Meta tags:
Headings (most frequently used words):
2009, march, ಇತ್ಯಾದಿ, monday, sunday, ಸೆಪ್ಟೆಂಬರ್, ವಿಚಾರಗಳು, ಹೃದ್ರೋಗಿಗಳು, ಕಡಿಮೆಯಾಗುತ್ತಾರೆ, ಶುಷ್ಕ, ವಕ್ರ, ನಗೆ, ಕಾವೇರಿ, ಆದೇಶ, ಕೆಲವು, ಪ್ರಶ್ನೋತ್ತರಗಳು, ನಾವೇಕೆ, ಬ್ಲಾಗ್, ಮಾಡುತ್ತೇವೆ, september, tuesday, 31, 29, ಆದಿ, ಭೇಟಿಯಿತ್ತ, ಅತಿಥಿಗಳ, ಸಂಖ್ಯೆ, followers,
Text of the page (most frequently used words):
ಒಂದು (61), ಆದರೆ (43), ಮತ್ತು (42), ಬಗ್ಗೆ (39), ನನಗೆ (27), ನನ್ನ (26), #ಕಾವೇರಿ (25), ನಾನು (25), ನೀರನ್ನು (25), ಅನ್ನುವ (22), ಟಿಎಂಸಿ (22), ಎಂದು (22), ಅಡಿ (20), ಹೀಗಾಗಿ (19), ಬ್ಲಾಗ್ (18), ಎಸ್ (18), ಮೇಲೆ (18), ನಾವು (17), ಅಥವಾ (17), years (16), ತಮ್ಮ (16), ಇಲ್ಲ (16), ಅದು (16), ಸರ್ವೋಚ್ಚ (16), ago (15), ಶ್ರೀರಾಮ್ (15), ನೀರು (15), ಯಾವುದೇ (14), ಆಯೋಗದ (14), ತೀರ್ಪು (14), ಅದನ್ನು (13), ಎಲ್ಲ (13), ಅಂತಿಮ (13), ಹಾಗೂ (13), ಕೆಲಸ (12), ನಮ್ಮ (12), ಆಯೋಗ (12), ಯಾವ (12), ಅವರಿಗೆ (12), ಅವರ (12), ಇದು (11), ನೀರಿನ (11), ಕರ್ನಾಟಕ (11), ತಮಿಳುನಾಡು (11), ಸರಕಾರ (11), ವಿವಾದದ (11), ಕೆಲ (10), ಅದಕ್ಕೆ (10), ಹೆಚ್ಚಿನ (10), ಇಲ್ಲಿ (10), ಎರಡೂ (10), ದೊಡ್ಡ (10), ನಂತರ (10), ಅನ್ನುವುದು (10), ಅನೇಕ (9), ಅಂತ (9), ಕರ್ನಾಟಕದ (9), ತಮಿಳುನಾಡಿಗೆ (9), ಕರ್ನಾಟಕಕ್ಕೆ (9), ಅಂದರೆ (9), ರಾಜ್ಯ (9), ರಾಜ್ಯಗಳು (9), ಇದನ್ನು (9), ಅವರು (9), ತನ್ನ (9), ರೀತಿಯ (9), ನಡುವೆ (9), ಇರುವ (8), ಜೊತೆಗೆ (8), ನಿಮಗೆ (8), ವಿದ್ಯಾರ್ಥಿಗಳು (8), ಈಗಿನ (8), ವರ್ಷಗಳಲ್ಲಿ (8), ರಾಜ್ಯಗಳ (8), ಮೂಲಕ (8), ತೀರ್ಪನ್ನು (8), ಮುಂದೆ (8), ಅದರಲ್ಲಿ (8), ಮಧ್ಯಂತರ (8), ಹಾಸ್ಯ (8), ಆದೇಶ (7), ಕೆಲವು (7), ಪ್ರಶ್ನೆ (7), ಇದೇ (7), ಅದರ (7), ಹೇಗೆ (7), ನಮಗೆ (7), ಮೊದಲಿಗೆ (7), ನ್ಯಾಯಾಲಯದ (7), ಹೀಗೆ (7), ಮಾಡಲು (7), ಭಾವನೆ (7), ಕಾವೇರಿಯ (7), ವಿವಾದ (7), ನೋಡಿ (7), ಉನ್ನತ (7), ರೀತಿಯಲ್ಲಿ (6), ಕಡಿಮೆ (6), ಮತ್ತೆ (6), ಅಲ್ಲ (6), ನೋಡಿದರೆ (6), ಇಂಥ (6), ಮಾತ್ರ (6), ಆಯೋಗವನ್ನು (6), ತಮಿಳುನಾಡಿನ (6), ಸರಕಾರದ (6), ನಡುವಿನ (6), ಮತ್ತೊಂದು (6), ಒಪ್ಪಂದ (6), ಮನವಿ (6), ಕೇಂದ್ರ (6), ಎಷ್ಟು (6), ಪುಟ್ಟ (5), comments (5), posted (5), ನನ್ನನ್ನು (5), ಬೇಕಾದ (5), ಆಯಾ (5), ಕಾರಣ (5), ಇನ್ನೂ (5), ಎಂಬ (5), ಬರೆಯುವ (5), ಸಾಧ್ಯತೆ (5), ಹೊಸ (5), 2009 (5), ಆಧಾರದ (5), ನಿರ್ವಹಣಾ (5), ಕರ್ನಾಟಕದಿಂದ (5), ಕೇರಳ (5), ಮಿಕ್ಕ (5), ಹಿಂದೆ (5), ಅದೇ (5), ಹೆಚ್ಚಾಗಿ (5), ರಾಜ್ಯದ (5), ಕರ್ನಾಟಕದಲ್ಲಿ (5), ಆದೇಶವನ್ನು (5), ಸಂವಿಧಾನದ (5), ಅನ್ಯಾಯವಾಗಿದೆ (5), ಹಾಗೆ (5), ಮೂರು (5), ಮದ್ರಾಸು (5), ಜಲವಿವಾದಗಳ (5), ನ್ಯಾಯಾಲಯಕ್ಕೆ (5), ನ್ಯಾಯಾಲಯ (5), ಆದೇಶದ (5), ತೀವ್ರ (5), ಬಂದ (5), ಪ್ರತಿಶತ (5), ವಿಷಯ (5), ಚಾಪ್ಲಿನ್ (5), ಹೋಗಿ (5), ಕಾಲ (4), labels (4), ಇದಕ್ಕೆ (4), ಎರಡು (4), ಬಹುಶಃ (4), ಹೆಚ್ಚು (4), ಇದೆ (4), ಆದರೂ (4), ಕಥೆ (4), march (4), ಇತರ (4), ಕಡೆಗೆ (4), ಮೂಲ (4), ಬೇಕು (4), ತಕ್ಕಂತೆ (4), ಜೊತೆ (4), ಬಂದರೆ (4), ಬದಲಿಗೆ (4), ೧೯೨ (4), ಸಾಕಷ್ಟು (4), ಯಾರೂ (4), ಮಾತು (4), ನಾಲ್ಕೂ (4), ಆದೇಶದಲ್ಲಿ (4), ಮಟ್ಟಿಗೆ (4), ತೀರ್ಪಿನ (4), ಜನರ (4), ಮಾಡಿದರೆ (4), ನೀಡಿದೆ (4), ಬಹಳ (4), ಅಲ್ಲಿಂದ (4), ಲೇಖಕ (4), ಕಾಯಿದೆ (4), ಯಾವುದಾದರೂ (4), ಸಂಬಂಧಗಳನ್ನು (4), ಮುಖ್ಯ (4), ಇತ್ಯರ್ಥ (4), ರೀತಿ (4), ಅಯ್ಯರ್ (4), ಮುತಾಲಿಕ್ (4), ಕಾಮೆಡಿ (4), ಚಿತ್ರದಲ್ಲಿ (4), ಹಿಡಿದು (4), ವ್ರೈ (4), ಅವನು (4), ಸಂಬಂಧ (4), ವಿದ್ಯಾರ್ಥಿಗಳ (4), ಸಮಯ (4), ಶುಷ್ಕ (3), ನಗೆ (3), ಸೆಪ್ಟೆಂಬರ್ (3), ವಿಚಾರಗಳು (3), ಕವಿ (3), ಇತ್ಯಾದಿ (3), ಬರವಣಿಗೆ (3), ಬರೆಯಲು (3), ಕನ್ನಡದ (3), ಸಂದರ್ಭಕ್ಕೆ (3), ಮಾಧ್ಯಮ (3), ಇರುವುದು (3), ತಿಳಿಯದು (3), ಮೊದಲು (3), ತುಸು (3), ಮಾಧ್ಯಮವನ್ನು (3), ಬರೆದರೆ (3), ಭಿನ್ನ (3), ಸಹಜವೇ (3), ಅನ್ನಿಸುತ್ತದೆ (3), ಕನ್ನಡದಲ್ಲಿ (3), ಉದಾಹರಣೆಗೆ (3), ಎಲ್ (3), ಏನು (3), ಬರವಣಿಗೆಯನ್ನು (3), ಇದರಲ್ಲಿ (3), ಪ್ರಯೋಗ (3), ಬಗೆಯ (3), ಇತ್ತು (3), ನೀವು (3), ಇಷ್ಟು (3), ಪ್ರ (3), ಎಲ್ಲವೂ (3), ಒಪ್ಪಂದದ (3), ಕೊರತೆಯ (3), ಟೀಕಿಸಬಹುದು (3), ೨೭೦ (3), ಸಹಜವಾಗಿ (3), ಹರಿಯುವ (3), ಮಹತ್ವದ (3), ನಿಗದಿಮಾಡಿರುವ (3), ಭವಿಷ್ಯದಲ್ಲಿ (3), ಪರಿಸ್ಥಿತಿ (3), ಕೇರಳಕ್ಕೆ (3), ಕಬಿನಿ (3), ಹಾಗೆಯೇ (3), ಅನ್ನುವುದನ್ನು (3), ಗಮನಿಸಬೇಕು (3), ಉತ್ತರ (3), ೪೧೯ (3), ಉತ್ತಮ (3), ಮಟ್ಟಕ್ಕೆ (3), ಸರಿ (3), ಕೆಲಸವನ್ನು (3), ಬಿಟ್ಟು (3), ಕೂಡಿದ್ದು (3), ರಾಜಕೀಯ (3), ನಂಬಿಕೆ (3), ಮಾಡುತ್ತಿರುವ (3), ಕಾನೂನು (3), ರಾಜ್ಯಕ್ಕೆ (3), ಮೂಲಭೂತವಾಗಿ (3), ನಡೆದ (3), ಆಯೋಗಕ್ಕೆ (3), ೧೯೨೪ರ (3), ಮೈಸೂರು (3), ಹಿನ್ನೆಲೆಯಲ್ಲಿ (3), ಪರಿಸ್ಥಿತಿಯಲ್ಲಿ (3), ಪ್ರಕಾರ (3), ವಿವಾದವನ್ನು (3), ಕಾಯಿದೆಯನ್ವಯ (3), ನೀಡಿರುವ (3), ಮಾಡಿದ (3), ಬಂದಿದೆ (3), ಒಟ್ಟಾರೆ (3), ಮಟ್ಟದಲ್ಲಿ (3), ಹಲವು (3), ಪ್ರಯತ್ನ (3), ವಿಷಯದಲ್ಲಿ (3), ಸ್ವಲ್ಪ (3), ರೈತರು (3), ನಿಟ್ಟಿನಲ್ಲಿ (3), ಬಂದಿರುವ (3), ಎನ್ನುವ (3), ನೀಡಿತು (3), ಮೂಲಭೂತ (3), ಇತಿಹಾಸ (3), ಆಗಿತ್ತು (3), ಲೇಖನವನ್ನು (3), ಕುಹಕ (3), ಹಾಸ್ಯದ (3), ಕಿಲಾಡಿಗಳು (3), ಕಪ್ಪು (3), ಕಂಡರೆ (3), ಲೇವಡಿ (3), ಗಿಳಿ (3), ನಾಸಿರ್ (3), ಗುಡ್ (3), ಬರಹಗಾರರು (3), ಕೃತಿಗಳಲ್ಲೂ (3), ಸಮಸ್ಯೆ (3), ಸಂಸ್ಥೆಗಳಲ್ಲಿ (3), ಸಂಬಂಧಗಳು (3), ಬುಕ್ (3), ಗುರುಗಳ (3), ನಾವುಗಳು (3), ಕೂತು (3), ಟಿಕೆಟ್ (3), ಫೋನ್ (3), ದಿನದ (3), was (3), ಸಂಖ್ಯೆ (2), ನಾವೇಕೆ (2), ಮಾಡುತ್ತೇವೆ (2), ಪ್ರಶ್ನೋತ್ತರಗಳು (2), ವಕ್ರ (2), ಹೃದ್ರೋಗಿಗಳು (2), ಕಡಿಮೆಯಾಗುತ್ತಾರೆ (2), ತೇಲ್ (2), ಮಾಲಿಶ್ (2), ಸಣ್ಣ (2), ಕೃಷಿ (2), ಮೀನಿನ (2), ಕವಿತೆ (2), big (2), ತೆಗಳು (2), ಗೋಪಾಲಕೃಷ್ಣ (2), ಕುಂಟಿನಿಯ (2), ಕಥೆಗಳಿಗೆ (2), ಮುನ್ನುಡಿ (2), ಸಮಯದಲ್ಲಿ (2), ಕಾಲಂ (2), ಕೇಳಿದರು (2), ಪತ್ರಿಕೆಗಳಲ್ಲಿ (2), ಹುಟ್ಟಿಸುವ (2), ಕೊಡಲು (2), ಸಲ್ಲದ (2), ಲೇಖನಗಳನ್ನು (2), ದಿನ (2), ಪತ್ರಿಕೆಗಳು (2), ಪ್ರಕಟಿಸಲು (2), ಲೇಖನಗಳು (2), ಬ್ಲಾಗಿನ (2), ಚರ್ಚೆ (2), ಅಲ್ಲಿನ (2), ಆಗಿರಬಹುದು (2), ಪ್ರತಿಕ್ರಿಯೆ (2), ಅಸಮಾಧಾನ (2), ಸಾಧನೆ (2), ಅನ್ನಿಸುವುದಿಲ್ಲ (2), ಭಾಷೆಗೆ (2), ಇದೂ (2), ಪರಿಕರಗಳನ್ನು (2), ಬ್ಲಾಗನ್ನು (2), ಅದೂ (2), blogspot (2), com (2), ನಿಮ್ಮ (2), ಬರೆಯುತ್ತಾ (2), ಐಡಿಯಾ (2), ಕಂಡಾಗ (2), ಅದ್ಭುತ (2), ಸಾಲದ್ದಕ್ಕೆ (2), ವರ್ಷಗಳಿಂದ (2), ಕಂಪ್ಯೂಟರ್ನಲ್ಲಿ (2), ಅದನ್ನ (2), ಬರವಣಿಗೆಯ (2), sunday (2), ಎಲ್ಲವನ್ನೂ (2), ನೀರಿಗಿಂತ (2), ಬಳಕೆಯ (2), ಬುದ್ಧಿಜೀವಿಗಳು (2), ಆಯೋಗಗಳೂ (2), ಪರಿಹರಿಸುವ (2), ನಡೆಯುತ್ತಿರುವ (2), ನಿರಶನ (2), ಸತ್ಯಾಗ್ರಹ (2), ತಕ್ಷಣಕ್ಕೆ (2), ಕೊರತೆಯಿರುವ (2), ಹಂಚಿಕೊಳ್ಳುವ (2), ಏರ್ಪಾಟು (2), ಅರ್ಥವನ್ನು (2), ಕೂಡಲೇ (2), ಮೊದಲ (2), ತೀರ್ಪಿನಲ್ಲಿ (2), ತಪ್ಪು (2), ವಿವರವಾದ (2), ಸೂತ್ರವನ್ನು (2), ಅಂಶದ (2), ಅಮಲು (2), ಮಾತುಕತೆ (2), ತೀರ್ಮಾನ (2), ಇರುತ್ತದೆ (2), ಕಷ್ಟವಾಗುತ್ತದೆ (2), ಮಾತೆಂದರೆ (2), ಸಂಬಂಧಿಸಿದ್ದು (2), ಹೇಳಿ (2), ವಿವರಗಳನ್ನು (2), ಎರಡನೆಯದಾಗಿ (2), ರಾಜ್ಯಗಳಿಗೆ (2), ಬಿಡುವುದಿಲ್ಲ (2), ಬಿಡ (2), ಪುದುಚ್ಚೇರಿ (2), ಅಣೆಕಟ್ಟುಗಳ (2), ಹಕ್ಕನ್ನು (2), ಲೇಖಕನ (2), ಪ್ರಶ್ನೆಗೆ (2), ಆಗಿದೆ (2), ಪುದುಚ್ಚೇರಿಗೆ (2), ನಿಜಕ್ಕೂ (2), ಅನ್ಯಾಯ (2), ಬಂದಿದ್ದಾರೆ (2), ಪಡೆದ (2), ಮೊದಲಿನಿಂದಲೂ (2), ರಾಜಕಾರಣಿಗಳು (2), ಪ್ರಕ್ರಿಯೆಯನ್ನು (2), ವನ್ನು (2), ಕಾಣಿಸುತ್ತಿದೆ (2), ಇಲ್ಲವಾದ್ದರಿಂದ (2), ಅವರಿಗೂ (2), ನಿಲುವನ್ನು (2), ತೀರ್ಮಾನವನ್ನು (2), ಸಂಯುಕ್ತ (2), ಆಗಿರುವ (2), ಈಚಿನ (2), ಬಂದ್ (2), ನಿರಾಕರಿಸುವುದಕ್ಕೆ (2), ಕರೆ (2), ತಮಿಳು (2), ಸರಿಯೇ (2), ಮೇಲೇ (2), ದುರಂತವೆಂದರೆ (2), ಹಿಂದಿನ (2), ಕಾರನ್ನು (2), ದೇಶದ (2), ಮಾಜಿ (2), ಎನ್ನಬಹುದು (2), ಇನ್ನಷ್ಟು (2), ವಿವಾದಗಳನ್ನು (2), ಸಂಸ್ಥೆಗಳು (2), ಮಾತುಗಳನ್ನು (2), ಇರುತ್ತಾರೆ (2), ಬಲ್ಲ (2), ಮಾತೇ (2), ತಮಿಳುನಾಡಿನಲ್ಲಿ (2), ಇಂಥದೇ (2), ಆಗುವ (2), ಈಗಾಗಲೇ (2), ಪುದುಚ್ಚೇರಿಯ (2), ಬದ್ಧ (2), ಕಲಮಿನಡಿಯಲ್ಲಿ (2), ತೆಗೆದುಕೊಳ್ಳಲು (2), ಕಾರಣವೂ (2), ಪೂರ್ವಾಗ್ರಹ (2), ಪರಿಗಣಿಸಲು (2), ಆಗುವುದಿಲ್ಲ (2), ನ್ಯಾಯಸಮ್ಮತವಾದ (2), ಪರಿಗಣಿಸಿ (2), ಅಲ್ಲಿ (2), ಅನ್ನುವುದಕ್ಕೆ (2), ಆಸ್ಪದವೇ (2), ಒಮ್ಮೊಮ್ಮೆ (2), ಅದರಿಂದ (2), ಮೊದಲೇ (2), ತಿಂಗಳುಗಳೊಳಗಾಗಿ (2), ಅನುಮಾನಗಳನ್ನು (2), ಕಾರಣಗಳಿಗಾಗಿ (2), ಜನತೆಯ (2), ೧೮೯೨ರ (2), ಮುಂದಕ್ಕೆ (2), ರಾಜ್ಯಗಳಲ್ಲಿ (2), ಕಾಲಕ್ಕೆ (2), ನಿಲುವನ್ನೂ (2), ೧೯೫೬ರ (2), ಅನ್ವಯ (2), ರೀತಿಯಾದ (2), ವಿಚಾರವನ್ನು (2), ವಿರುದ್ಧ (2), ಆಸ್ಪದವಿಲ್ಲ (2), ಸಾಧ್ಯವಿಲ್ಲ (2), ನಿಲುವು (2), ೨೬೨ನೇ (2), ಕಲಮು (2), ತಜ್ಞರ (2), ಅಂತರರಾಜ್ಯ (2), ಪುನಃ (2), ಆದೇಶಕ್ಕೆ (2), ಆದೇಶದಷ್ಟೇ (2), ಬದ್ಧತೆಯಿದೆ (2), ಸಾಧ್ಯತೆಯಿರಬಹುದು (2), ವಿವರಣೆ (2), ದೃಷ್ಟಿಗೆ (2), ಬಗೆಗೆ (2), ರೂಪದಲ್ಲಿ (2), ವಿಚಾರಗಳ (2), ಮರುಪರಿಶೀಲನೆ (2), ತ್ವರಿತಗತಿಯಲ್ಲಿ (2), ಆಶಿಸಬೇಕಾಗಿದೆ (2), ಆಸ್ಪದವಿದೆಯೇ (2), ಕೆಲವರು (2), ಕೇರಳದಲ್ಲೂ (2), ವಿಶ್ವಸನೀಯತೆಯ (2), ಮಟ್ಟದ (2), ಇರಬೇಕೋ (2), ಅನ್ನುವುದರ (2), ಹರಿವು (2), ಪ್ರತಿಶತವಾದರೂ (2), ಆಧಾರವಾಗಿ (2), ಇನ್ನು (2), ಅಡಿಯನ್ನು (2), ಸಮುದ್ರಕ್ಕೆ (2), ಅನಿವಾರ್ಯವಾಗಿ (2), ೧೮೨ (2), ಸೇರಿಸಿದರೆ (2), ಲಭ್ಯವಾಗುತ್ತದೆ (2), ರೂಪ (2), ವ್ಯವಸ್ಥೆ (2), ಹಿಂಸಾಚಾರ (2), ಪ್ರಯತ್ನವನ್ನು (2), ಮಾಡಬೇಕು (2), ಗುಹನ್ (2), ಪ್ರಯತ್ನಗಳನ್ನು (2), ತದನಂತರ (2), ಮನೆಯಲ್ಲಿ (2), ಸಭೆ (2), ಸಂಸ್ಥೆಯ (2), ಒಂದೆಡೆ (2), ಸುಮಾರು (2), ಸ್ನೇಹಭಾವದಿಂದ (2), ಪರಿವಾರದ (2), ಪರಸ್ಪರ (2), ಅರ್ಥಮಾಡಿಕೊಳ್ಳುವ (2), ಮಾಡಿದ್ದಾರೆ (2), ಪರಿವಾರ (2), ಚರ್ಚಿಸುವ (2), ಬಗೆಗಿನ (2), ಮೇರೆಗೆ (2), ಮುಂದಿನ (2), ಕೆಲಕಾಲದ (2), ಚರ್ಚಿಸೋಣ (2), ೧೯೯೦ರಲ್ಲಿ (2), ಬಿಡಬೇಕೆಂಬ (2), ಬಂದಿತು (2), ಬರುವುದು (2), ಜಲಾನಯನ (2), ಪ್ರದೇಶದಲ್ಲಿ (2), ನೀರಾವರಿ (2), ಮೇಲ್ಮಟ್ಟದಲ್ಲಿರುವ (2), ಆಶಿಸುತ್ತಿರುವ (2), ಅತೀ (2), ಆಸಕ್ತಿಗಳನ್ನು (2), ನಿಲುವುಗಳನ್ನು (2), ರಾಜ್ಯದಲ್ಲಿ (2), ತುಸುವಾದರೂ (2), ಅಂತರ (2), ವಿವಾದಗಳ (2), ಮಾರ್ಗ (2), ಬದಲಾವಣೆಗಳು (2), ಕೋರಿಕೆ (2), ಮಧ್ಯದಲ್ಲಿ (2), ನೀರಾವರಿಗೆ (2), ರೈತರ (2), ಮಾತುಕತೆಯ (2), ಭಾರತ (2), ಸಂಬಂಧಿಸಿದ (2), ಆಗಾಗ (2), ಕಮಿಟಿಯ (2), ಒಪ್ಪಂದವನ್ನು (2), ಚುನಾಯಿತ (2), ಸಂಪೂರ್ಣ (2), ವರ್ಷಗಳ (2), ಅನ್ನುವುದೂ (2), ಬರುವ (2), ಭಾಗ (2), ಉದ್ದೇಶ (2), ತೀರ್ಪಿಗೆ (2), ಪ್ರತಿಕ್ರಿಯೆಗಳನ್ನು (2), ಲೇಖಕರು (2), ಸರಕಾರದಲ್ಲಿ (2), ಲೇಖನ (2), ಹಾಕುತ್ತಿದ್ದೇನೆ (2), ಪ್ರಶ್ನೆಗಳು (2), ಬಳಿಗೆ (2), ಆರ್ (2), ಅದರಲ್ಲಿನ (2), monday (2), ಶ್ಯಾಂ (2), ಬೆನೆಗಲ್ (2), ವುಡೀ (2), ಬ್ರಾಂಡಿನ (2), ಪಿಂಕ್ (2), ಆಗಿಯೂ (2), ನಲ್ಲಿ (2), ಮುಖದಲ್ಲಿ (2), ಕೆಂಪು (2), ಘಟನೆ (2), ರೈನ (2), ಇಲ್ಲದ (2), ಸಹಾಯಕ (2), ಹಗ್ಗದ (2), ಅಂಗಡಿಯವನು (2), ನೇಣು (2), ನಡೆಯುತ್ತದೆ (2), ಯಾರಿಗೂ (2), ಟೆಸ್ಟಿಕಲ್ಲಿನ (2), ಕ್ಯಾನ್ಸರು (2), ಒಳ್ಳೆಯ (2), ಅಕಸ್ಮಾತ್ (2), ಯಾವುದು (2), ಕೇಳಿದರೆ (2), ಕಾಣುವ (2), ಹೀಗೇ (2), ತಿರುಮಲೇಶರ (2), ಸಿನೇಮಾದಲ್ಲಿ (2), ಶಬನಾ (2), ಬಕೆಟ್ಟನ್ನು (2), ವಾಟ್ಸ್ (2), ಫೀಲಿಂಗ್ (2), ನಗರದ (2), ವೈರಸ್ಸನ್ನು (2), ರೋಗವನ್ನು (2), ಚಿತ್ರದ (2), ಹೊಮ್ಮುವ (2), ಮಾಡಿಸುವ (2), ವಿದೂಷಣ (2), ಪಾನ (2), ನಿಮ್ಮನ್ನು (2), ವಿಮರ್ಶಕರ (2), ವಾಟಾಳ್ (2), ಮಯೂರ (2), ಬರೆದ (2), ಸ್ವಾಮಿ (2), ನಗು (2), ವ್ಯಾಲೆಂಟೈನ್ಸ್ (2), ಮದುವೆ (2), ಯೋಚಿಸಿ (2), ಸಾಹಿತ್ಯ (2), ಜೀವನ (2), ಯಾಕೆ (2), ಕೇಳಿದ (2), ಗುರು (2), ಶಿಕ್ಷಣ (2), ವಿದ್ಯಾರ್ಥಿಗಳೊಂದಿಗೆ (2), ಮಾತನಾಡಲು (2), ಜಗತ್ತಿಗೆ (2), ಕಲಿಸಿದ್ದಾರೆ (2), ಒಬ್ಬ (2), ಕಾಲದ (2), ವಿದ್ಯಾರ್ಥಿಗಳೇ (2), ಬಂದು (2), ಲುಕ್ (2), ಕೂಲ್ (2), ಫೇಸ್ (2), ಇರುತ್ತಿರಲಿಲ್ಲ (2), ಕೂದಲನ್ನು (2), ಕತ್ತರಿಸಿದ್ದ (2), ವಿದ್ಯಾ (2), ಅರ್ಥ (2), ಜೋರಾಗಿ (2), ಜೀವನದಲ್ಲಿ (2), ಭಿನ್ನವಾಗಿದೆ (2), ಕಾಡಿದೆ (2), ಅವರೊಂದಿಗೆ (2), ಮಾತನಾಡಬಹುದಿತ್ತು (2), ಬೋಧನಾ (2), ಗೂಗಲ್ (2), ಜಗತ್ತಿನ (2), ಗುರುಗಳಿರುತ್ತಿದ್ದರು (2), ಗುರುಗಳೂ (2), ಇಂದಿನ (2), ತೆಗೆದು (2), ಮನೆಗೆ (2), ವಾರಕ್ಕೊಮ್ಮೆ (2), ಟೆಲಿಗ್ರಾಂ (2), ಕಳೆದ (2), ಹದಿನೈದು (2), ಬದಲಾಗಿದೆ (2), ಮೇಷ್ಟರ (2), ಬದಲಾಗುತ್ತದೆ (2), the (2), old (2), man (2), when (2), skip (2), followers, ಭೇಟಿಯಿತ್ತ, ಅತಿಥಿಗಳ, ಕಪಾಟಿನೊಳಗಿನ, ನೆನಪುಗಳು, ಮಾಯಾದರ್ಪಣ, ಅಪಘಾತ, ಅವರವರ, ಸತ್ಯ, ಯಕ್ಷ, ಅಲೆಮಾರಿ, ಆತ್ಮದ, ಕಥನ, ಮಥನ, ರೂಮಿ, ಟೋಪಿ, ಕನಸು, ಕಟ್ಟುವ, ಲೈಫ್, ಸೈಕಲ್, ಪ್ರಬಂಧ, ಲೋಕ, ಬಂಡವಾಳಶಾಹಿ, ತತ್ವದ, ನಿರಂತರತೆ, ಶನಿವಾರ, ಸಂತೆ, ಊರುಗೋಲು, ಕಥೆಗಳು, ಅಂತರರಾಷ್ಟ್ರೀಯ, ಬುಕರ್, ಅನಂತಮೂರ್ತಿಯವರ, ಮಾರುಕಟ್ಟೆಯ, ಅರ್ಥಾರ್ಥ, ಆಸೆಗಳು, ನನ್ನದಲ್ಲದ, data, concerns, writer, blogk, ಸುರಂಗದಂಗಡಿಗಳು, ಪುಸ್ತಕಲೋಕ, ಕನ್ನಡವೇ, ನಿತ್ಯ, ಆದಿ, subscribe, posts, atom, home, ಸುಧಾ, ಪವನಜ, ಸಿಕ್ಕಿದ್ದು, ಸಫಲತೆ, ಸಂತೋಷ, ಪತ್ರಿಕೆ, ನೌಕರಿಯ, ಮಿತಿಯಲ್ಲಿ, ಓಡಾಟದ, ಒತ್ತಡದಲ್ಲಿ, ಕನ್ನಡನಾಡಿನಿಂದ, ದೂರವಿರುವುದರಿಂದ, ಸಮರ್ಪಕವೆನ್ನಿಸುವ, ಸಾಧ್ಯವಿಲ್ಲವೆಂದು, ಮನದಟ್ಟಾಯಿತು, ಬರೆಯುವಾಗ, ಪದಮಿತಿಯ, ಬಂಧನವೂ, ಮನಸ್ಸಿನಲ್ಲಿತ್ತು, ಬ್ಲಾಗಿನಲ್ಲಿ, ಅತ್ಯಂತ, ಅದ್ಭುತವಾದ, ದೊರೆಯಿತು, ಯಾಕೆಂದರೆ, ಅನಿಯತಕಾಲಿಕವಾಗ, ಬಹುದು, ಪದಮಿತಿಯಿಲ್ಲಿದೇ, ಬರೆಯಬಹುದು, ಚಿತ್ರಗಳನ್ನು, ಇದರ, ವಿನ್ಯಾಸವನ್ನೂ, ನಾನೇ, ರೂಪಿಸಬಹುದಿತ್ತು, ಆಸಕ್ತಿ, ಲೇಖನಗಳಿಗ, ಕೊಂಡಿಯನ್ನೂ, ಸಾಧ್ಯವಿತ್ತು, ಇಲ್ಲಿಯೂ, ಅಲ್ಲಿಯೂ, ಸಾಧ್ಯವಾಯಿತು, ಬರಹದಲ್ಲಿ, ವಾರ, ಇಷ್ಟಪಡುವಂಥವುದಲ್ಲ, ಸಾಹಿತ್ಯಿಕ, ಬೆರಳೆಣಿಕೆಯಷ್ಟು, ಅವೂ, ಅನಿಯತಕಾಲಿಕಗಳಾದ್ದರಿಂದ, ಯಾವಾಗ, ಪ್ರಕಟಗೊಳ್ಳುವುದೋ, ಹಿಡಿಸಿತು, ಕನ್ನಡದಲ್ಲಲ್ಲದೇ, ಇಂಗ್ಲೀಷಿನಲ್ಲೂ, ಪ್ರಾರಂಭಿಸಿದೆ, ಭಾಷೆಗಳಲ್ಲೂ, ಹಚ್ಚಿರುವೆನಾದರೂ, ಭಾಷೆಯ, ಒಗ್ಗುವವು, ಅನ್ನಿಸಿದೆ, ಚೆನ್ನಗಿದೆ, ಸಾಲದು, ಅದ್ಭುತವೆಂದರೆ, ಸಂಭಾಷಣೆ, ನಡೆಸಲು, ಸಾಧ್ಯ, ಬ್ಲಾಗಿಗೆ, ಬಂದಷ್ಟು, ಪ್ರತಿಕ್ರಿಯಗಳು, ಈಗೀಗ, ಬರುತ್ತಿಲ್ಲ, ಗಂಭೀರವಾಗಿರುವುದೇ, ಸಾಮಾನ್ಯವಾಗಿ, ಉಪಯೋಗಿಸುವವರು, ಇದನ್ನ, ದಿನಚರಿಯ, ಪುಟದಂತೆ, ಲೈಟಾಗಿ, ಉಪಯೋಗಿಸುತ್ತಾರೆ, ಉದಾಹರಣೆಗ, ಸೌರವ್, ಗಂಗೂಲಿಯ, ಕಪ್ತಾನಿಯ, ಬರಬಹುದು, ಉಪಯೋಗಿಸುತ್ತಿರುವುದು, ಆಶಯದಷ್ಟು, ಬರುತ್ತಿಲ್ಲವೆಂಬ, ಆಸೆಗೂ, ಮಿತಿಯಿರಬೇಕು, ಥರದ, ಮಹತ್ತರ, ಮಾಡುತ್ತದೆ, ಪರಿಕರಗಳಲ್ಲಿ, ಮಾಡುವಾಗ, ನಮಗಿರುವ, ಪರಿಕರಗಳು, ವಿನ್ಯಾಸಕ್ಕಿರುವ, ಪರಿಕರ, ಟೆಂಪ್ಲೇಟ್, ಇಂಗ್ಲೀಶ್, ಅನುಗುಣವಾಗಿ, ಹೆಚ್ಟಿ, ಎಂಎಲ್, ಜಾವಾ, ತಿಳಿಯದ, ನನ್ನಂಥವರಿಗೆ, ಕನ್ನಡಿಸುವ, ಕಷ್ಟದ್ದು, ಸಾಧ್ಯವಾದಷ್ಟು, ಅದರವಿನ್ಯಾಸವನ್ನು, ಕನ್ನಡಿಸಿದ್ದೇನೆ, ತಾರೀಖು, ತಿಂಗಳುಗಳ, ಹೆಸರುಗಳು, ಇಂಗ್ಲೀಷಿನಲ್ಲೇ, ಇವೆ, ಮಾಧ್ಯಮದಲ್ಲಿ, ಆಗಬೇಕಾಗಿದೆ, ಸಧ್ಯಕ್ಕೆ, ಕೈಬೆರೆಳೆಣಿಕೆಯಷ್ಟು, ಬರೆಯುತ್ತಿದ್ದಾರೆ, ಮಜಾವಾಣಿ, ಫೇಕ್, ಪತ್ರಿಕೆಯನ್ನು, ವಾರ್ತಾವಿದೂಷಕ, ಎಂಬವರು, ನಡೆಸುತ್ತಿದ್ದಾರೆ, ಅತ್ಯುತ್ತಮ, ಹಾಸ್ಯಕ್ಕೆ, ಓದುತ್ತೇನೆ, ನಾಗಭೂಷಣಸ್ವಾಮಿ, ಸಂಪದ, ಸಮೂಹದಲ್ಲಿ, ಬರೆಯುತ್ತಾರೆ, ಮೆಚ್ಚುಗೆಯೇ, ಇಂಗ್ಲೀಷಿನಲ್ಲಿ, ಉಮಾ, ದಾಸ್ಗುಪ್ತಾ, ಬ್ಲಾಗೂ, ಇಷ್ಟ, ಇಷ್ಟವಾದ, ಅಂತರ್ಜಾಲದ, ಪುಟಗಳ, ಕೊಂಡಿಗಳನ್ನು, ಬ್ಲಾಗಿನಲ್ಲೇ, ಕೊಟ್ಟಿದ್ದೇನೆ, indianwriting, sampada, net, majavani, ಮೆಚ್ಚಿನ, ಗಳು, ಯಾವುವು, ದೇಸೀ, ಭಾಷೆಯೊಂದನ್ನು, ಬೆಚ್ಚಗಿಡುವಲ್ಲಿ, ಪಾತ್ರ, ಓದುಗರ, ಸ್ಪಂದನ, ಹೇಗಿದೆ, ಸಿಕ್ಕಿದೆ, ವಿದ್ಯಾರ್ಥಿಗಳಿಂದ, ಬಂತು, ಅಂತರ್ಜಾಲದಲ್ಲಿ, ಅನುಭವವನ್ನು, ಬರೆಯುವುದನ್ನ, ಮುಖ್ಯವಾಗಿ, ನನ್ನದೇ, ಪಾಠಗಳ, ಬೆರೆಯುವುದನ್ನ, ಗೋಚರವಾಯಿತು, ಒಂದೆರಡು, ನಿಲ್ಲಿಸಿಬಿಟ್ಟಿದ್ದೆ, ಇಂಗ್ಲೀಷ್, ಬರಹವನ್ನು, ಬರೆಯುತ್ತಿದ್ದುದರಿಂದ, ಕಾಗದದ, ಕೈನಲ್ಲಿ, ಅಭ್ಯಾಸ, ತಪ್ಪಿಹೋಗಿತ್ತು, ಲೀಪ್, ಉಪಯೋಗಿಸುತ್ತಿದ್ದೆ, ಪ್ರತಿಬಾರಿ, ಉಪಯೋಗಿಸುವಾಗಲೂ, ಡಿಯನ್ನು, ತೂರಿಸಿಬೇಕಾಗುತ್ತಿತ್ತು, ನಿಂತೇ, ಹೋಗಿತ್ತು, ಕಂಡುಕೊಂಡಾಗ, ಅಕ್ಷರಲೋಕಕ್ಕೆ, ಕಾಲಿಡುವ, ಕಾಣಿಸಿತು, ಮಾಧ್ಯಮವಾದ್ದರಿಂದ, ಮಾಡುವುದರಲ್ಲಿ, ಥ್ರಿಲ್, ಮೂಲತಃ, ಬರಹಗಾರ, ಮಾಧ್ಯಮಗಳಲ್ಲಿ, ಮಾಡಬೇಕೆನ್ನಿಸುವುದು, ಸಹಜ, ಕಾದಂಬರಿ, ಪ್ರಬಂಧಗಳ, ಪ್ರಕಾರಗಳ, ಪ್ರಾಕಾರಗಳನ್ನು, ಮಿತಿಗಳನ್ನು, ಮೀರಲು, ಸಹಾಯ, ಮಾಡಿದೆ, ಬರೆಯುವುದು, ಏಕೆ, ಬಂದದ್ದು, ಸಂದರ್ಶನ, ಪ್ರತಿ, ರಾಜ್ಯವೂ, ತನಗೆ, ಪರಿಮಾಣವನ್ನು, ನಮೂದಿಸಿವೆ, ಕೂಡಿದರೆ, ನದಿಯಲ್ಲಿರುವ, ಬೇಕೆನ್ನಲಾದ, ಪರಿಮಾಣ, ಹೆಚ್ಚಾಗಿದೆ, ಬಿಕ್ಕಟ್ಟು, ರಾಜ್ಯಗಳಿಗೂ, ಬೇಕೇ, ಬೇಕೆ, ಭವಿಷ್ಯದ, ಅಗತ್ಯಗಳನ್ನು, ಪರಿಷ್ಕಾರಗಳೊಂದಿಗೆ, ಕಲ್ಪಿಸಲಾಗಿದೆ, ಬಹುಮಟ್ಟಿಗೆ, ತಿಳಿದಿರುವ, ವಿಷಯವೆಂದರೆ, ಉಪಯೋಗಗಳಿಗೆ, ವಿಧಾನ, ಸಮರ್ಪಕವಾದದ್ದೂ, ಗಿಟ್ಟುವ, ಮಾತೂ, ವಿಧಾನದಲ್ಲಿ, ಬಹಳಷ್ಟು, ಪೋಲು, ಮಾಡುತ್ತಿದ್ದೇವೆ, ಟಿಪ್ಪಣಿಗಳನ್ನು, ಮಾಡಿವೆ, ಸಮರ್ಪಕವಾಗಿ, ಉಪಯೋಗಿಸಬೇಕೆನ್ನುವ, ವಿವೇಕ, ಬರದೇ, ಇದ್ದಲ್ಲಿ, ಬಿಕ್ಕಟ್ಟುಗಳನ್ನು, ತಡೆಗಟ್ಟುವ, ಆಶಾಭಾವವನ್ನು, ಹೊಂದಲು, ಸಾಧ್ಯವೇ, ಬಿಕ್ಕಟ್ಟಿನ, ದೃಷ್ಟಿಯಿಂದ, ಕೋಪದ, ಹಲ್ಲು, ಕಡಿಯುವ, ಎದೆ, ಜಜ್ಜಿಕೊಳ್ಳುವ, ಅವಶ್ಯಕತೆಯೇ, ಅನವಶ್ಯಕ, ಮಾಡಬೇಕಾದ, ಕೆಲಸವೆಂದರೆ, ವಿಧಾನದ, ಚೌಕಟ್ಟನ್ನು, ಮಾಡಿಕೊಳ್ಳುವುದು, ಚರ್ಚಿಸಿದ, ಮೇಲಿನ, ಅಂಕಿ, ಸಂಖ್ಯೆಗಳೆಲ್ಲಾ, ಪರಿಸ್ಥಿತಿಯಗಳಲ್ಲಿ, ಪಡೆಯುತ್ತವೆ, ಪ್ರಾಧಿಕಾರದ, ರಚನೆಯಾದ, ಕೈಗೆತ್ತಿಕೊಳ್ಳಬೇಕಾದ, ಇದಾಗಬೇಕು, ಕಂಡುಹಿಡಿಯಲೇ, ಅನ್ನುವುದಾದರೆ, ಹಂಚಿಕೊಳ್ಳಲು, ತಾಂತ್ರಿಕ, ಅಮಲುಗೊಳಿಸಲಾಗುವಂತಹ, ನೀಡಲಿಲ್ಲ, ಒಳ್ಳೆಯದೇ, ಸ್ಪಷ್ಟವಾಗಿ, ಬದಲಾಯಿಸಲಾಗದ, ನ್ಯಾಯಾಂಗದ, ಪಡಿಸಲೇಬೇಕಾದ, ತೀರ್ಮಾನಕ್ಕಿಂತ, ಸಮಯಕ್ಕೆ, ಪ್ರಾಧಿಕಾರ, ನಡೆಸಿ, ಮಾಡಬಹುದಾಗಿದೆ, ಮಾತಿಗೆ, ಮುಖ್ಯವಾಗುವುದು, ನಿಗದಿ, ಮಾಡಿರುವ, ನೀರಲ್ಲ, ಬಿಡಬೇಕಾದ, ಇದಕ್ಕಿಂತ, ಹೆಚ್ಚಾಗಿಯೇ, ಮಳೆ, ಬಿದ್ದಾಗ, ಸಂಖ್ಯೆಯನ್ನು, ನಿಭಾಯಿಸಲು, ಅಮಲಿಗೊಳಿಸುವುದಕ್ಕಷ್ಟೇ, ಮಹತ್ವವೆಂದಿದ್ದ, ಬಿಡುವುದು, ಮಾಮೂಲು, ಮಾತೇನೂ, ಎಲ್ಲರನ್ನೂ, ಕಾಡುತ್ತಿರುವ, ಹಂಚಿಕೊಳ್ಳುವುದು, ಹೇಗೆಂಬ, ವಿಷಯಕ್ಕೆ, ನೀಡದೇ, ಪರಿಮಾಣಕ್ಕನುಸಾರವಾಗಿ, ಎಂದಷ್ಟೇ, ಮಂಡಲಿಗೆ, ಕೆಲಸವನ್ನೂ, ಬಿಟ್ಟುಕೊಟ್ಟಿದೆ, ಉಪಯೋಗಿಸುತ್ತಿದೆ, ೧೯೭೦ರಲ್ಲಿ, ಅಂದಾಜು, ಮಾಡಲಾಗಿತ್ತು, ಆಗಿನಿಂದ, ಉಪಯೋಗ, ಹೆಚ್ಚಿರಬಹುದಾದರೂ, ಉಪಯೋಗಿಸುವುದಕ್ಕೆ, ಹಿಡಿಯಲಿದೆ, ಗೋಚರಿಸುವ, ಅವಶ್ಯಕತೆಗಳನ್ನು, ಬಾಧಿಸದೇ, ಹೇರಳವಾಗಿ, ಉಪಯೋಗಿಸಬಹುದೆಂದಾಯ್ತು, ೩೦ಟಿಎಂಸಿ, ಅಧಿಕವಾಗಿ, ಬಳಸಬೇಕಾದ, ಮುಂದೆಂದಾದರೂ, ಉಂಟಾದರೆ, ಪರಿಮಿತಿಯನ್ನು, ಪುನಹ, ಪರಿಶೀಲಿಸಲು, ಪ್ರಾಧಿಕಾರವನ್ನು, ಕೇಳಬಹುದು, ಮತ್ತೂಂದು, ರಚಿಸಲು, ಮನವಿಮಾಡಿಕೊಳ್ಳಬಹುದು, ನದೀಮೂಲದ, ಕಡೆಗಿರುವ, ಸಂಖ್ಯೆಗಳು, ಕಾಲ್ಪನಿಕವಾದದ್ದು, ಆಕಾಶದಿಂದ, ಸುರಿಯುತ್ತದೆ, ಕೇರಳದಿಂದ, ಬಿಡುಗಡೆ, ಯಾಗದ, ನದಿಯ, ಬಿಟ್ಟರೆ, ಕರ್ನಾಟಕಕ್ಕೂ, ವರ್ತಿಸುತ್ತದೆ, ಹೆಚ್ಚಿನಂಶ, ಪ್ರಕೃತಿಯ, ದೇಣಿಗೆ, ಮುಖ್ಯವಾಗುವ, ಕಾರೈಕಲ್, ಗಮ್ಮತ್ತಿನ, ಹರಿಯುತ್ತಿದ್ದ, ತಡೆಹಿಡಿಯುವುದರಿಂದ, ಬಿಡು, ಕೊಡು, ಕೈಗೂಡಿಸಿಕೊಂಡವು, ಎನ್ನುವುದೇ, ಅಸಾಂಪ್ರದಾಯಿಕ, ದೃಷ್ಟಿಯಲ್ಲಿ, ಸಂಖ್ಯೆಗಳಲ್ಲಿ, ಅರ್ಥವೂ, ಆಶ್ಚರ್ಯಕರವಾಗಿರಬಹುದು, ವಿವರಿಸುವ, ಅಗತ್ಯವಿದೆ, ಆದೇಶದಿಂದ, ಚಕಿತರಾಗುವುದಕ್ಕೆ, ಕಾರಣವಿದೆಯೇ, ದೇವೇಗೌಡ, ವಕೀಲರು, ಉಂಟುಮಾಡುತ್ತಿರುವಂಥದ್ದು, ನಿರ್ಧಾರಕ್ಕೆ, ಪ್ರಶ್ನೆಯನ್ನು, ಸಂದರ್ಭದಲ್ಲಿ, ಜಯಲಲಿತಾರನ್ನೂ, ಕೇಳಬೇಕು, ಇವುಗಳನ್ನು, ಮಾತುಗಳೆಲ್ಲಾ, ಯೋಚಿಸದೇ, ಆಡಿದವು, ಬೇರೊಬ್ಬರಿಂದ, ಬಳುವಳಿಯಾಗಿ, ಪೂರ್ವಾಗ್ರಹಪೀಡಿತ, ಅಭಿಪ್ರಾಯಗಳು, ಕರ್ನಾಟಕದಲ್ಲಿನ, ನ್ಯಾಯಾಂಗ, ವಿರೋಧಿಸುತ್ತಲೇ, ನ್ಯಾಯಾಂಗದಿಂದ, ಫಲಿತಾಂಶ, ಬರಬಹುದೆಂಬ, ನಂಬಿಕೆಯೂ, ಅವರಿಗಿರಲಿಲ್ಲವಾದ್ದರಿಂದ, ನಿರೀಕ್ಷಿಸಿದ್ದರು, ಹೇಳುವುದಾದರೆ, ರಾಜ್ಯವೇ, ಬಳಸುತ್ತಿದ್ದ, ದಿನಗಳನ್ನು, ನೆನಪುಮಾಡಿಕೊಳ್ಳುತ್ತಾರೆ, ಪರವಾಗಿ, ಒಪ್ಪುವುದು, ಭೂತಕಾಲಗಳನ್ನು, ಬಿಟ್ಟುಕೊಡದಿದ್ದಲ್ಲಿ, ವಿವೇಚನಾಶೀಲ, ತೆಗೆದುಕೊಳ್ಳುವ, ವಾದಸರಣಿಯಲ್ಲಿ, ಆದೇಶವನ್ನೂ, ಟೀಕೆ, ಕಾನೂನಿನ, ಚೌಕಟ್ಟಿನೊಳಗೆ, ಸಂವಿಧಾನಕ್ಕೆ, ರಾಜ್ಯಗಳಿರುವ, ರಾಷ್ಟ್ರದ, ತತ್ವಕ್ಕೆ, ಒಳಪಟ್ಟು, ಇರಬೇಕಾದದ್ದು, ಅವಶ್ಯಕ, ಬೆಳವಣಿಗೆಗಳು, ಆತಂಕಕ್ಕೆ, ಕಾರಣವಾಗುತ್ತದೆ, ಕರೆದು, ಕೆಲಸಗಳನ್ನೂ, ತಡೆಗಟ್ಟುವುದು, ನೀಡುವುದೂ, ಸಮಂಜಸ, ಅನ್ನಿಸುವಂತಹ, ಕ್ರಿಯಗಳಲ್ಲ, ಜನಜೀವನ, ಅಸ್ತವ್ಯಸ್ತಗೊಳಿಸುವಂತಹದ್ದೇನನ್ನೂ, ಮಾಡಬಾರದು, ಶಾಂತಿಯುತವಾಗಿತ್ತು, ಅಂದರೂ, ಜನಜೀವನಕ್ಕೆ, ಅಡ್ಡಿಯುಂಟುಮಾಡಿದ್ದರಿಂದ, ಹಿಂಸಾತ್ಮಕವಾದದ್ದು, ಚಿತ್ರಗಳ, ಪ್ರದರ್ಶನವನ್ನು, ನಿಲ್ಲಿಸಲು, ನೀಡವುದು, ವ್ಯಾಜ್ಯವಿರುವುದು, ವಿನಃ, ಕರ್ನಾಟಕದಂತೆಯೇ, ಅಹವಾಲು, ಅರ್ಪಿಸಿ, ನಿಂತಿದ್ದ, ಜೊತೆಗಲ್ಲ, ವಿರುದ್ಧವಂತೂ, ಅಲ್ಲವೇ, ಜನರನ್ನು, ಎಚ್ಚರಗೊಳಿಸುವುದಕ್ಕೆ, ಬದಲಾಗಿ, ನಾಯಕರು, ರಾಜಕೀಯಕಾರಣಗಳಿಗಾಗಿ, ತಪ್ಪುದಾರಿ, ಹಿಡಿಸಿ, ರೊಚ್ಚಿಗೆಬ್ಬಿಸುತ್ತಿದ್ದಾರೆ, ಮುಖ್ಯಮಂತ್ರಿಗಳಾಗಿದ್ದ, ಕೃಷ್ಣ, ಸರ್ವೂಚ್ಚ, ಧಿಕ್ಕರಿಸಿ, ಇಂತಹ, ಮಾಡಿದ್ದರು, ಓರ್ವ, ಮಂತ್ರಿ, ಮಂಡ್ಯದಲ್ಲಿ, ನಿಲ್ಲಿಸಿದಾಗ, ಹೊರಬಂದು, ಜನರಿಗೆ, ತಿಳಿಹೇಳುವುದನ್ನು, ಅವರೊಂದಿಗೇ, ನಿರಶನದಲ್ಲಿ, ಭಾಗಿಯಾಗಿದ್ದಾರೆ, ಸಾರಾಸಗಟು, ಏಕಪಕ್ಷವಾದದ್ದು, ಪೂರ್ವಾಗ್ರಹದಿಂದ, ನಿರಂಕುಶವಾದದ್ದು, ಬಣ್ಣಿಸಿದ, ಪ್ರಧಾನಮಂತ್ರಿಗಳಾದ, ದೇವೇಗೌಡರ, ಮಾತುಗಳು, ಅದಕ್ಕಿಂತಲೂ, ಪ್ರಶ್ನಾರ್ಹವಾದ, ಕ್ರಿಯೆ, ಬಿದ್ದಬೆಂಕಿಯನ್ನು, ನಂದಿಸುವುದಕ್ಕೆ, ಬದಲು, ತುಪ್ಪ, ಸುರಿದು, ಪಾಕೃತಿಕ, ಸಂಪನ್ಮೂಲಗಳ, ಮಾಡುವ, ಲಕ್ಷಣಗಳು, ಐಕ್ಯತೆ, ಒದಗಿರುವ, ಅಪಾಯ, ಆಯೋಗಗಳಂತಹ, ಕಳೆದುಕೊಳ್ಳುತ್ತಿರುವ, ಆಡಿದ್ದಾರೆ, ಕಪಟ, ಸೋಗಿನ, ಮಾತುಗಳಲ್ಲಿರುವ, ವಿಡಂಬನೆಯನ್ನು, ಜನರು, ಗಮನಿಸಿಯೇ, ಕಾನೂನನ್ನು, ಸಂವಿಧಾನವನ್ನೂ, ಅರ್ಥಮಾಡಿಕೊಂಡಿರುವ, ವಕೀಲರೂ, ನ್ಯಾಯಾಲಯಗಳನ್ನು, ಬೀದಿಗಿಳಿದಿರುವುದು, ಸೋಜಿಗದ, ಅವರುಗಳ, ನಡುವಿನಲ್ಲಿನ, ಹಿರಿಯರು, ತಾವು, ಅಸಮಂಜಸ, ಕೃತ್ಯದಬಗ್ಗೆ, ಬುದ್ಧಿಮಾತು, ಹೇಳಲಿಲ್ಲವೇ, ಇಷ್ಟೇ, ಅಸಮಾಧಾನವಿದ್ದಿದ್ದರೆ, ಕೃತ್ಯಗಳು, ತಮಿಳುನಾಡಿನಲ್ಲೂ, ಹೇಳುವುದರಲ್ಲಿ, ಅತಿರೇಕವೇನೂ, ಜಯಲಲಿತಾ, ಜವಾಬ್ದಾರಿರಹಿತ, ಮಾತುಗಳನ್ನಾಡಿಬಿಟ್ಟಿದ್ದಾರೆ, ನಿರಸನ, ವರ್ತಮಾನಕ್ಕೆ, ಬಗ್ಗೆಗೂ, ಅನ್ವಯವಾಗುತ್ತದೆ, ತಗಾದೆಯನ್ನು, ಒಯ್ದರು, ಮತ್ತೊಂದಕ್ಕಿಂತ, ಶಕ್ತಿಶಾಲಿಯಾಗಿ, ಇರಲೂ, ದೃಕ್ಪಥವನ್ನು, ಹೇರಿ, ಒಪ್ಪಿಸಲೂ, ಸಾಧ್ಯವಾಗಲಿಲ್ಲ, ಏರ್ಪಾಟಾಗಿದ್ದು, ಅಧಿಕಾರವನ್ನು, ಪಡೆದಿತ್ತು, ಆಯೋಗದಲ್ಲಿ, ಮೂವರು, ನ್ಯಾಯಮೂರ್ತಿಗಳಿದ್ದರು, ಇವರಲ್ಲಿ, ಸೇರಿದವರಲ್ಲ, ನ್ಯಾಯ, ಮೂರ್ತಿಗಳು, ರಾಜ್ಯದತ್ತ, ಒಲವು, ತೋರಿ, ವಿರುದ್ಧದ, ಕಾರಣಗಳಿರಲಿಲ್