ್ದರೂ, ಸತ್ತೂ, ಭೋಗಿಸಲು, ಮುಂದಾದರೆ, ಕಾಮಾತುರನಾಗಿ, ಮಹಾರಾಜನಿಗೆ, ಶಾಪವಿತ್ತು, ಧೃಥರಾಷ್ಟ್ರನ, ಸಹೋದರ, ಇದಕ್ಕಿಂತಲೂ, ಆಶ್ಚರ್ಯವಾದ, ವಿಷಯವಿದೆ, ನಗುತ್ತ, ತಲೆಯಾಡಿಸಿದ, ಯಯತ್ಸು, ದಾಸಿ, ಪುತ್ರ, ಅವಾಂತರವನ್ನು, ಪರಿಹರಿಸಿದ್ದು, ಗಲಾಟೆಯೇ, ಅವಳಲ್ಲಿ, ಪಡೆದ, ದಾಸಿಯಲ್ಲಿ, ಮೋಹಿತನಾದ, ಮಡದಿ, ಸಾಕಾಗಲಿಲ್ಲ, ಕಾಮಕ್ಕೆ, ಸೊಬಗಿನ, ಕಲ್ಪನೆ, ಅವನಿಗಿಲ್ಲ, ಸೌಂದರ್ಯದ, ರಂಗುಗಳನ್ನು, ನೋಡಲೇ, ಕಾಣುವ, ಧೃಥರಾಷ್ಟ್ರ, ಎಲ್ಲಿ, ಆಟಗಳನ್ನು, ನೋಡಿರುವೆ, ಕಣ್ಣೇದುರಲ್ಲೇ, ತಿಳಿಯದ, ವಿಷಯವೇನಲ್ಲ, ಹುಟ್ಟುವದು, ಸೃಷ್ಟಿಯಲ್ಲಿ, ಹೆಮ್ಮೆಯಿಂದ, ಗೆದ್ದಿರುವೆ, ರಾಜಭೋಗದಲ್ಲಿ, ಬ್ರಹ್ಮಚಾರಿಯಾಗುವದು, ತೊರೆದು, ಸಂಬಂಧಗಳನ್ನೆಲ್ಲ, ಹಿಮಾಲಯದಲ್ಲಿ, ಕೆಳಗೆ, ಬೆಟ್ಟದಲ್ಲಿ, ಎಲ್ಲೋ, ಸಾಕ್ಷಿಭೂತನಾಗಿದ್ದೆ, ಹಿತೈಷಿಯಾಗಿ, ವೇದವ್ಯಾಸರು, ಸಮಸ್ಯೆ, ಪರಿಹರಿಸಲಿಕ್ಕೆ, ಬರಬೇಕಾಯಿತು, ರಾಜ್ಯದ, ಸಿಂಹಾಸನಕ್ಕೆ, ಉತ್ತರಾಧಿಕಾರಿ, ಬೇಕಲ್ಲ, ಅವರು, ಮಕ್ಕಳಾಗದೆ, ವಿಧವೆಯರಾದರು, ಮುಂದೊಮ್ಮೆ, ಮತ್ಸ್ಯಗಂಧಿಗೆ, ಯೋಗ್ಯರಾದ, ಸೊಸೆಯರನ್ನು, ತರಬೇಕಾಯಿತು, ಚಿಕ್ಕಮ್ಮ, ಬ್ರಹ್ಮಚೈರ್ಯದ, ಮಾಡಿಸಿದ, ನನ್ನಿಂದ, ಎದುರಿಸಿ, ಬದುಕಿದ್ದೇನೆ, ಅಲ್ಲಾಡಿಸುವ, ನೋವಿನಿಂದ, ಕಿವುಚಿದೆ, ಎಳೆ, ಎಳೆಯಾಗಿ, ಬಿಡಿಸಿಡುತ್ತಿದ್ದ, ಕೂಡಾ, ನೋವುಗಳಾಗಿದ್ದವು, ಕಾಡದೆ, ಬಿಟ್ಟಾವೆಯೆ, ಮಾಡಿದರೂ, ಹತ್ತಾರು, ಆರಮನೆಯ, ಮಾಡಿದ್ದು, ಯೌವ್ವನದ, ದಿನಗಳಲ್ಲಿ, ಜೈವಿಕ, ಕ್ರಿಯೆಯನ್ನು, ಮಾಡಲೇ, ಬೇಕಲ್ಲವೆ, ದೇಹ, ವೀರ್ಯವಂತನ, ಸಮರ್ಥ, ಪೌಷ್ಟಿಕ, ಆಹಾರ, ಸೇವಿಸುವ, ಅನಿವಾರ್ಯ, ಅದಕ್ಕೆ, ತಕ್ಕ, ವ್ಯಾಯಾಮ, ಶೂರತನ, ಸುಲಭವಾಗಿ, ಬರುವದಿಲ್ಲ, ಬ್ರಹ್ಮಾದಿಗಳನ್ನು, ಸೋಲಿಸಬಲ್ಲ, ನೀನೊಬ್ಬ, ಬ್ರಹ್ಮಚಾರಿಯಾಗಿವದು, ಆಸ್ಥಾನದ, ಅರೆನಗ್ನ, ಪಟಗಳನ್ನು, ನರ್ತಕಿಯರ, ನೃತ್ಯಗಳನ್ನು, ರಾಜನ, ರಾಜ, ವೈಭೋಗವನ್ನು, ಅನುಭವಿಸುತ್ತ, ಕುರಿತ, ನಿಷ್ಠೆಯನ್ನೂ, ಮುಗುಳ್ನಕ್ಕ, ಕೆಣಕುವೆಯೇಕೆ, ಅಂತರಂಗ, ಅರಿತಿದ್ದರೂ, ಕೆಣಕುತ್ತಿದ್ದಾನೆ, ಅರ್ಥವಾಯಿತು, ಹರರನ್ನೇ, ಗೆಲ್ಲಬಲ್ಲ, ಭೀಷ್ಮನಿಗೆ, ನೋವೇ, ಮಹಾರಥಿ, ಹಸ್ತಿನಾವತಿಪುರದ, ನಿನಗೆಂಥಹ, ಮುಗುಳು, ನಗುತ್ತಿರುವಂತೆ, ನೋವಿನೊಂದಿಗೆ, ಜೊತೆಯಾಗಿ, ಬದುಕಿರುವೆ, ಕ್ಷಣಕ್ಕೂ, ಚುಚ್ಚುವ, ಮುಚ್ಚಿದರೂ, ನೋವಾಗುತ್ತಿದೆಯಾ, ಶುದ್ಧ, ಅಂತಃಕರಣದ, ಸಾಕು, ಆಡಂಬರ, ಭಕ್ತಿಗೆ, ನಿಂತ, ತುಂಬಿತ್ತು, ಮುಗಿಯುವ, ಭಾಗ್ಯವೂ, ನನಗಿಲ್ಲ, ತುಂಬ, ಬಾಯಿತುಂಬಾ, ಹೆಸರನ್ನಾದರೂ, ಹೇಳಿಬಿಡುತ್ತೇನೆ, ಗೋವರ್ಧನ, ಗಿರಿಧಾರಿ, ಮುರಾರಿ, ಕಣ್ಣುಗಳು, ಮಿನುಗಿದವು, ಬಂದಿರುವೆ, ಚುಚ್ಚಿದ, ಬಾಣಗಳಿಂದಾಗಿ, ಕುತ್ತಿಗೆ, ಹೊರಳಿಸುವ, ಬರುತ್ತಿರುವ, ಎಷ್ಟೋ, ಕಮರುತ್ತಿವೆ, ಭವಿಷ್ಯಗಳು, ಆಸೆಗಳೂ, ಸಾಯುತ್ತಿವೆ, ಕುಟುಂಬ, ಸಾಯುವವ, ವ್ಯಕ್ತಿಯಲ್ಲ, ಇನ್ಯಾರದ್ದೋ, ಸಾಯುತ್ತಿದ್ದಾರೆ, ಮನಸ್ಸು, ಮಮ್ಮಲ, ಮರುಗಿತು, ಚೀರುವ, ಆಯ್ಯೋ, ಬೇಡವೆಂದರೂ, ನೆನಪಾಗುತ್ತಿವೆ, ಹಲವಾರು, ಘಟನೆಗಳು, ಸಂದರ್ಭದಲ್ಲಿ, ಎದುರು, ನೋಡುತ್ತಿರುವ, ಕೊಟ್ಟಿರಬಹುದಾ, ಆತ್ಮ, ಹತ್ಯಾ, ದೋಷ, ಮಗನನ್ನು, ತಾಗದಿರಲಿ, ಹತ್ತಿರ, ಸಂಗಾತಿಯಿಲ್ಲದೆ, ನಗಲಾಗಲಿಲ್ಲ, ನಗೋಣ, ಎಂದು, ಕೊಂಡೆ, ಬರುತ್ತಿದೆ, ಇಚ್ಛಾಮರಣಿ, ಆತ್ಮಹತ್ಯೆ, ಇಚ್ಛಾ, ಮರಣಿಯಾಗು, ಮಗನೇ, ಸಂತೋಷದಿಂದ, ನನಗೊಂದು, ದಯಪಾಲಿಸಿದ, ಕ್ಷಣವನ್ನೂ, ಅನುಭವಿಸಿದವ, ಉಂಡಿದವ, ನನ್ನಪ್ಪ, ಉಳಿಸಿಕೊಂಡೆ, ಮದುವೆಯಾಗಲಿಲ್ಲ, ಎಂಥಹ, ಸಂದರ್ಭ, ಎದುರಾದರೂ, ಮದುವೆಯಾಗಲಾರೆ, ಬ್ರಹ್ಮಚಾರಿಯಾಗಿರುವೆ, ರಾಜರಾಗಲೆಂದು, ಚಿಕ್ಕಮ್ಮನಿಗಾಗಿ, ಮಗಳ, ಭವಿಷ್ಯದ, ಮತ್ಸ್ಯಗಂಧಿಯ, ಸಾಕಿತ್ತಲ್ಲವೆ, ಅಪ್ಪನ, ಮದುವೆಗಾಗಿ, ಕೌಶಲ್ಯವನ್ನು, ಸಿಂಹಾಸನದ, ರಕ್ಷಣೆಗೆ, ಮುಡಿಪಾಗಿಡುವೆ, ಬಾಹುಬಲ, ಶಕ್ತಿ, ಆಳಲಿ, ಮತ್ಸ್ಯಗಂಧಿ, ನನ್ನಮ್ಮನಾಗಿ, ಬರಲಿ, ತಾಯಿ, ಸಾಮ್ರಾಜ್ಯದ, ಸಿಂಹಾಸನವನ್ನೂ, ಏರುವದಿಲ್ಲ, ಅಪ್ಪಾ, ಚಿಂತಿಸಬೇಡ, ಕಣ್ಣು, ಕುಕ್ಕುವ, ತಾರುಣ್ಯ, ಉಕ್ಕುವ, ಯೌವ್ವನ, ಮಗನ, ವಯಸ್ಸಿನ, ಚೆಲುವೆ, ಮತ್ಸ್ಯಗಂಧಿಯಲ್ಲಿ, ಮೋಹಿತನಾಗಿದ್ದ, ಶಾಂತನು, ಮಗನಿದ್ದಾನೆ, ಎನ್ನುವದನ್ನೂ, ಮರೆತು, ಪ್ರಾಯಕ್ಕೆ, ಯಾವುದೂ, ನನಗಿಲ್ಲವಲ್ಲ, ಸಂಸಾರ, ಹೆಂಡತಿ, ಪುರುಷಾರ್ಥಕಾಗಿ, ಇಲ್ಲಿವರೆಗೆ, ಇಷ್ಟು, ಸುಧೀರ್ಘ, ಅರ್ಥವಿದೆ, ತಲೆಯಾಡಿಸಿ, ಹೋಗಿದ್ದ, ಗಂಭೀರವಾಗಿ, ನಕ್ಕು, ನನ್ನಾಸೆಗೆ, ಇಲ್ಲವೆನ್ನಲಿಲ್ಲ, ಮುಗಿದ, ಇಲ್ಲೊಮ್ಮೆ, ಬರುವೆಯಾ, ಒಂದಷ್ಟು, ಪ್ರಶ್ನೆಗಳಿವೆ, ಪಾದ, ಸೇರುವ, ನನ್ನಲ್ಲಿ, ಶ್ರೀಕೃಷ್ಣನಿಗೆ, ಮುಗಿದಿದ್ದೆ, ಅವರೆಲ್ಲ, ಅಲ್ಲಿಯ, ಇಲ್ಲೇ, ಇರುವೆ, ಉತ್ತರಾಯಣ, ಪರ್ವಕಾಲಕ್ಕಾಗಿ, ಕಾಯುತ್ತಿದ್ದೇನೆ, ರಣರಂಗದಲ್ಲಿ, ಸೋತು, ಅರಮನೆಗೆ, ಹೋಗಿಲ್ಲ, ನಿರಾಕರಿಸಿದ್ದೆ, ಇದ್ದಲ್ಲಿಗೆ, ಕರೆದೊಯ್ಯುತ್ತೇವೆ, ಭೀಷ್ಮಜ್ಜಾ, ಅಜ್ಜಾ, ಹಾಸಿಗೆಯ, ಮಲಗಿಸಿದ್ದಾನೆ, ಅರ್ಜುನ, ಸೋಲಿಸಿ, ಮೊಮ್ಮಗ, ಮಲಗಿದ್ದುದು, ಹಾಸಿಗೆಯಮೇಲೆ, ಅಸಾಧ್ಯವಾದ, ಉರಿ, ರಕ್ತ, ಹೆಪ್ಪುಗಟ್ಟಿದ, ಜಾಗದಲ್ಲಿ, ಬಿಸಿರಕ್ತ, ಬಾಣಗಳು, ಚುಚ್ಚುತ್ತಿವೆ, ಮಲಗಿದ್ದವನಿಗೆ, ಪಕ್ಕಕ್ಕೆ, ಹೊರಳಬೇಕೆನಿಸಿತು, ಒಂಟೀಯಾಗಿ, ಅನುಭವಿಸುತ್ತೀಯಾ, ಒಬ್ಬನೆ, ನೀನೊಬ್ಬನೇ, ಇರುತ್ತೀಯಾ, ಉತ್ಕಟದ, ಉತ್ಕರ್ಷದಲ್ಲಿ, ಬೇಕಾಗುವದಿಲ್ಲ, ಅತ್ಯುನ್ನತ, ಹಂತದಲ್ಲಿ, ಅವುಗಳ, ಸಂತೋಷ, ಎರಡೂ, ತತ್ವಶಾಸ್ತ್ರಜ್ಞ, ನೆನಪಾಯಿತು, ಮಲಗಿದ್ದೇನೆ, ಕುರುಕ್ಷೇತ್ರದ, ರಣರಂಗದಲ್ಲಿದ್ದೇನೆ, ಓಹ್, ನರಿಗಳು, ತೋಳಗಳು, ಊಳಿಡುವ, ವಿಕಾರ, ಸ್ವರಗಳು, ಆಗಾಗ, ಆಕಾಶದಲ್ಲಿ, ಮಿಂಚುವ, ತಾರೆಗಳು, ಎಚ್ಚರವಾದಾಗ, ಕಗ್ಗತ್ತಲೆ, ಹೊತ್ತಿನಿಂದ, ಕಣ್ಮುಚ್ಚಿದ್ದೆನೊ, ಗೊತ್ತಾಗಲಿಲ್ಲ, monday, ತಪ್ಪಿದ್ದಲ್ಲಿ, ಬೇಸರಬೇಡ, ಇರಲಿ, ಕಾಲ್ಪನಿಕ, ತಡಕಾಡುತ್ತ, ಹೊರಟೆ, ಎನ್ನುವದಿಲ್ಲ, ಹಸಿವೆ, ತಡೆಯಲಾಗುತ್ತಿಲ್ಲ, ಹಸಿವೆಯಾಗುತ್ತಿದೆ, ಕತ್ತಲೆಗಳ, ಬಗೆಗಲ್ಲ, ಕೇಳಿದ್ದು, ರಾತ್ರಿಯಾದರೇನು, ಕತ್ತಲೆಯ, ಹಗಲಾದರೇನು, ನಿಟ್ಟುಸಿರು, ಅವನಿಗೂ, ಕೇಳಿಸಿರಬೇಕು, ಶುರುವಾಯಿತಾ, ಮುಗಿಯಿತಾ, ಹಗಲು, ಬರುತ್ತಲೆ, ಬಂದರು, ಕಾಣುತ್ತದೆ, ವಿಧುರ, ಅಷ್ಟರಲ್ಲಿ, ಏನೋ, ಇವೆಲ್ಲ, ಸಮಾಜದ, ಪ್ರಶಸ್ತಿಗಳು, ಅಲ್ಲವಾ, ಬದುಕಿದವರೆಲ್ಲ, ಪತಿವ್ರತಾ, ಶಿರೋಮಣಿಗಳು, ಪತಿಯ, ದೌರ್ಬಲ್ಯಗಳ, ಅನಾಥವಾಗಿ, ಕಾಡಿನಲ್ಲಿ, ತುಂಬು, ಅವನು, ಶ್ರೀರಾಮಚಂದ್ರ, ಪತ್ನಿ, ವ್ರತಸ್ಥನಿದ್ದ, ಒಬ್ಬನೇ, ವ್ರತಗಳೆಲ್ಲ, ಹೆಂಗಸರಿಗೆ, ಶಿಷ್ಠಾಚಾರ, ನೀತಿ, ನಿಯಮಗಳು, ಸಮಾಜದಲ್ಲಿ, ಹೊತ್ತು, ಸುಮ್ಮನಿದ್ದೆ, ಪತಿವೃತಾ, ಶಿರೋಮಣಿಗಳಲ್ಲಿ, ಒಬ್ಬಳು, ಬಟ್ಟೆಕಟ್ಟಿಕೊಂಡು, ಇರಬೇಕು, ಅಥವಾ, ಬಾಯಿ, ಮುಚ್ಚಿಕೊಂಡು, ಸುಮ್ಮನಿರಬೇಕು, ಕಣ್ಣಿದ್ದು, ದೌರ್ಬಲ್ಯದ, ಬದುಕುವಾಗ, ಅಸಹಾಯಕ, ಮಹರಾಜ, ಅನುಭವಿಸಲಾಗದ, ನೋಡಿಯೂ, ಕಣ್ಣಿದ್ದೂ, ಇನ್ನೊಬ್ಬ, ಕಣ್ಣಿಲ್ಲದೆ, ಇಲ್ಲಿನ, ಗಂಡಸರೆಲ್ಲ, ಬಹುಷಃ, ಎರಡು, ಜಾತಿ, ಮಾನಸಿಕವಾಗಿ, ಇದ್ದಲ್ಲಿ, ಅಂಗವಿಕಲತೆ, ಕೀಳರಮೆ, ಕುರುಡನಿಗೂ, ವ್ಯಥೆ, ಕೊರಡಿನ, ಪ್ರಣಯ, ಹೇಗಿರಲು, ಸಾಧ್ಯ, ಮಲಗುವ, ಮಂಚದ, ಎಲ್ಲಿತ್ತು, ಪ್ರಣಯದ, ಸರಸ, ಸಲ್ಲಾಪ, ಅಂದದ, ವರ್ಣನೆಯ, ಮಾತಿನ, ದಾಂಪತ್ಯಕ್ಕೊಂದು, ಬಲಿಷ್ಠನಾಗಿದ್ದ, ಬೆತ್ತಲೆಯಾಗುತ್ತಿದ್ದೆ, ಭಾವನೆಗಳನ್ನು, ಹಂಚಿಕೊಳ್ಳುವ, ಅವಕಾಶವೂ, ಇಲ್ಲದೇ, ಮುಕ್ತವಾಗಿ, ಅದಕ್ಕೂ, ಅವಕಾಶವಿಲ್ಲವಾಗಿತ್ತು, ಕೀಳರಮೆಯಿಂದಾಗಿ, ಬೆತ್ತಲೆಯಾಗೋಣ, ಕೀಳರಿಮೆ, ಕಾಡುತ್ತದೆ, ಅಶಕ್ತತೆಯೂ, ಇರುತ್ತದೆ, ಅಶಕ್ತತೆ, ಅಬಲಿಷ್ಠ, ಗಂಡಸರ, ದೌರ್ಬಲ್ಯ, ಮೃತ್ಯು, ಕಾಯುತ್ತಿತ್ತು, ಅಣಿಯಾದರೆ, ಶಾಪದ, ಆರೋಗ್ಯದ, ಸ್ಥಿತಿ, ಅವನಿಂದ, ನನ್ನಲ್ಲೂ, ಬೆವರಿನ, ಹನಿ, ಹುಟ್ಟಿಸಬೇಕಿತ್ತು, ಬೆವರು, ಹರಿಯಬೇಕು, ಕತ್ತಲ, ನಾಚಿದರೆ, ತಣಿಯುವುದೆ, ನೋಡಿದರೆ, ಸಿಗುವದಿಲ್ಲ, ಬೆತ್ತಲೆಯಾದರೇನು, ನೋಡುವ, ಭೋರ್ಗರೆಯುತ್ತಿದ್ದನಲ್ಲ, ಬೆತ್ತಲೆಯ, ನಾಚಿಕೆಯ, ಸಿಗುತ್ತಿತ್ತು, ಬೆತ್ತಲೆಯಾಗುವ, ಬೆತ್ತಲೆಯಾಗುವದೂ, ಎದುರಲ್ಲಿ, ಜನ್ಮಕ್ಕೆ, ಸುಖಿಸುವ, ನೋಟವನ್ನು, ಆಸೆಯ, ನಿನ್ನಂದವನ್ನು, ಸುಖಿಸುತ್ತಿದ್ದ, ಗಂಡನಿಗೆ, ಕಣ್ಣಿತ್ತು, ಹೇಳುತ್ತೀಯಾ, ಮತ್ತೊಮ್ಮೆ, ಕೇಳಿಸಿತು, ಹೆಚ್ಚು, ನೋಡಿದ್ದೀಯಾ, ನನಗಿಂತ, ಭಾಗ್ಯವಂತೆ, ಏನೇ, ಹೇಳು, ಈಗೆಲ್ಲ, ಅದರ, ಮಾತನಾಡುವದು, ವ್ಯರ್ಥವಲ್ಲವೆ, ಆಗಬೇಕಿತ್ತೋ, ಸಾಧ್ಯವಾದಲ್ಲಿ, ಕ್ಷಮಿಸು, ನೆನಪಾದರೆ, ಬರುತ್ತದೆ, ಮೊದಲೆಲ್ಲ, ಅಸೂಯೆ, ಕಂಡರೆ, ಬಾಚಲು, ಮಾಡಿ, ಕೂದಲು, ಒಣಗಿಸಿಕೊಳ್ಳುತ್ತಿದ್ದೆ, ಕಾನನದಲ್ಲೊಂದು, ಕುಟೀರದಲ್ಲಿ, ನಾವಿರತೊಡಗಿದೆವು, ದಟ್ಟ, ವಿಧುರನೂ, ಜೊತೆಯಾದ, ನಮ್ಮೊಡನೆ, ಕುಂತಿಯೂ, ಹೊರಟಳು, ನಾಡಾದರೇನು, ವನವಾದರೇನು, ಎಲ್ಲವನ್ನೂ, ಕಳೆದುಕೊಂಡ, ಉಳಿದ, ಕಳೆಯೋಣ, ವಾನಪ್ರಸ್ಥ, ಹೋಗೋಣ, ನಮ್ಮದಲ್ಲದ, ರಾಜ್ಯದಲ್ಲಿ, ನಾವಿರಬಾರದು, ಇಲ್ಲಿಲ್ಲ, ಇದ್ದಕ್ಕಿದ್ದಂತೆ, ಬದುಕೆಲ್ಲ, ಹೋಗಿತ್ತು, ತಡಕಾಡುತ್ತಲೆ, ಬೆಳಕಿಗೆ, ಓಡಿಸುವ, ತಬ್ಬಿಕೊಳ್ಳುವ, ಕತ್ತಲಿಗೆ, ಕತ್ತಲಾಗಿತ್ತು, ನಾನಂತೂ, ಕಟ್ಟಿಕೊಂಡಿದ್ದೆ, ನಡೆಸಿಕೊಳ್ಳುತ್ತಿದ್ದಾರೆ, ನಮಗೆ, ಗೌರವ, ಕೊಟ್ಟು, ಪಾಂಡವರು, ರಾಜರಾಗಿದ್ದಾರೆ, ಇದೀಗ, ಎಣಿಕೆಯಂತೆ, ಮಕ್ಕಳನ್ನೆಲ್ಲ, ಸಂಹರಿಸಿಬಿಟ್ಟ, ಅಧಿಕಾರಕ್ಕಾಗಿ, ಸಾಕ್ಷಿಯಾಗಿಬಿಟ್ಟರು, ದಂಡಿಸುವ, ಅಪ್ಪನಿಲ್ಲದಿದ್ದರೆ, ಏನಾಗುತ್ತದೆ, ಎನ್ನುವದಕ್ಕೆ, ಹಿಡಿದು, ಸ್ವಭಾವದಲ್ಲೂ, ಕುರುಡಾಗಿಬಿಟ್ಟರು, ದೊಡ್ಡವರಾದರು, ಮಕ್ಕಳಾದರು, ಮರಿಚಿಕೆಯಾಗಿತ್ತು, ನನ್ನಂದದ, ಹೊಗಳುವ, ಸಲ್ಲಾಪಗಳು, ಶೃಂಗಾರದ, ಮಾತುಗಳು, ರಮಿಸುವ, ನಡೆವ, ಹುಡುಕಾಟ, ಮಕ್ಕಳಾಟದಂತಿತ್ತು, ಇಬ್ಬರ, ಅವನಾಸೆಯಲ್ಲೂ, ಕುರುಡುತನ, ಕಣ್ಣುಗಳಷ್ಟೇ, ಕರೆಯುತ್ತಿದ್ದ, ಬೇಕಾದಾಗ, ದೇಹಕ್ಕೆ, ಪತಿಯದಾಗಿರಲಿಲ್ಲ, ಹಗಲೆಲ್ಲ, ಇನ್ಯಾರಿಗೆ, ಶೃಂಗರಿಸಿಕೊಳ್ಳಲಿ, ಅನುಭವಿಸಲಾರ, ನೋಡಿಕೊಳ್ಳಲಾಗದ, ನನ್ನದು, ಒಹ್, ಮೂಗಿಗೆ, ದೊಡ್ಡದಾದ, ನತ್ತು, ಕುತ್ತಿಗೆಗೆ, ಮುತ್ತಿನ, ಹಾರ, ಕುಪ್ಪುಸ, ಅಂಚು, ಹಸಿರು, ಸೀರೆಗೆ, ಅದರಲ್ಲೂ, ಶೃಂಗರಿಸಿಕೊಳ್ಳುವದೆಂದರೆ, ನನಗೆಲ್ಲಿಲ್ಲದ, ಮೊದಲಿನ, ಶೃಂಗಾರ, ಮಾಡಿಕೊಡಲು, ಹೇಳುತ್ತಿದ್ದೆ, ಸಖಿಯರಿಗೆ, ಶುರುವಿನಲ್ಲಿ, ಅಮ್ಮನ, ರಾತ್ರಿಗಳ, ಬೆಳಕಿರುವದಿಲ್ಲ, ಏಕಾಂತದ, ದಂಪತಿಗಳ, ಧೈರ್ಯವಾಗಿರು, ದಾಂಪತ್ಯವೂ, ಪ್ರೀತಿ, ಅನ್ನುತ್ತಾರೆ, ನೋಟವೂ, ಪ್ರೀತಿಗೆ, ಕುರುಡರಿಗೆ, ಸ್ಪರ್ಷದಲ್ಲೇ, ಕಣ್ಣಿರುತ್ತದಂತೆ, ಸ್ಪರ್ಷದಲ್ಲಾದರೂ, ಸಿಗುತ್ತದೆ, ಸಿಗದಿದ್ದರೂ, ಕಣ್ಣಿನಲ್ಲಿ, ತೊಂದರೆ, ಇನ್ನಿಲ್ಲ, ದಿಟ್ಟಿಸುವ, ನೋಟಗಳಿಗೆ, ಹೆದರುತ್ತಿದ್ದೆಯಲ್ಲ, ಬಿಗಿದಪ್ಪಿ, ಅತ್ತಿದ್ದಳು, ಹಸ್ತಿನಾವತಿಗೆ, ಶಾಸ್ತ್ರವೆಲ್ಲ, ಮುಗಿದು, ಸೇವೆ, ಮಾಡಿಸಿಕೊಳ್ಳುವ, ಭಾಗ್ಯವಾದರೂ, ಸಿಕ್ಕಿತಲ್ಲ, ರಾಣಿಯಾಗಿ, ಪೂರ್ತಿಯಾಗಿ, ಕುರುಡಾಗಲಿಲ್ಲ, ಕಟ್ಟಿಕೊಂಡರೂ, ರಾಣಿ, ಸುಖವನ್ನಾದರೂ, ಕುತಂತ್ರ, ಇದಲ್ಲವೆ, ಬಾಳುವದಕ್ಕಿಂತ, ಕಟ್ಟಿಕೊಂಡು, ಗುಲಾಮಗಿರಿ, ಅಘೋಷಿತ, ದಾಸಿಯಾಗಿ, ಜೀವನ, ಹುಟ್ಟುಕುರುಡನ, ಮಡದಿಯಾಗಿ, ಬುದ್ಧಿವಂತೆ, ಚಾಣಾಕ್ಷೆ, ತಮ್ಮ, ಶಕುನಿ, ಗೊತ್ತಲ್ಲ, ಕ್ರಿಯೆಯ, ಹಿಂದಿನ, ಮನಸ್ಸನ್ನು, ಅರ್ಥ, ಮಾಡಿಕೊಳ್ಳುವದಿಲ್ಲ, ಕಾರ್ಯವನ್ನು, ಏನಾದರೂ, ಹೇಳುತ್ತದೆ, ಲೋಕವೇ, ಪಟ್ಟ, ಆಕಾಶದಿಂದ, ಪುಷ್ಪ, ವೃಷ್ಠಿಯಾಯಿತು, ಹರ್ಷೋಧ್ಗಾರ, ಮಾಡಿತು, ಲೋಕವೆಲ್ಲ, ಕೊಂಡಾಡಿತು, ಕಟ್ಟಿಕೊಂಡೇ, ಬಾಳ, ಸಂಗಾತಿಯಾಗುವೆ, ಆಜೀವ, ಕುರುಡಿಯಾಗಿಯೇ, ಬದುಕುವೆ, ಘೋರ, ಬೆಳಕಿನ, ನನಗೇಕೆ, ಪತಿಗಿರದ, ರಂಗು, ರಂಗಿನ, ಕನಸುಗಳನ್ನು, ಕಾಣದವನ, ಮಡದಿಯಾದೆ, ಬಣ್ಣಗಳನ್ನು, ನೋಡದವ, ಜಗತ್ತು, ತಲೆಬಾಗುತ್ತದೆ, ಬಲಶಾಲಿಗಳ, ಸೊಕ್ಕಿಗೆ, ಶಕ್ತಿವಂತರ, ಗಾಂಧಾರ, ದೇಶವನ್ನು, ಸರ್ವ, ನಾಶ, ಮಾಡಿಬಿಡುವೆ, ಇಲ್ಲವಾದಲ್ಲಿ, ಧೃತರಾಷ್ಟ್ರನಿಗೆ, ಮಾಡಿಕೊಡಿ, ಮಗಳು, ಗಾಂಧಾರಿಯನ್ನು, ಪತ್ರವೊಂದನ್ನು, ಬರೆದು, ಕಳುಹಿಸಿದ್ದ, ನನ್ನಪ್ಪನಿಗೆ, ಭೀಷ್ಮ, ವೃದ್ಧ, ಹಸ್ತಿನಾವತಿ, ಪುರದ, ಕದಡುತ್ತವೆ, ಹೊತ್ತುಗೊತ್ತು, ಒಂದೂ, ನೆನಪುಗಳಿಗೇನು, ನೆನಪಿದೆ, ಅಂದಿನ, ಹುಚ್ಚು, ಬಣ್ಣಗಳು, ಅವು, ಸಮಾಧಾನ, ಕನಸುಗಳಿಗೆ, ಅರ್ಥವಿಲ್ಲ, ಅಳುತ್ತಿರುವಂತೆಯೇ, ಎಚ್ಚರವಾಗುತ್ತಿತ್ತು, ಸಣ್ಣಕೆ, ಬಿಕ್ಕಳಿಕೆಯ, ಕೆನ್ನೆಗೆ, ತುಸು, ಅನುಭವ, ಕಣ್ಣ, ಹನಿಗಳು, ಇಳಿದು, ಹೋಗುವಾಗ, ಹನಿಗಳ, ಮಳೆಯ, ಅಳುತ್ತ, ನಿಂತಿರುತ್ತಿದ್ದೆ, ಬೀಳುವ, ಮಳೆಯಲ್ಲಿ, ಕೊಡುವಷ್ಟರಲ್ಲಿ, ಆತನ, ಕುದುರೆ, ಓಡಿಹೋಗಿಬಿಡುತ್ತಿತ್ತು, ನನ್ನತ್ತ, ಕೈಚಾಚುತ್ತಿದ್ದ, ಕರೆದೊಯ್ಯಲು, ಬರುತ್ತಿದ್ದ, ಬಿಳಿ, ಕುದುರೆಯೇರಿ, ರಾಜಕುಮಾರ, ಅಸ್ಪಷ್ಟವಾದ, ಬಲು, ವಿಚಿತ್ರವಾಗಿರುತ್ತಿದ್ದವು, ಪಡುತ್ತಿದ್ದೆ, ಸಂಭ್ರಮಿಸುತ್ತಿದ್ದೆ, ನನ್ನಂದ, ನೋಡಿಕೊಂಡು, ನನ್ನಷ್ಟಕ್ಕೇ, ಕನ್ನಡಿಯಲ್ಲಿ, ಸುತ್ತಲೂ, ನೋಡಿಕೊಳ್ಳುತ್ತಿದ್ದೇನೋ, ನಗ್ನವಾಗಿ, ಒಬ್ಬಳೇ, ಅದೆಷ್ಟು, ಬಾರಿ, ಕಣ್ಣುಗಳ, ಕವನವನ್ನೇ, ಹೇಳಿದ್ದ, ಕವಿಯೊಬ್ಬ, ನನ್ನಪ್ಪನ, ನಿನ್ನಂದ, ಕಂಡು, ಹೊಟ್ಟೆಕಿಚ್ಚು, ಆಗುತ್ತಿದೆ, ಮಗಳಾದರೂ, ತೆಗೆದುಕೊಂಡು, ಸೃಷ್ಟಿಸಿದನೋ, ದೇವರು, ಮದುವೆಯಾಗುವವ, ಪುಣ್ಯ, ಮಾಡಿರಬೇಕು, ನನ್ನಮ್ಮನೂ, ಕಿವಿಯಲ್ಲಿ, ಉಸುರುತ್ತಿದ್ದರು, ಗೊತ್ತಿತ್ತು, ಚಂದವಿದ್ದೇನೆ, ಕನಸಿನಲ್ಲಿ, ಬಣ್ಣಗಳಿದ್ದವು, ಕಂಡಿದ್ದೆ, ಅರ್ಥವಾಗುವ, ಹೊತ್ತಿಗೆ, ಮದುವೆಯಾಗಿತ್ತು, ಸ್ಪಂದಿಸುವ, ಶೂನ್ಯವಾಗಿ, ಭಾವನೆಗಳಿಲ್ಲದೆ, ಜಿಂಕೆಮರಿಗೆ, ಆಗುತ್ತದೆ, ಭಾವನೆ, ನೋಟಕ್ಕೊಂದು, ಹೊಟ್ಟೆ, ನಕ್ಕುಬಿಟ್ಟಳು, ಮೊದಲು, ಇಲ್ಲಿಂದ, ಓಡಿಸು, ಜಿಂಕೆಮರಿ, ದಿಟ್ಟಿಸುತ್ತಿದೆ, ಅಮ್ಮಾ, ಕಷ್ಟಪಟ್ಟು, ಎದೆಯ, ಭಾಗವನ್ನು, ಮುಚ್ಚಿಕೊಳ್ಳುತ್ತಿದ್ದೆ, ಅಮ್ಮನಾದರೂ, ಬಂದವಳು, ಏನಾಯ್ತು, ಪಕ್ಕದಲ್ಲಿದ್ದ, ಗಾಬರಿಯಿಂದ, ಓಡೋಡಿ, ಅಲ್ಲೆ, ಜಿಂಕೆ, ಮರಿಯೊಂದು, ದಿಟ್ಟಿಸುತ್ತಿತ್ತು, ಕಿಟಾರನೆ, ಕಿರುಚಿದೆ, ಕೊಳದಲ್ಲಿ, ಮುಳುಗೆದ್ದು, ಉಜ್ಜಿಕೊಂಡು, ತೆಳು, ವಸ್ತ್ರವನ್ನು, ಸುತ್ತಿಕೊಂಡಿದ್ದೆ, ಬಿಳಿಬಣ್ಣದ, ಪಕ್ಕದಲ್ಲಿ, ಇಟ್ಟು, ಬಟ್ಟೆಯಲ್ಲವನ್ನೂ, ಬಿಚ್ಚಿ, ಅರಮನೆಯ, ಈಜುಕೊಳದ, ಪಕ್ಕದಲ್ಲಿರುವ, ಕೊಳಕ್ಕೆ, ಸ್ನಾನಕ್ಕೆ, ಹೋಗಿದ್ದೆ, ಮುಗಿಸುವದಕ್ಕೆ, ಬೇಕಾಗಿತ್ತು, ಮಾಡುವದೆಂದರೆ, ಎಲ್ಲಿಲ್ಲದ, ಆಗಿಲ್ಲವಾಗಿತ್ತು, ಆಗಿನ್ನೂ, wednesday, ಕೂಡಿ, ಕಟ್ಟುವ, ತರಹ, ಕಥೆಗಳು,
Text of the page (random words):
ಲ್ಲ ಕಳೆದು ಹೋಗಿತ್ತು ಇದ್ದಕ್ಕಿದ್ದಂತೆ ಧೃತರಾಷ್ಟ್ರ ಗಾಂಧಾರಿ ನಮ್ಮ ಮಕ್ಕಳೂ ಇಲ್ಲಿಲ್ಲ ನಮ್ಮದಲ್ಲದ ಈ ರಾಜ್ಯದಲ್ಲಿ ನಾವಿರಬಾರದು ವಾನಪ್ರಸ್ಥ ಹೋಗೋಣ ನಮ್ಮ ಉಳಿದ ಬದುಕನ್ನು ಅಲ್ಲಿ ಕಳೆಯೋಣ ಎಲ್ಲವನ್ನೂ ಕಳೆದುಕೊಂಡ ಕುರುಡು ಬದುಕಿಗೆ ವನವಾದರೇನು ನಾಡಾದರೇನು ನಮ್ಮೊಡನೆ ಕುಂತಿಯೂ ಹೊರಟಳು ವಿಧುರನೂ ಜೊತೆಯಾದ ದಟ್ಟ ಕಾನನದಲ್ಲೊಂದು ಪುಟ್ಟ ಕುಟೀರದಲ್ಲಿ ನಾವಿರತೊಡಗಿದೆವು ಅದೊಂದು ದಿನ ನಾನು ಸ್ನಾನ ಮಾಡಿ ಬಂದು ಕೂದಲು ಒಣಗಿಸಿಕೊಳ್ಳುತ್ತಿದ್ದೆ ಕುಂತಿ ನನ್ನ ತಲೆ ಬಾಚಲು ಬಂದಳು ಕುಂತಿ ನಿನ್ನನ್ನು ಕಂಡರೆ ನನಗೆ ಮೊದಲೆಲ್ಲ ಎಷ್ಟೆಲ್ಲ ಅಸೂಯೆ ಇತ್ತು ಅದೆಲ್ಲ ನೆನಪಾದರೆ ಈಗ ನಗು ಬರುತ್ತದೆ ಸಾಧ್ಯವಾದಲ್ಲಿ ನನ್ನನ್ನು ಕ್ಷಮಿಸು ಕುಂತಿ ನಕ್ಕಳು ಗಾಂಧಾರಿ ಏನು ಆಗಬೇಕಿತ್ತೋ ಅದೆಲ್ಲ ಆಗಿ ಹೋಯಿತು ಈಗೆಲ್ಲ ಅದರ ಬಗೆಗೆ ಮಾತನಾಡುವದು ವ್ಯರ್ಥವಲ್ಲವೆ ಕುಂತಿ ಏನೇ ಹೇಳು ನೀನು ನನಗಿಂತ ಭಾಗ್ಯವಂತೆ ಬದುಕಿನಲ್ಲಿ ಹೆಚ್ಚು ಸುಖ ನೋಡಿದ್ದೀಯಾ ಕುಂತಿ ಮತ್ತೊಮ್ಮೆ ನಕ್ಕ ಸದ್ಧು ನನಗೆ ಕೇಳಿಸಿತು ಅದು ಹೇಗೆ ಹೇಳುತ್ತೀಯಾ ನೋಡು ನಿನ್ನ ಗಂಡನಿಗೆ ಕಣ್ಣಿತ್ತು ನಿನ್ನಂದವನ್ನು ನೋಡಿ ಸುಖಿಸುತ್ತಿದ್ದ ಅವನ ಆಸೆಯ ನೋಟವನ್ನು ಸುಖಿಸುವ ಭಾಗ್ಯ ನಿನಗಿತ್ತು ಹೆಣ್ಣಿನ ಜನ್ಮಕ್ಕೆ ಗಂಡಿನ ಎದುರಲ್ಲಿ ಬೆತ್ತಲೆಯಾಗುವದೂ ಕೂಡ ಒಂದು ಸುಖ ಬೆತ್ತಲೆಯಾಗುವ ಖುಷಿ ಆ ನಾಚಿಕೆಯ ಸುಖ ನಿನಗೆ ಸಿಗುತ್ತಿತ್ತು ನಿನ್ನ ಬೆತ್ತಲೆಯ ಅಂದವನ್ನು ಆತ ನೋಡಿ ಭೋರ್ಗರೆಯುತ್ತಿದ್ದನಲ್ಲ ಅದನ್ನು ನೋಡುವ ಸುಖ ನಿನಗಿತ್ತು ಗಾಂಧಾರಿ ಎಷ್ಟು ಬೆತ್ತಲೆಯಾದರೇನು ನೋಡಿದರೆ ಸುಖ ಸಿಗುವದಿಲ್ಲ ನಾನು ನಾಚಿದರೆ ದೇಹದ ಆಸೆ ತಣಿಯುವುದೆ ಪ್ರೀತಿಯ ಕತ್ತಲ ದಾಂಪತ್ಯದಲ್ಲಿ ಬೆವರು ಹರಿಯಬೇಕು ನನ್ನಲ್ಲೂ ಬೆವರಿನ ಹನಿ ಹುಟ್ಟಿಸಬೇಕಿತ್ತು ಅದು ಅವನಿಂದ ಆಗಲಿಲ್ಲ ಅವನ ಆರೋಗ್ಯದ ಸ್ಥಿತಿ ಅವನ ಶಾಪದ ವಿಷಯ ಗೊತ್ತಲ್ಲವೆ ಆತ ಪ್ರಣಯಕ್ಕೆ ಅಣಿಯಾದರೆ ಅವನ ಮೃತ್ಯು ಅವನಿಗಾಗಿ ಕಾಯುತ್ತಿತ್ತು ಅಬಲಿಷ್ಠ ಗಂಡಸರ ಒಂದು ದೌರ್ಬಲ್ಯ ಏನು ಗೊತ್ತಾ ಅವರಿಗೆ ದೈಹಿಕ ಅಶಕ್ತತೆ ಒಂದೇ ಅಲ್ಲ ಮಾನಸಿಕ ಅಶಕ್ತತೆಯೂ ಇರುತ್ತದೆ ಬದುಕಿನುದ್ದಕ್ಕೂ ಕೀಳರಿಮೆ ಅವರಿಗೆ ಕಾಡುತ್ತದೆ ನಾನು ಮಾನಸಿಕವಾಗಿಯಾದರೂ ಬೆತ್ತಲೆಯಾಗೋಣ ಅಂದರೆ ಅವರ ಕೀಳರಮೆಯಿಂದಾಗಿ ಅದಕ್ಕೂ ಅವಕಾಶವಿಲ್ಲವಾಗಿತ್ತು ಮುಕ್ತವಾಗಿ ಭಾವನೆಗಳನ್ನು ಹಂಚಿಕೊಳ್ಳುವ ಅವಕಾಶವೂ ಇಲ್ಲದೇ ಹೋಯ್ತು ನೀನು ಮಾನಸಿಕವಾಗಿಯಾದರೂ ಬೆತ್ತಲೆಯಾಗುತ್ತಿದ್ದೆ ಅಲ್ಲವೆ ನನಗೆ ಆದ ಹಾಗಲ್ಲ ನಿನಗೆ ಧೃತರಾಷ್ಟ್ರ ಬಲಿಷ್ಠನಾಗಿದ್ದ ಅಲ್ಲವೆ ನನಗೂ ನಗು ಬಂತು ದಾಂಪತ್ಯಕ್ಕೊಂದು ಮಾತಿನ ಅಂದದ ವರ್ಣನೆಯ ಪ್ರಣಯದ ಸೊಗಸು ಬೇಕು ಸರಸ ಸಲ್ಲಾಪ ಬೇಕು ನಮ್ಮ ಪ್ರಣಯಕ್ಕೆ ಸಂವೇದನೆ ಎಲ್ಲಿತ್ತು ಮಲಗುವ ಮಂಚದ ಮರದ ಕೊರಡಿನ ಜೊತೆ ಪ್ರಣಯ ಹೇಗಿರಲು ಸಾಧ್ಯ ಕುರುಡನಿಗೂ ಮಾನಸಿಕ ವ್ಯಥೆ ಇತ್ತು ಕೀಳರಮೆ ಇತ್ತು ಅಂಗವಿಕಲತೆ ಮಾನಸಿಕವಾಗಿ ಇದ್ದಲ್ಲಿ ಬದುಕು ಬಹಳ ಕಷ್ಟ ಕುಂತಿ ಈಗ ಜೋರಾಗಿ ನಕ್ಕಳು ನೋಡು ಗಾಂಧಾರಿ ಇಲ್ಲಿನ ಗಂಡಸರೆಲ್ಲ ದಾಂಪತ್ಯದಲ್ಲಿ ಬಹುಷಃ ಎರಡು ಜಾತಿ ಒಬ್ಬ ಕಣ್ಣಿಲ್ಲದೆ ಅಂದವನ್ನು ಭೋಗಿಸಲಾಗದ ಕುರುಡು ಧೃತರಾಷ್ಟ್ರ ಇನ್ನೊಬ್ಬ ಕಣ್ಣಿದ್ದೂ ಅಂದವನ್ನು ನೋಡಿಯೂ ಅನುಭವಿಸಲಾಗದ ಭೋಗಿಸಲಾಗದ ಅಸಹಾಯಕ ಪಾಂಡು ಮಹರಾಜ ನನಗೂ ನಗು ಬಂತು ಅದು ಹಾಗಲ್ಲ ದಾಂಪತ್ಯದಲ್ಲಿ ದೌರ್ಬಲ್ಯದ ಜೊತೆ ಬದುಕುವಾಗ ನಿನ್ನ ಹಾಗೆ ಕಣ್ಣಿದ್ದು ಬಾಯಿ ಮುಚ್ಚಿಕೊಂಡು ಸುಮ್ಮನಿರಬೇಕು ಅಥವಾ ನನ್ನ ಹಾಗೆ ಕಣ್ಣಿಗೆ ಬಟ್ಟೆಕಟ್ಟಿಕೊಂಡು ಕತ್ತಲಲ್ಲಿ ಇರಬೇಕು ಗಾಂಧಾರಿ ನೀನು ಪತಿವೃತಾ ಶಿರೋಮಣಿಗಳಲ್ಲಿ ಒಬ್ಬಳು ಅಲ್ಲವೆ ನಾನು ಸ್ವಲ್ಪ ಹೊತ್ತು ಸುಮ್ಮನಿದ್ದೆ ಕುಂತಿ ಸಮಾಜದಲ್ಲಿ ದಾಂಪತ್ಯದ ಕುರಿತು ಶಿಷ್ಠಾಚಾರ ನೀತಿ ನಿಯಮಗಳು ವ್ರತಗಳೆಲ್ಲ ಹೆಂಗಸರಿಗೆ ಮಾತ್ರ ಈ ಜಗತ್ತಿನಲ್ಲಿ ಒಬ್ಬನೇ ಒಬ್ಬ ಏಕ ಪತ್ನಿ ವ್ರತಸ್ಥನಿದ್ದ ಅವನು ಶ್ರೀರಾಮಚಂದ್ರ ಆತ ತುಂಬು ಬಸುರಿ ಮಡದಿಯನ್ನು ಅನಾಥವಾಗಿ ಕಾಡಿನಲ್ಲಿ ಒಂಟಿಯಾಗಿ ಬಿಟ್ಟು ಬಂದ ಪತ್ನಿಯಾಗಿ ಪತಿಯ ದೌರ್ಬಲ್ಯಗಳ ಜೊತೆ ಮೌನವಾಗಿ ಬದುಕಿದವರೆಲ್ಲ ಪತಿವ್ರತಾ ಶಿರೋಮಣಿಗಳು ಇವೆಲ್ಲ ಗಂಡು ಸಮಾಜದ ಪ್ರಶಸ್ತಿಗಳು ಅಲ್ಲವಾ ಕುಂತಿ ಮಾತನಾಡಲಿಲ್ಲ ಅಷ್ಟರಲ್ಲಿ ಏನೋ ಸದ್ಧು ವಿಧುರ ಮತ್ತು ಧೃತರಾಷ್ಟ್ರ ಬಂದರು ಅಂತ ಕಾಣುತ್ತದೆ ಧೃತರಾಷ್ಟ್ರ ಒಳಗೆ ಬರುತ್ತಲೆ ಕೇಳಿದ ಹಗಲು ಮುಗಿಯಿತಾ ರಾತ್ರಿ ಶುರುವಾಯಿತಾ ನನ್ನ ನಿಟ್ಟುಸಿರು ಅವನಿಗೂ ಕೇಳಿಸಿರಬೇಕು ಧೃತರಾಷ್ಟ್ರ ಕುರುಡು ಕತ್ತಲೆಯ ಬದುಕಿಗೆ ಹಗಲಾದರೇನು ರಾತ್ರಿಯಾದರೇನು ಎಲ್ಲ ಒಂದೇ ಅಲ್ಲವೆ ಧೃತರಾಷ್ಟ್ರ ಮತ್ತೆ ಹೇಳಿದ ನಾನು ಕೇಳಿದ್ದು ಬೆಳಕು ಕತ್ತಲೆಗಳ ಬಗೆಗಲ್ಲ ನನಗೆ ಹಸಿವೆಯಾಗುತ್ತಿದೆ ಅಸಾಧ್ಯ ಹಸಿವೆ ತಡೆಯಲಾಗುತ್ತಿಲ್ಲ ಹಸಿವೆಗೆ ಮಾತ್ರ ಕತ್ತಲೆ ಬೆಳಕು ಎನ್ನುವದಿಲ್ಲ ನೋಡು ನಾನು ಅಲ್ಲಿಂದ ಎದ್ದು ತಡಕಾಡುತ್ತ ಒಳಗೆ ಹೊರಟೆ ಇದು ಕಾಲ್ಪನಿಕ ತಪ್ಪಿದ್ದಲ್ಲಿ ಬೇಸರಬೇಡ ಕ್ಷಮೆ ಇರಲಿ ದಯವಿಟ್ಟು ಪ್ರತಿಕ್ರಿಯೆಗಳನ್ನೂ ಓದಿ posted by ittigecement at 1 50 pm 37 comments monday march 16 2015 ವೈರುಧ್ಯ ಎಷ್ಟು ಹೊತ್ತಿನಿಂದ ಕಣ್ಮುಚ್ಚಿದ್ದೆನೊ ಗೊತ್ತಾಗಲಿಲ್ಲ ಎಚ್ಚರವಾದಾಗ ಕಗ್ಗತ್ತಲೆ ಆಕಾಶದಲ್ಲಿ ಮಿಂಚುವ ತಾರೆಗಳು ಅಸಾಧ್ಯ ನೋವು ಆಗಾಗ ನರಿಗಳು ತೋಳಗಳು ಊಳಿಡುವ ವಿಕಾರ ಸ್ವರಗಳು ಓಹ್ ನಾನು ಕುರುಕ್ಷೇತ್ರದ ರಣರಂಗದಲ್ಲಿದ್ದೇನೆ ಒಂಟಿಯಾಗಿ ಮಲಗಿದ್ದೇನೆ ಯಾರೋ ತತ್ವಶಾಸ್ತ್ರಜ್ಞ ಹೇಳಿದ ಮಾತು ನೆನಪಾಯಿತು ನೋವು ಸಂತೋಷ ಎರಡೂ ಒಂದೇ ಅವುಗಳ ಅತ್ಯುನ್ನತ ಹಂತದಲ್ಲಿ ಉತ್ಕಟದ ಉತ್ಕರ್ಷದಲ್ಲಿ ಯಾರೂ ಬೇಕಾಗುವದಿಲ್ಲ ನೀನೊಬ್ಬನೇ ಇರುತ್ತೀಯಾ ಒಬ್ಬನೆ ಒಂಟೀಯಾಗಿ ಅನುಭವಿಸುತ್ತೀಯಾ ಮಲಗಿದ್ದವನಿಗೆ ಪಕ್ಕಕ್ಕೆ ಹೊರಳಬೇಕೆನಿಸಿತು ಆಗಲಿಲ್ಲ ಬಾಣಗಳು ಚುಚ್ಚುತ್ತಿವೆ ರಕ್ತ ಹೆಪ್ಪುಗಟ್ಟಿದ ಜಾಗದಲ್ಲಿ ಮತ್ತೆ ಬಿಸಿರಕ್ತ ಒಸರುತ್ತಿದೆ ಅಸಾಧ್ಯವಾದ ಉರಿ ನೋವು ನಾನು ಮಲಗಿದ್ದುದು ಬಾಣಗಳ ಹಾಸಿಗೆಯಮೇಲೆ ನನ್ನ ಮೊಮ್ಮಗ ಅರ್ಜುನ ನನ್ನನ್ನು ಯುದ್ಧದಲ್ಲಿ ಸೋಲಿಸಿ ಬಾಣಗಳ ಹಾಸಿಗೆಯ ಮೇಲೆ ಮಲಗಿಸಿದ್ದಾನೆ ಅಜ್ಜಾ ಭೀಷ್ಮಜ್ಜಾ ನಿನ್ನನ್ನು ನಾವು ಇದ್ದಲ್ಲಿಗೆ ಕರೆದೊಯ್ಯುತ್ತೇವೆ ಬಾ ನಾನು ನಿರಾಕರಿಸಿದ್ದೆ ನಾನು ಎಂದಿಗೂ ರಣರಂಗದಲ್ಲಿ ಸೋತು ಅರಮನೆಗೆ ಹೋಗಿಲ್ಲ ಉತ್ತರಾಯಣ ಪರ್ವಕಾಲಕ್ಕಾಗಿ ಕಾಯುತ್ತಿದ್ದೇನೆ ಅಲ್ಲಿಯ ತನಕ ಇಲ್ಲೇ ಇರುವೆ ಅವರೆಲ್ಲ ಹೋಗುವ ಮುನ್ನ ನನ್ನ ಆರಾಧ್ಯ ದೈವ ಶ್ರೀಕೃಷ್ಣನಿಗೆ ಕೈ ಮುಗಿದಿದ್ದೆ ಕೃಷ್ಣಾ ನನ್ನ ಜೀವ ನಿನ್ನ ಪಾದ ಸೇರುವ ಮುನ್ನ ನನ್ನಲ್ಲಿ ಒಂದಷ್ಟು ಪ್ರಶ್ನೆಗಳಿವೆ ಇಂದು ರಾತ್ರಿ ಯುದ್ಧ ಮುಗಿದ ಮೇಲೆ ಇಲ್ಲೊಮ್ಮೆ ಬರುವೆಯಾ ಕೃಷ್ಣ ನನ್ನಾಸೆಗೆ ಇಲ್ಲವೆನ್ನಲಿಲ್ಲ ಗಂಭೀರವಾಗಿ ನಕ್ಕು ತಲೆಯಾಡಿಸಿ ಹೋಗಿದ್ದ ಏನು ಅರ್ಥವಿದೆ ನನ್ನ ಇಷ್ಟು ಸುಧೀರ್ಘ ಬದುಕಿಗೆ ಯಾವ ಪುರುಷಾರ್ಥಕಾಗಿ ಇಲ್ಲಿವರೆಗೆ ಬದುಕಿದೆ ಹೆಂಡತಿ ಮಕ್ಕಳು ಸಂಸಾರ ಯಾವುದೂ ನನಗಿಲ್ಲವಲ್ಲ ಪ್ರಾಯಕ್ಕೆ ಬಂದ ಮಗನಿದ್ದಾನೆ ಎನ್ನುವದನ್ನೂ ಮರೆತು ನನ್ನ ಅಪ್ಪ ಶಾಂತನು ಮಗನ ವಯಸ್ಸಿನ ಚೆಲುವೆ ಮತ್ಸ್ಯಗಂಧಿಯಲ್ಲಿ ಮೋಹಿತನಾಗಿದ್ದ ಆಗ ನನಗೂ ಉಕ್ಕುವ ಯೌವ್ವನ ಕಣ್ಣು ಕುಕ್ಕುವ ತಾರುಣ್ಯ ಅಪ್ಪಾ ಚಿಂತಿಸಬೇಡ ಈ ಸಾಮ್ರಾಜ್ಯದ ಸಿಂಹಾಸನವನ್ನೂ ಎಂದೂ ಏರುವದಿಲ್ಲ ತಾಯಿ ಮತ್ಸ್ಯಗಂಧಿ ನನ್ನಮ್ಮನಾಗಿ ಬರಲಿ ಅವರ ಮಗ ಈ ಸಿಂಹಾಸನವನ್ನು ಆಳಲಿ ನನ್ನ ಸಮಸ್ತ ಶಕ್ತಿ ಬಾಹುಬಲ ಯುದ್ಧ ಕೌಶಲ್ಯವನ್ನು ಈ ಸಿಂಹಾಸನದ ರಕ್ಷಣೆಗೆ ಮುಡಿಪಾಗಿಡುವೆ ಅಪ್ಪನ ಮದುವೆಗಾಗಿ ಈ ಪ್ರತಿಜ್ಞೆ ಸಾಕಿತ್ತಲ್ಲವೆ ಮತ್ಸ್ಯಗಂಧಿಯ ಅಪ್ಪ ತನ್ನ ಮಗಳ ಭವಿಷ್ಯದ ವಿಚಾರ ಮಾಡಿದ ಅವನಿಗಾಗಿ ನನ್ನ ಚಿಕ್ಕಮ್ಮನಿಗಾಗಿ ಅವಳ ಮಕ್ಕಳು ರಾಜರಾಗಲೆಂದು ಇನ್ನೊಂದು ಪ್ರತಿಜ್ಞೆ ಮಾಡಿದೆ ನನ್ನ ಬದುಕಿನುದ್ದಕ್ಕೂ ಬ್ರಹ್ಮಚಾರಿಯಾಗಿರುವೆ ಎಂದಿಗೂ ಮದುವೆಯಾಗಲಾರೆ ಮುಂದೆ ಎಂಥಹ ಸಂದರ್ಭ ಎದುರಾದರೂ ನಾನು ಮದುವೆಯಾಗಲಿಲ್ಲ ನನ್ನ ಪ್ರತಿಜ್ಞೆಯನ್ನು ಉಳಿಸಿಕೊಂಡೆ ನನ್ನಪ್ಪ ಬದುಕನ್ನು ಕಂಡವ ಉಂಡಿದವ ತನ್ನ ಬದುಕಿನ ಪ್ರತಿಯೊಂದೂ ಕ್ಷಣ ಕ್ಷಣವನ್ನೂ ಅನುಭವಿಸಿದವ ನನ್ನ ಪ್ರತಿಜ್ಞೆಯನ್ನು ಕೇಳಿ ಸಂತೋಷದಿಂದ ನನಗೊಂದು ವರವನ್ನು ದಯಪಾಲಿಸಿದ ಮಗನೇ ನೀನು ಇಚ್ಛಾ ಮರಣಿಯಾಗು ಇಚ್ಛಾಮರಣಿ ಅಂದರೆ ಆತ್ಮಹತ್ಯೆ ಅಲ್ಲವೇ ನನಗೆ ನಗು ಬರುತ್ತಿದೆ ನಗೋಣ ಎಂದು ಕೊಂಡೆ ನಗಲಾಗಲಿಲ್ಲ ಕಣ್ಣಲ್ಲಿ ನೀರು ಒಸರುತ್ತಿದೆ ಬದುಕಿನುದ್ದಕ್ಕೂ ನನ್ನ ಮಗ ಹೆಣ್ಣು ಸಂಗಾತಿಯಿಲ್ಲದೆ ಇರುತ್ತಾನೆ ಒಂಟೀ ಜೀವ ಒಂಟೀ ಬದುಕು ಅಂದರೆ ಸಾವಿಗೆ ಹತ್ತಿರ ಆತ್ಮ ಹತ್ಯಾ ದೋಷ ತನ್ನ ಮಗನನ್ನು ತಾಗದಿರಲಿ ಅಂತ ಈ ವರವನ್ನು ಕೊಟ್ಟಿರಬಹುದಾ ಸಾವನ್ನು ಎದುರು ನೋಡುತ್ತಿರುವ ಈ ಸಂದರ್ಭದಲ್ಲಿ ಬದುಕಿನಲ್ಲಿ ನಡೆದ ಹಲವಾರು ಘಟನೆಗಳು ಬೇಡವೆಂದರೂ ನೆನಪಾಗುತ್ತಿವೆ ಆಯ್ಯೋ ನೋವು ಯಾರೋ ಚೀರುವ ಸದ್ಧು ನನ್ನ ಮನಸ್ಸು ಮಮ್ಮಲ ಮರುಗಿತು ಈ ಕುರುಕ್ಷೇತ್ರ ಯುದ್ಧದಲ್ಲಿ ಯಾರೆಲ್ಲ ಸಾಯುತ್ತಿದ್ದಾರೆ ಯಾರದ್ದೋ ಮಗ ಯಾರದ್ದೋ ಪತಿ ಇನ್ಯಾರದ್ದೋ ಅಪ್ಪ ಸಾಯುವವ ಒಬ್ಬ ವ್ಯಕ್ತಿಯಲ್ಲ ಒಂದು ಕುಟುಂಬ ಕುಟುಂಬದ ಭವಿಷ್ಯಗಳು ಆಸೆಗಳೂ ಇಲ್ಲಿ ಸಾಯುತ್ತಿವೆ ಎಷ್ಟೋ ಕನಸುಗಳು ಇಲ್ಲಿ ಕಮರುತ್ತಿವೆ ಯಾರೋ ಬರುತ್ತಿರುವ ಸದ್ಧು ಕುತ್ತಿಗೆ ಹೊರಳಿಸುವ ಪ್ರಯತ್ನ ಮಾಡಿದೆ ಚುಚ್ಚಿದ ಬಾಣಗಳಿಂದಾಗಿ ಆಗಲಿಲ್ಲ ಭೀಷ್ಮಾ ನಾನು ನಿನ್ನ ಕೃಷ್ಣ ಬಂದಿರುವೆ ನನ್ನ ಕಣ್ಣುಗಳು ಮಿನುಗಿದವು ನನ್ನ ಆರಾಧ್ಯ ದೈವ ಶ್ರೀಕೃಷ್ಣ ಕೃಷ್ಣಾ ಮಾಧವಾ ಹರಿ ಮುರಾರಿ ಗೋವರ್ಧನ ಗಿರಿಧಾರಿ ನನ್ನ ಬಾಯಿತುಂಬಾ ನಿನ್ನ ಹೆಸರನ್ನಾದರೂ ಹೇಳಿಬಿಡುತ್ತೇನೆ ಕಣ್ ತುಂಬ ನೋಡಿ ಕೈ ಮುಗಿಯುವ ಭಾಗ್ಯವೂ ನನಗಿಲ್ಲ ನೋಡು ನನ್ನ ಧ್ವನಿ ನಡುಗುತ್ತಿತ್ತು ಕಣ್ಣಲ್ಲಿ ನೀರು ತುಂಬಿತ್ತು ಈಗ ಕೃಷ್ಣ ನನ್ನ ಮುಂದೆ ಬಂದು ನಿಂತ ಭಕ್ತಿಗೆ ಆಡಂಬರ ಬೇಕಿಲ್ಲ ಶುದ್ಧ ಅಂತಃಕರಣದ ಭಾವ ಸಾಕು ಭೀಷ್ಮಾ ನೋವಾಗುತ್ತಿದೆಯಾ ನನಗೆ ನಗು ಬಂತು ಮಾಧವಾ ಕಣ್ ಮುಚ್ಚಿದರೂ ಕಾಡುವ ಮಾನಸಿಕ ನೋವಾ ಕ್ಷಣ ಕ್ಷಣಕ್ಕೂ ಚುಚ್ಚುವ ಬಾಣಗಳ ದೈಹಿಕ ನೋವಾ ಯಾವ ನೋವು ಅಂತ ಹೇಳಲಿ ಕೃಷ್ಣಾ ಇದುವರೆಗೂ ನೋವಿನೊಂದಿಗೆ ಜೊತೆ ಜೊತೆಯಾಗಿ ಬದುಕಿರುವೆ ಕೃಷ್ಣ ಮುಗುಳು ನಗುತ್ತಿರುವಂತೆ ಕಾಣುತ್ತಿತ್ತು ಭೀಷ್ಮಾ ನಿನಗೆಂಥಹ ನೋವು ಹಸ್ತಿನಾವತಿಪುರದ ಮಹಾರಥಿ ಸೇನಾನಿ ಹರಿ ಹರರನ್ನೇ ಗೆಲ್ಲಬಲ್ಲ ಭೀಷ್ಮನಿಗೆ ನೋವೇ ನನಗೆ ಅರ್ಥವಾಯಿತು ಕೃಷ್ಣ ನನ್ನನ್ನು ಕೆಣಕುತ್ತಿದ್ದಾನೆ ಅಂತ ಮಾಧವಾ ನನ್ನ ಅಂತರಂಗ ಅರಿತಿದ್ದರೂ ಮತ್ತೆ ಕೆಣಕುವೆಯೇಕೆ ಕೃಷ್ಣ ಮುಗುಳ್ನಕ್ಕ ಭೀಷ್ಮಾ ನಿನ್ನ ಬದುಕನ್ನು ನಾನು ಬಲ್ಲೆ ಬದುಕಿನ ಕುರಿತ ನಿನ್ನ ನಿಷ್ಠೆಯನ್ನೂ ಬಲ್ಲೆ ರಾಜ ವೈಭೋಗವನ್ನು ಅನುಭವಿಸುತ್ತ ರಾಜನ ಆಸ್ಥಾನದಲ್ಲಿ ನರ್ತಕಿಯರ ನೃತ್ಯಗಳನ್ನು ನೋಡುತ್ತ ಆಸ್ಥಾನದ ಅರೆನಗ್ನ ಹೆಂಗಳೆಯರ ಪಟಗಳನ್ನು ನೋಡುತ್ತ ವೈಭೋಗದ ಮಧ್ಯೆ ಬ್ರಹ್ಮಚಾರಿಯಾಗಿವದು ಬಹಳ ಕಷ್ಟ ನೀನೊಬ್ಬ ಸೇನಾನಿ ವೀರ ಯೋಧ ಹರಿ ಹರ ಬ್ರಹ್ಮಾದಿಗಳನ್ನು ಸೋಲಿಸಬಲ್ಲ ವೀರ ಶೂರತನ ಸುಲಭವಾಗಿ ಬರುವದಿಲ್ಲ ಅದಕ್ಕೆ ತಕ್ಕ ವ್ಯಾಯಾಮ ಪೌಷ್ಟಿಕ ಆಹಾರ ಸೇವಿಸುವ ಅನಿವಾರ್ಯ ಸಮರ್ಥ ವೀರ್ಯವಂತನ ದೇಹ ತನ್ನ ಜೈವಿಕ ಕ್ರಿಯೆಯನ್ನು ಮಾಡಲೇ ಬೇಕಲ್ಲವೆ ಭೀಷ್ಮಾ ನೀನು ಪ್ರತಿಜ್ಞೆ ಮಾಡಿದ್ದು ನಿನ್ನ ಯೌವ್ವನದ ದಿನಗಳಲ್ಲಿ ಆರಮನೆಯ ರಾಜಕುವರ ಹತ್ತಾರು ಸುಂದರ ಹೆಂಗಳೆಯರ ಕನಸು ಕಂಡವ ಪ್ರತಿಜ್ಞೆ ಮಾಡಿದರೂ ಬದುಕಿನುದ್ದಕ್ಕೂ ಕನಸುಗಳು ಕಾಡದೆ ಬಿಟ್ಟಾವೆಯೆ ಭೀಷ್ಮಾ ನಿನಗೆ ಕನಸುಗಳು ಕೂಡಾ ನೋವುಗಳಾಗಿದ್ದವು ಅಲ್ಲವೆ ಈ ಕೃಷ್ಣ ನನ್ನನ್ನು ಎಳೆ ಎಳೆಯಾಗಿ ಬಿಡಿಸಿಡುತ್ತಿದ್ದ ತಲೆ ಅಲ್ಲಾಡಿಸುವ ಪ್ರಯತ್ನ ಮಾಡಿದೆ ನೋವಿನಿಂದ ಮುಖ ಕಿವುಚಿದೆ ಮಾಧವಾ ಬದುಕಿನುದ್ದಕ್ಕೂ ನಾನು ಕಾಮವನ್ನು ಧಿಕ್ಕರಿಸಿ ಎದುರಿಸಿ ಬದುಕಿದ್ದೇನೆ ನನ್ನ ಬದುಕಿನ ವೈರುಧ್ಯ ನೋಡು ಕೃಷ್ಣಾ ನನ್ನಿಂದ ಬ್ರಹ್ಮಚೈರ್ಯದ ಪ್ರತಿಜ್ಞೆ ಮಾಡಿಸಿದ ನನ್ನ ಚಿಕ್ಕಮ್ಮ ಮತ್ಸ್ಯಗಂಧಿಗೆ ಯೋಗ್ಯರಾದ ಸೊಸೆಯರನ್ನು ನಾನು ತರಬೇಕಾಯಿತು ಮುಂದೊಮ್ಮೆ ಅವರು ಮಕ್ಕಳಾಗದೆ ವಿಧವೆಯರಾದರು ರಾಜ್ಯದ ಸಿಂಹಾಸನಕ್ಕೆ ಉತ್ತರಾಧಿಕಾರಿ ಬೇಕಲ್ಲ ವೇದವ್ಯಾಸರು ಸಮಸ್ಯೆ ಪರಿಹರಿಸಲಿಕ್ಕೆ ಬರಬೇಕಾಯಿತು ಕುಟುಂಬದ ಹಿತೈಷಿಯಾಗಿ ಇದಕ್ಕೆಲ್ಲ ನಾನು ಸಾಕ್ಷಿಭೂತನಾಗಿದ್ದೆ ಎಲ್ಲೋ ಬೆಟ್ಟದಲ್ಲಿ ಹಿಮಾಲಯದಲ್ಲಿ ಮರದ ಕೆಳಗೆ ಬದುಕಿನ ಸಂಬಂಧಗಳನ್ನೆಲ್ಲ ತೊರೆದು ಸನ್ಯಾಸಿಯಾಗಿ ಬ್ರಹ್ಮಚಾರಿಯಾಗುವದು ಸುಲಭ ರಾಜಭೋಗದಲ್ಲಿ ಸನ್ಯಾಸಿಯಾಗಿ ನಾನು ಗೆದ್ದಿರುವೆ ಕೃಷ್ಣಾ ಕೃಷ್ಣ ನನ್ನನ್ನು ನೋಡಿ ಹೆಮ್ಮೆಯಿಂದ ನಕ್ಕ ಕೃಷ್ಣಾ ಈ ಸೃಷ್ಟಿಯಲ್ಲಿ ಒಂದು ಗಂಡು ಒಂದು ಹೆಣ್ಣು ಹುಟ್ಟುವದು ಸಂತಾನೋತ್ಪತ್ತಿಗೋಸ್ಕರ ಇದು ನನಗೆ ತಿಳಿಯದ ವಿಷಯವೇನಲ್ಲ ನನ್ನ ಕಣ್ಣೇದುರಲ್ಲೇ ಕಾಮದ ಭಯಂಕರ ಆಟಗಳನ್ನು ನೋಡಿರುವೆ ಎಲ್ಲಿ ಕೃಷ್ಣಾ ಧೃಥರಾಷ್ಟ್ರ ಹುಟ್ಟು ಕುರುಡ ನಮ್ಮ ಕಣ್ಣಿಗೆ ಕಾಣುವ ಬಣ್ಣಗಳ ರಂಗುಗಳನ್ನು ಆತ ನೋಡಲೇ ಇಲ್ಲ ಹೆಣ್ಣಿನ ಸೌಂದರ್ಯದ ಸೊಬಗಿನ ಕಲ್ಪನೆ ಕೂಡ ಅವನಿಗಿಲ್ಲ ಅಂಥಹ ಹುಟ್ಟು ಕುರುಡನ ಕಾಮಕ್ಕೆ ಮಡದಿ ಗಾಂಧಾರಿ ಸಾಕಾಗಲಿಲ್ಲ ದಾಸಿಯಲ್ಲಿ ಮೋಹಿತನಾದ ಅವಳಲ್ಲಿ ಮಗುವನ್ನು ಪಡೆದ ಅದೊಂದು ದೊಡ್ಡ ಗಲಾಟೆಯೇ ಆಗಿ ಹೋಯಿತು ಅವನ ಈ ಅವಾಂತರವನ್ನು ಪರಿಹರಿಸಿದ್ದು ನಾನು ಅವನ ದಾಸಿ ಪುತ್ರ ಯಯತ್ಸು ನಿನಗೂ ಗೊತ್ತಲ್ಲವೆ ಕೃಷ್ಣ ನಗುತ್ತ ತಲೆಯಾಡಿಸಿದ ಕೃಷ್ಣಾ ಇದಕ್ಕಿಂತಲೂ ಆಶ್ಚರ್ಯವಾದ ಇನ್ನೊಂದು ವಿಷಯವಿದೆ ಧೃಥರಾಷ್ಟ್ರನ ಸಹೋದರ ಪಾಂಡು ಮಹಾರಾಜನಿಗೆ ಒಂದು ಭಯಂಕರ ಶಾಪವಿತ್ತು ನೀನು ಕಾಮಾತುರನಾಗಿ ಮಡದಿಯನ್ನು ಭೋಗಿಸಲು ಮುಂದಾದರೆ ನಿನಗೆ ಸಾವು ಖಂಡಿತ ಅಂತ ಕಾಮವನ್ನು ಅನುಭವಿಸಲು ಹೋದರೆ ಸಾವು ಖಂಡಿತ ಈ ಪಾಂಡು ಮಾಡಿದ್ದೇನು ತನ್ನ ಸಾವನ್ನು ಲೆಕ್ಕಿಸದೆ ಕಾಮವನ್ನು ಅನುಭವಿಸಲು ಹೋದ ಸತ್ತೂ ಹೋದ ಸಾವಿನ ಭಯವಿದ್ದರೂ ದೇಹವನ್ನೂ ಮನಸ್ಸನ್ನೂ ಕಾಡುವ ಕಾಮವೇ ದೊಡ್ಡದಾಗಿ ಹೋಯ್ತು ಕೃಷ್ಣ ಮತ್ತೆ ಕಿರು ನಗು ನಕ್ಕ ಕೃಷ್ಣಾ ನಿನ್ನಲ್ಲಿ ಒಂದು ಪ್ರಶ್ನೆಯಿದೆ ಏನದು ಪ್ರಶ್ನೆ ಮಾಧವಾ ಬದುಕಿನುದ್ದಕ್ಕೂ ನಾನು ಪ್ರಕೃತಿಯ ವಿರುದ್ಧವಾಗಿ ಬದುಕಿದೆ ಮನಸ್ಸಿನ ದೇಹದ ಸಹಜ ಆಸೆಗಳನ್ನು ಹತ್ತಿಕ್ಕಿ ಹಠದಿಂದ ಬದುಕಿದೆ ನನ್ನ ಬದುಕಿನ ಕ್ಷಣ ಕ್ಷಣದಲ್ಲೂ ಈ ಹೆಣ್ಣು ಈ ಪ್ರಕೃತಿ ನನ್ನನ್ನು ಕಾಡಿದೆ ಅಂಬೆಗೆ ನಾನು ಮಾಡಿದ್ದೇನು ನನ್ನ ತಮ್ಮನಿಗಾಗಿ ಅವಳನ್ನು ಕರೆ ತಂದೆ ನಾನು ಸಾಲ್ವ ಮಹಾರಾಜನನ್ನು ಪ್ರೀತಿಸಿದ್ದೇನೆ ಎಂದಾಗ ಬಹಳ ಮರ್ಯಾದೆಯಿಂದ ಅವನಲ್ಲಿ ಅವಳನ್ನು ಕಳುಹಿಸಿಕೊಟ್ಟೆ ಸಾಲ್ವ ಮಹಾರಾಜ ಅಂಬೆಯನ್ನು ತಿರಸ್ಕರಿಸಿದರೆ ನನ್ನ ತಪ್ಪೇನಿದೆ ಇಂದು ಅಂಬೆ ಶಿಖಂಡಿಯಾಗಿ ನನ್ನ ಸಾವಿಗೆ ಕಾರಣಳಾಗಿದ್ದಾಳೆ ಕೃಷ್ಣಾ ಇದುವರೆಗೂ ಕುರುವಂಶದ ಸಿಂಹಾಸನವನ್ನು ವೈರಿಗಳಿಂದ ಕಾಪಾಡಿಕೊಂಡು ಬಂದಿದ್ದೆ ಇಂದು ಮನೆಯ ಸೊಸೆ ದ್ರೌಪದಿಯಿಂದಾಗಿ ಕುರುವಂಶ ನಾಶವಾಗುತ್ತಿದೆ ನನ್ನ ಬದುಕಿನಲ್ಲಿ ಯಾವಾಗಲೂ ಹೆಣ್ಣು ಈ ರೀತಿಯಾಗಿ ಬಂದು ವಿಪರ್ಯಾಸಗಳನ್ನು ಹುಟ್ಟು ಹಾಕುವದು ಯಾಕೆ ಯಾಕೆ ಹೀಗೆ ಬ್ರಹ್ಮಚಾರಿಯಾಗಿರಬೇಕು ಎಂದರೆ ಕಾಮವನ್ನು ಗೆಲ್ಲಬೇಕು ಈ ಪ್ರಕೃತಿ ಈ ಸ್ತ್ರೀಯನ್ನು ವಿರೋಧಿಸಿ ಬದುಕಿದ್ದು ತಪ್ಪಾ ಕಾಮದ ಹೊರತಾಗಿ ಈ ಬದುಕಿನಲ್ಲಿ ಏನೂ ಇಲ್ಲವೆ ಕೃಷ್ಣಾ ಕೃಷ್ಣ ನಗುತ್ತಿದ್ದ ಒಂದೇ ಸವನೆ ನಗುತ್ತಿದ್ದ ನಗುವ ಮುದ್ದು ಮುಖದ ಕೃಷ್ಣನ ಮುಖವನ್ನು ಕಣ್ ತುಂಬಾ ತುಂಬಿಕೊಂಡೆ ಭೀಷ್ಮಾ ಏನು ಹೇಳಲಿ ನಾನೂ ಸಹ ನಿನ್ನ ಹಾಗೆಯೇ ಬ್ರಹ್ಮಚಾರಿ ಇದು ನಿನಗೂ ಗೊತ್ತಲ್ಲವೆ ಲೋಕದ ಸಹಜ ಸೃಷ್ಟಿ ಪ್ರಕೃತಿ ಪುರುಷ ಇಲ್ಲಿ ಕಾಮವೂ ಸಹಜ ಸಹಜತೆಯನ್ನು ಒಪ್ಪಿದರೂ ಅಪ್ಪಿ ಕೊಳ್ಳುವ ಅಗತ್ಯವೇನಿಲ್ಲ ಭೀಷ್ಮಾ ನಿನ್ನ ಬದುಕು ಸಾರ್ಥಕ ಬದುಕು ಅಪ್ಪನಿಗಾಗಿ ಮಾಡಿದ ಪ್ರತಿಜ್ನೆಗಾಗಿ ನಿನ್ನ ಬದುಕನ್ನೇ ಮುಡಿಪಾಗಿಟ್ಟೆ ವೈಭೋಗದ ಕಾಮಕೂಪದಲ್ಲಿದ್ದರೂ ನಿನ್ನ ಛಲವನ್ನು ಬಿಡಲಿಲ್ಲ ನೀನು ಗೆದ್ದಿದ್ದೀಯಾ ಭೀಷ್ಮಾ ನಿನ್ನದು ಸಾರ್ಥಕ ಬದುಕು ನನ್ನ ನೋವುಗಳನ್ನು ಲೆಕ್ಕಿಸದೆ ಬಾಣಗಳಿಂದ ಜರ್ಜರಿತವಾದ ರಕ್ತಸಿಕ್ತ ಕೈಗಳನ್ನು ಎತ್ತಿ ಕಣ್ಮುಚ್ಚಿ ಕೈಮುಗಿದೆ ಭಕ್ತಿಯಿಂದ ಪರವಶನಾದೆ ನನ್ನ ಧ್ವನಿ ನಡುಗುತ್ತಿತ್ತು ಕೃಷ್ಣಾ ಕೃಷ್ಣಾ ಕೃಷ್ಣಾ ಕೃಷ್ಣ ಮೃದುವಾಗಿ ಮೈದವಡುತ್ತಿದ್ದ ನನ್ನ ಕಣ್ಣುಗಳಲ್ಲಿ ಧಾರಾಕಾರವಾಗಿ ನೀರಿಳಿಯುತ್ತಿತ್ತು ಆಸ್ತಿಕ ಮನಸ್ಸುಗಳ ಕ್ಷಮೆ ಕೋರುವೆ ಸುಂದರ ಪ್ರತಿಕ್ರಿಯೆಗಳಿವೆ ದಯವಿಟ್ಟು ಪ್ರತಿಕ್ರಿಯೆಗಳನ್ನೂ ನೋಡಿ posted by ittigecement at 4 10 pm 32 comments saturday december 6 2014 ಷಂಡ ಒಮ್ಮೆ ತಾರೆ ತನ್ನ ಪತಿ ಬ್ರಹಸ್ಪತಿಯ ಬಳಿ ತನ್ನ ಕಾಮದಾಸೆಯನ್ನು ನಿವೇದಿಸುತ್ತಾಳೆ ಬ್ರಹಸ್ಪತಿ ಅವಳ ಮಾತನ್ನು ಗಣನೆಗೆ ತೆಗೆದುಕೊಳ್ಳದೆ ದೇವಲೋಕದತ್ತ ಹೋಗುತ್ತಾನೆ ಬ್ರಹಸ್ಪತಿ ಆಶ್ರಮದಲ್ಲಿ ಇಲ್ಲದ ಸಮಯದಲ್ಲಿ ಅಲ್ಲಿಗೆ ಬಂದ ಚಂದ್ರ ತಾರೆಯರಲ್ಲಿ ಸಂಬಂಧ ಏರ್ಪಡುತ್ತದೆ ಅಲ್ಲಿಂದ ಮುಂದೆ ಬ್ರಹಸ್ಪತಿಯ ಸ್ವಗತ ನಾನು ತಾರೆಯನ್ನು ಮದುವೆಯಾದ ದಿನಗಳು ಹೊಸ ಬಿಸಿಯ ದಿನಗಳಲ್ಲವೆ ಈಗ ನನ್ನವಳ ಪ್ರಶ್ನೆಗಳು ತುಂಬಾ ವಿಚಿತ್ರ ನೀವ್ಯಾಕೆ ಗಡ್ಡ ಬಿಟ್ಟಿದ್ದೀರಿ ನನಗೆ ನಗು ಬಂತು ನಾನು ಆಧ್ಯಾತ್ಮ ಚಿಂತನೆ ಪರಮಾತ್ಮಿಕ ವಿಚಾರಗಳಲ್ಲಿ ತಪಸ್ಸು ಮಾಡುವವನು ನಾನು ದೇವಲೋಕದ ಗುರು ಬ್ರಹಸ್ಪತಿ ನಾನು ಇಹಲೋಕದ ಕ್ಷಣಿಕ ಸುಖಗಳು ಮಿಥ್ಯ ಅಂತ ನಂಬಿದವನು ಬಂಧನದೊಳಗೆ ಇದ್ದು ಪರಿಧಿಯಾಚೆ ನೋಡುವವನು ದಿನ ಪೂರ್ತಿ ಪರಮಾತ್ಮನ ಚಿಂತನೆಯಲ್ಲಿ ಮುಳುಗಿದವನು ನನ್ನಂಥವನಿಗೆ ಬಾಹ್ಯ ಸೌಂದರ್ಯ ಇದ್ದರೆಷ್ಟು ಬಿಟ್ಟರೆಷ್ಟು ಗಡ್ಡದ ಇರುವು ಪ್ರತಿಕ್ಷಣ ಗೊತ್ತಾದಾಗ ನನ್ನ ಸಾಧನೆ ಇನ್ನೂ ಇದೆ ಅಂತ ಜ್ಞಾಪಕವಾಗುವದಕ್ಕೆ ಗಡ್ಡ ಬಿಟ್ಟಿದ್ದೇನೆ ಅವಳು ನಕ್ಕಳು ಕಣ್ಣರಳಿಸಿ ನಗುವಾಗ ಅವಳ ಮುಖವೆಲ್ಲ ಅರಳುತ್ತದೆ ನನಗೂ ಅವಳನ್ನು ಸ್ವಲ್ಪ ಮಾತನಾಡಿಸುವ ಹಂಬಲ ಉಂಟಾಯಿತು ತಾರೆ ಗಡ್ಡ ಮೀಸೆಗಳು ಗಂಡಸಿಗೆ ಮಾತ್ರ ಯಾಕೆ ಹೆಣ್ಣಿಗೇಕೆ ಇಲ್ಲ ಗೊತ್ತಾ ನನ್ನವಳ ಮನದ ಗೊಂದಲ ಅತ್ತಿತ್ತ ಓಡಾಡುವ ಅವಳ ಬೊಗಸೆ ಕಣ್ಣುಗಳಲ್ಲಿ ಗೊತ್ತಾಗಿಬಿಡುತ್ತದೆ ಯಾಕೆ ಮುನಿವರ್ಯಾ ಹೆಣ್ಣು ಹೂವಿನಂತೆ ಅವಳ ಪ್ರತಿ ಕಣ ಕಣದಲ್ಲೂ ಭಾವನೆಗಳು ಹರಿದಾಡುತ್ತಿರುತ್ತವೆ ಅವಳ ಕೆನ್ನೆಗಳಲ್ಲಿ ಕಣ್ಣುಗಳಲ್ಲಿ ಮೌನ ತುಟಿಗಳಲ್ಲೂ ಭಾವ ತುಂಬಿರುತ್ತವೆ ಗಡ್ಡ ಮೀಸೆಗಳಿಂದ ಹೆಣ್ಣಿನ ಮುಖ ತುಂಬಿ ಹೋದರೆ ಕಷ್ಟ ಅಲ್ಲವ ಗಂಡಿಗೆ ಭಾವನೆಗಳು ಕಡಿಮೆ ಗಡ್ಡ ಮೀಸೆಗಳಿಂದ ಮುಖ ಮುಚ್ಚಿದರೆ ಯಾವ ನಷ್ಟವೂ ಇಲ್ಲ ಈಗ ಅವಳು ಕಣ್ ಮುಚ್ಚಿ ಗಲಗಲನೆ ನಕ್ಕಳು ಮುನಿವರ್ಯಾ ಹೆಣ್ಣಿನ ಭಾವನೆಗಳಿಗೂ ಪುರುಷ ಬೆಲೆಕೊಡಬೇಕಲ್ಲವೆ ನಾನು ಅವಳ ಮಾತನ್ನು ಅಲ್ಲಿಯೆ ತುಂಡರಿಸಿದೆ ಅಗತ್ಯವಿಲ್ಲ ಹೆಣ್ಣು ಪ್ರಕೃತಿಯ ಹಾಗೆ ಹೊಲವನ್ನು ಕೇಳಿ ಯಾರೂ ಉಳುಮೆ ಮಾಡುವದಿಲ್ಲ ತನಗೆ ಬೆಳೆ ಬೇಕೆನಿಸಿದಾಗ ತನ್ನ ಅವಶ್ಯಕತೆಗಳಿಗಷ್ಟೆ ಪುರುಷ ಹೊಲವನ್ನು ಊಳುತ್ತಾನೆ ಪುರುಷನಿಗೋಸ್ಕರವೇ ಪ್ರಕೃತಿ ಹುಟ್ಟಿದ್ದು ಹೆಣ್ಣು ಹುಟ್ಟಿದ್ದು ಹೆಣ್ಣನ್ನು ತನಗೆ ಹೇಗೆ ಬೇಕೋ ಹಾಗೆ ಬಳಸಿಕೊಳ್ಳುವದು ಪುರುಷನ ಹಕ್ಕು ಅವಳು ಮುಗ್ಧವಾಗಿ ಕಣ್ಣರಳಿಸಿದಳು ನನಗೆ ಅರ್ಥವಾಗಲಿಲ್ಲ ಮುನಿವರ್ಯ ದಾಂಪತ್ಯದ ಹೆಣ್ಣು ಗಂಡಿನ ಮಿಲನದ ಸುಖದ ಕ್ಷಣಗಳಿವೆಯಲ್ಲ ಸೂಕ್ಷ್ಮವಾಗಿ ಗಮನಿಸಿದ್ದೀಯಾ ಗಂಡು ತನ್ನ ಖುಷಿಯ ಸುಖದ ಕೊನೆಯ ಹಂತ ತಲುಪಿದಕೂಡಲೆ ಮಿಲನದ ಕಾರ್ಯ ನಿಂತುಬಿಡುತ್ತದೆ ಗಂಡು ಹೆಣ್ಣಿನ ಮೈಥುನದಲ್ಲಿ ಗಂಡಿನ ಸ್ಖಲನವೇ ಮುಖ್ಯ ಗಂಡಸಿನ ತೃಪ್ತಿಯೇ ನಿರ್ಣಾಯಕ ಅಲ್ಲಿ ಹೆಣ್ಣಿಗೆ ಇನ್ನೂ ಸುಖದ ಕ್ಷಣದ ಅಗತ್ಯ ಬೇಕಿದ್ದರೂ ಗಂಡು ತೃಪ್ತಿ ಪಡೆದು ಮಲಗಿರುತ್ತಾನೆ ಹೆಣ್ಣನ್ನು ಸೃಷ್ಟಿಸಿದ ರೀತಿಯೇ ಹಾಗಿದೆ ಸುಖದ ವಿಚಾರ ಬಂದಾಗಲೂ ಹೆಣ್ಣು ಅಬಲೆ ಗಂಡಿಗೋಸ್ಕರ ಗಂಡಿನ ಭೋಗ ಸುಖಗೋಸ್ಕರ ಹೆಣ್ಣಿನ ಹುಟ್ಟು ಆಗಿದೆ ಅವಳಿಗೆ ಕೋಪ ಬಂದಿದ್ದು ಸ್ಪಷ್ಟವಾಗಿ ಕಾಣಿಸಿತು ನೀವ್ಯಾಕೆ ಮದುವೆಯಾಗಿದ್ದೀರಿ ನೀವು ಸಂಸಾರದ ಸುಖ ಭೋಗಗಳನ್ನು ಬಿಟ್ಟವರಲ್ಲವೆ ನಿಮಗ್ಯಾಕೆ ಮದುವೆಯ ಅಗತ್ಯ ಈ ಜಗತ್ತಿನಲ್ಲಿ ಗಂಡು ಹೆಣ್ಣು ಹುಟ್ಟಿರುವದು ಸಂತಾನೋತ್ಪತ್ತಿಗೋಸ್ಕರ ಆಧ್ಯಾತ್ಮ ಚಿಂತನೆ ತಪಸ್ಸಿಗೋಸ್ಕರ ನನ್ನ ಬದುಕು ನಾನು ಸನ್ಯಾಸಿ ಅಂತಿದ್ದರೂ ಈ ದೇಹದ ಮೂಲಗುಣವನ್ನು ಬಿಟ್ಟು ಇರಲಾಗುತ್ತದೆಯೆ ದೇಹದ ಮೂಲಭೂತವಾದ ಗುಣ ಕಾಮವನ್ನು ಬಿಟ್ಟು ಬದುಕು ಇಲ್ಲ ಕಾಮದ ಜೊತೆಗೆ ಪಾರಮಾರ್ಥಿಕ ಸಾಧನೆ ಮಾಡಬೇಕು ಇದು ಸಹಜ ದೇವಲೋಕದ ಎಲ್ಲ ಸಪ್ತ ಋಷಿಗಳನ್ನು ನೋಡು ಎಲ್ಲರೂ ಮದುವೆಯಾದವರು ಮದುವೆಯಾಗಿ ಪಾರಮಾರ್ಥಿಕತೆಯತ್ತ ಹೊರಟವರು ನಾವು ಅವಳ ಕೋಪ ತಡೆಯಲಾಗಲಿಲ್ಲ ಆಧ್ಯಾತ್ಮ ಚಿಂತನೆಯವರಿಗೆ ಯಾಕೆ ನನ್ನಂಥಹ ಚೆಲುವೆಯ ಅಗತ್ಯ ಕುಂಟಿಯೋ ಕುರುಡಿಯೋ ಸಾಕಾಗುತ್ತಿರಲಿಲ್ಲವೆ ಅಂಥಹ ಅಸಹಾಯಕಳಿಗೆ ಸಾಮಾನ್ಯರು ಕಣ್ಣೆತ್ತಿ ನೋಡದ ಕುರೂಪಿಯೊಬ್ಬಳಿಗೆ ಬದುಕುಕೊಟ್ಟಿದ್ದರೆ ಚೆನ್ನಾಗಿತ್ತಲ್ಲವೆ ನಿಮ್ಮಂಥಹ ಋಷಿಗಳಿಗೆ ಚಂದದ ಹೆಣ್ಣೇಕೆ ಬೇಕು ನನಗೆ ನಗು ಬಂತು ಅಯ್ಯೋ ಹುಚ್ಚಿ ನಮ್ಮ ಆಧ್ಯಾತ್ಮ ಚಿಂತನೆಗಳಿಗೆ ತಪಸ್ಸಿಗೆ ಚಂದದ ಅಗತ್ಯವಿಲ್ಲ ನಾವು ಮಾಡುವ ಯಜ್ಞ ಯಾಗಾದಿಗಳಿಗೆ ಹೋಮ ಹವನಗಳಿಗೆ ಹೆಂಡತಿಯ ಅಗತ್ಯ ಮಾತ್ರ ಇದೆ ಅಲ್ಲಿಯೂ ಅಂದ ಚಂದದ ಅಗತ್ಯವಿಲ್ಲ ಆದರೆ ದಾಂಪತ್ಯದ ಹಾಸಿಗೆಗೆ ಉದ್ರೇಕದ ಹಸಿವೆಗೆ ಚಂದ ಬೇಕೇ ಬೇಕು ಕಾಮದ ಆಕ್ಷಣದ ಸುಖಕ್ಕೆ ಚಂದ ಇದ್ದರೆ ಸುಖದ ಸೊಗಸು ಇನ್ನೂ ಜಾಸ್ತಿ ಮುನಿವರ್ಯಾ ಆಲದಂತಹ ಹೆಮ್ಮರವನ್ನು ಬೆಳೆಸುವ ಸಾಮರ್ಥ್ಯವಿರುವ ಪ್ರಕೃತಿಯ ಹೊಲದಲ್ಲಿ ಮೆಂತೆ ಸೊಪ್ಪನ್ನು ಬೆಳೆಸುವ ಪುರುಷನಿಗೆ ಏನನ್ನ ಬೇಕು ಪುರುಷ ಕೊಟ್ಟಾಗಲಷ್ಟೇ ಸುಖ ಅನುಭವಿಸಬೇಕು ಪುರುಷ ಕೊಟ್ಟಷ್ಟೇ ಸುಖದಲ್ಲಿ ತೃಪ್ತಿ ಪಟ್ಟುಕೊಳ್ಳಬೇಕು ಪ್ರಕೃತಿಗೆ ಹೆಣ್ಣಿಗೆ ಇದರಲ್ಲಿ ಅವಕಾಶ ಇಲ್ಲವೆಂದಾದರೆ ಪ್ರಕೃತಿ ಅಂದರೆ ಸಹಜ ಅಂತ ಅರ್ಥವೆ ಹೆಣ್ಣಿನ ಅತೃಪ್ತಿ ಸಹಜವೇ ಇವಳಿಗೊಂದು ಸೊಕ್ಕಿನ ಉತ್ತರ ಕೊಡಬೇಕು ಎನಿಸಿತು ಹೌದು ಅದಕ್ಕಾಗಿಯೇ ಹೇಳಿದ್ದು ಶಾರೀರಿಕವಾಗಿ ಒಂದೇ ಅಲ್ಲ ಸುಖ ಪಡುವ ವಿಷಯದಲ್ಲೂ ಹೆಣ್ಣು ಅಬಲೆ ಈ ಹೆಣ್ಣಿನ ಕುಲವಿರುವದು ಪುರುಷನ ಸುಖ ಭೋಗಸ್ಕೋರ ಮಾತ್ರ ಇದು ಜಗತ್ತಿನ ಸಹಜ ಸತ್ಯ ಅವಳು ಮತ್ತೆ ಮಾತನಾಡಲಿಲ್ಲ ಎದ್ದು ಹೋದಳು ಇಂಥಹ ಚರ್ಚೆ ನಮ್ಮಿಬ್ಬರಲ್ಲಿ ಅತ್ಯಂತ ಮಾಮೂಲಿ ನಾನು ದೇವಲೋಕದಿಂದ ಬಂದಮೇಲೆ ಗೊತ್ತಾಯಿತು ನನ್ನ ತಾರೆ ಬಸುರಿ ಅಂತ ತುಂಬಾ ಸಂತೋಷವಾಯಿತು ಮುಂದೊಂದು ದಿನ ಒಂದು ಅತ್ಯಂತ ಮುದ್ದಾದ ಗಂಡು ಮಗುವಿಗೆ ಅಪ್ಪನೂ ಆದೆ ಎಲ್ಲೆಡೆ ಸಂಭ್ರಮ ಮಗುವಿನ ನಾಮಕರಣದ ಕಾರ್ಯಕ್ರಮವನ್ನು ವಿಜ್ರಂಭಣೆಯಿಂದ ಆಚರಿಸಲು ನಿಶ್ಚಯಿಸಿದೆ ಸಮಸ್ತ ಲೋಕದ ಗಣ್ಯರನ್ನು ಆಹ್ವಾನಿಸಿದೆ ಪುರೋಹಿತ ವರ್ಗದವರ ಮಂತ್ರ ಘೋಷಣೆ ಮುಗಿಲು ಮುಟ್ಟಿತ್ತು ಅತಿಥಿಗಳ ಕಿಲ ಕಿಲ ನಗು ಸಂಭಾಷಣೆ ಗದ್ದಲದಿಂದ ಸಂಭ್ರಮಕ್ಕೆ ಕಳೆ ಕಟ್ಟಿತ್ತು ಆಗ ಒಂದು ಘರ್ಜನೆ ಕೇಳಿ ಬಂತು ಈ ಕಾರ್ಯಕ್ರಮವನ್ನು ಇಷ್ಟಕ್ಕೇ ನಿಲ್ಲಿಸಿ ನಾನು ಆ ಧ್ವನಿಯತ್ತ ತಿರುಗಿ ನೋಡಿದೆ ನನ್ನ ಶಿಷ್ಯ ಚಂದ್ರ ನನ್ನನ್ನು ನೋಡಿದ ಚಂದ್ರ ಮತ್ತೆ ಹೂಂಕರಿಸಿದ ಗುರುವರ್ಯಾ ಈ ಮಗುವಿಗೆ ಅಪ್ಪ ನಾನು ಈ ಮಗುವಿನ ನಾಮಕರಣ ನನ್ನ ಹಕ್ಕು ಈ ಮಗುವಿಗೆ ನಾನು ಹೆಸರಿಡುವೆ ನಾನು ದಿಘ್ಬ್ರಾಂತನಾದೆ ನೆರೆದಿರುವ ಅತಿಥಿಗಳನಡುವೆ ನನ್ನ ಮಾನ ಮರ್ಯಾದೆ ಮಣ್ಣು ಪಾಲಾಗುತ್ತಿದೆ ನೀಚನಂತೆ ಮಾತನಾಡಬೇಡ ಯಾರ ಬಳಿ ಯಾವ ಮಾತನಾಡುತ್ತಿರುವೆಯೆಂದು ಪ್ರಜ್ಞೆ ಇಟ್ಟುಕೊ ಚಂದಿರ ಮತ್ತೆ ಹೂಂಕರಿಸಿದ ಸಭೆಯಲ್ಲಿ ಗದ್ದಲ ಶುರುವಾಯಿತು ಬಿಸಿ ಬಿಸಿ ಚರ್ಚೆ ವಾಗ್ವಾದ ಶುರುವಾಯಿತು ಇಂದ್ರದೇವ ಮುಂದೆ ಬಂದು ಎಲ್ಲರನ್ನೂ ಶಾಂತಗೊಳಿಸಿದ ಇಬ್ಬರೂ ಈ ರೀತಿ ಜಗಳವಾಡಿದರೆ ...
|