ಲ, ಅಲ್ಲದೇ, ನ್ಯಾಯವನ್ನೊದಗಿಸಲೆಂದೇ, ಏರ್ಪಾಟಾದ, ಅನ್ಯಾಯವೆಸಗಲು, ಕಾಣಿಸುತ್ತಿಲ್ಲ, ಪೀಡಿತವಾಗಿತ್ತು, ಆರೋಪವನ್ನು, ಮಾರ್ಗದಲ್ಲಿ, ಅಂಶಗಳನ್ನೂ, ನೀಡಿರುವುದರಿಂದ, ಎಲ್ಲರಿಗೂ, ನ್ಯಾಯವನ್ನೊದಗಿಸಿದೆ, ಎನ್ನುವುದನ್ನು, ಒಪ್ಪಿ, ಮುಂದುವರೆಯಬೇಕಿದೆ, ತಗಾದೆಯ, ವಾದವಿವಾದಗಳು, ದೀರ್ಘಕಾಲದಲ್ಲಿ, ಸರಕಾರಗಳು, ವಾದವಿವಾದಗಳನ್ನು, ಮಂಡಿಸಲು, ಸರ್ವರೀತಿಯಾದ, ಪ್ರಯತ್ನಗಳನ್ನೂ, ಮಾಡಿದುವು, ಘಟಾನುಘಟಿಗಳಾದ, ನಿಪುಣರನ್ನು, ಸಲಹೆ, ವಕೀಲರನ್ನು, ವಾದ, ನಿಲ್ಲಿಸಿದರು, ಆದಷ್ಟು, ದಸ್ತಾವೇಜುಗಳನ್ನು, ಮಂಡಿಸಿದರು, ವಾದವನ್ನು, ಸರಿಯಾಗಿ, ಕೇಳಲಿಲ್ಲ, ನ್ಯಾಯಮೂರ್ತಿಗಳೂ, ಮಾಡಬಹುದು, ವ್ಯಾಜ್ಯ, ಕೆಲವರಿಗೆ, ಅನ್ಯಾಯವಾದ, ಉಂಟಾಗುವುದೂ, ಅನೇಕರ, ದೃಷ್ಟಿ, ನಿಜವೇ, ಪರಿಗಣಿಸಿದರೆ, ತಪ್ಪಾದ, ಸಾಧ್ಯವಿದೆ, ನಿಜವಾದಲ್ಲಿ, ಮಾರ್ಗವಂತೂ, ಇದ್ದೇ, ಹೇಳಿದಂತೆ, ತಿಳಿಸುತ್ತಾ, ಮನವಿಪತ್ರವನ್ನು, ಸಲ್ಲಿಸಬಹುದು, ಐತಿಹಾಸಿಕ, ಮನಃಪಟಲದಲ್ಲಿ, ಮನೆಮಾಡಿದೆ, ಕಾಲದಿಂದಲೂ, ಸಂಸ್ಥಾನ, ಒಪ್ಪಂದಗಳಲ್ಲಿ, ನ್ಯಾಯಸಮ್ಮತವಲ್ಲದ, ಹೇರಿಕೆಗಳನ್ನು, ಸಂಸ್ಥಾನದ, ತಳ್ಳಿದೆ, ಸರಿಯೋ, ತಪ್ಪೋ, ಗೊತ್ತಿಲ್ಲವಾದರೂ, ಹುರುಳಿದೆ, ಕೃಷ್ಣರಾಜಸಾಗರ, ಮೆಟ್ಟೂರು, ನಿರ್ಮಾಣಕ್ಕೆ, ಒಪ್ಪಿಗೆ, ನೀಡಿತಾದರೂ, ನೀರಾವರಿಯಡಿಯಲ್ಲಿ, ಬರಬಹುದಾದ, ಪ್ರದೇಶಗಳ, ಪರಿಮಿತಿಗಳನ್ನೂಡ್ಡಿತ್ತು, ಪರಿಮಿತಿಗಳ, ತಮಗೆ, ನೆಲೆಮಾಡಿಕೊಂಡಿದೆ, ಸಕಾರಣವಾಗಿದ್ದೆನಿಸಿದ್ದರೂ, ಇಂದಿಗೆ, ಪ್ರಸ್ತುತತೆ, ಒಪ್ಪಂದಕ್ಕಿಂತ, ಹೆಚ್ಚಾದ, ಜಮೀನನ್ನು, ನೀರಾವರಿಯಡಿ, ತಂದಿದ್ದಲ್ಲದೆ, ಹೇಮಾವತಿಯಂತಹ, ಅಣೆಕಟ್ಟುಗಳನ್ನು, ನಿರ್ಮಿಸಿಬಿಟ್ಟಿತು, ಹತೋಟಿ, ದೊರೆತು, ಮುಂಚಿನ, ಸಂಪೂರ್ಣವಾಗಿ, ಬದಲಾಯಿತು, ಬೇಗುದಿ, ಪಡಲು, ಇಲ್ಲದಾಯಿತು, ಶಂಕೆಯಿಂದಾಗಿ, ಸಕಾರಣವೋ, ಅಲ್ಲವೋ, ತಿಳಿಯದಾದರೂ, ಅತೃಪ್ತಿಗೆ, ಒಳಗಾಗಿದ್ದು, ಚಾರಿತ್ರಿಕವಾದ, ಹಿನ್ನೆಲೆಯನ್ನು, ಕೊಡುವುದಕ್ಕಾಗಿ, ಹೇಳುತ್ತಿದ್ದಾನೆಯೇ, ಹೊರತು, ತೆಗೆದುಕೊಳ್ಳುತ್ತಿಲ್ಲ, ಭಾವನೆಯಲ್ಲಿ, ಹುರುಳಿದೆಯೇ, ಕರಾರುವಾಕ್ಕಾಗಿ, ಎಂದೇ, ಹೇಳಬೇಕಾಗುತ್ತದೆ, ೨೬೨ರ, ಕಲಮಿನ, ನಿಬಂಧನೆಯ, ಅರ್ಪಿಸಿದ, ಹಸ್ತಕ್ಷೇಪ, ನ್ಯಾಯಾಲಯವನ್ನೊಳಗೊಂಡು, ಹಕ್ಕಿಲ್ಲ, ಮರುಪರಿಶೀಲನೆಗೆ, ಆಸ್ಪದವಿಲ್ಲದ, ವ್ಯವಸ್ಥೆಯಿಂದ, ಅಸಮಾಧಾನವಾಗಬಹುದೆಂಬ, ಚರ್ಚಿಸಿರುವುದಿದೆ, ಆಗಿರುವುದೂ, ಮರುಪರಿಶೀಲಿಸುವ, ಕಾಯ್ದಿಡಬೇಕು, ಸಲಹೆಯನ್ನು, ಪರಿಗಣಿಸಿಲ್ಲ, ಅರ್ಥೈಸಿರುವಂತೆ, ಸಲ್ಲಿಸುವುದಕ್ಕೆ, ಬಾಗಿಲನ್ನು, ತಟ್ಟುವುದರಿಂದ, ಯಾರನ್ನೂ, ತಡೆಯಲು, ಸಲ್ಲಿಸಿದರೆ, ಸ್ವೀಕರಿಸಬೇಕೋ, ವಿಚಾರಣೆ, ನಡೆಸಬೇಕೋ, ಎನ್ನುವುದರ, ನ್ಯಾಯಾಲಯವೇ, ತೆಗೆದುಕೊಳ್ಳಬೇಕಾಗುತ್ತದೆ, ಕಾಯಿದೆಯನ್ನು, ಓದಿದಾಗ, ಇಂಥಹ, ಮನವಿಯನ್ನು, ಸ್ವೀಕರಿಸಬಹುದು, ಸ್ಪಷ್ಟವಾಗಿಲ್ಲ, ಕಲಮುಗಳ, ಕಾಯಿದೆಯಲ್ಲಿ, ಮರುಪರಿಶೀಲನೆಯ, ಹಕ್ಕಿಗಿರುವ, ಅಡ್ಡಗೋಡೆಯನ್ನು, ದಾಟಬಹುದೆಂದು, ಕಾನೂನ, ಅಭಿಪ್ರಾಯವಾಗಿದೆ, ಅಭಿಪ್ರಾಯವನ್ನು, ನೀಡಲು, ಲೇಖಕನಿಗೆ, ಬಾಗಿಲುಗಳನ್ನು, ತಟ್ಟುವ, ಅವಕಾಶವಿದೆಯೇ, ಪರಿಶೀಲನೆಗೆ, ಕಾನೂನಿನಂತೆ, ಎನ್ನುವುದಾದರೆ, ಸರ್ವೋಚ್ಚನ್ಯಾಯಾಲಯಗಳ, ಆದೇಶಗಳಿಗಿರುವಂತೆಯೇ, ಆದೇಶಕ್ಕೂ, ಪುನಃಪರಿಶೀಲನೆಯ, ಅದೇನೇ, ಇದ್ದರೂ, ಸರಕಾರಕ್ಕಾಗಲೀ, ಸರಕಾರಗಳಿಗಾಗಲೀ, ಬಂದಿರದ, ವಿಷಯಗಳ, ಮಾರ್ಗದರ್ಶನ, ಬೇಕೆನ್ನಿಸಿದರೆ, ತರಬಹುದಾಗಿದೆ, ಪುನಃಪರಿಶೀಲನೆಗೆ, ಕೊಟ್ಟಿರುವ, ಅಲ್ಲವೆಂಬುದನ್ನು, ಸರಕಾರಗಳನ್ನು, ಪದಪ್ರಯೋಗದ, ಒಳಸುಳಿಗಳು, ಬಂಧಿಸಿಡುವ, ಸಾಧ್ಯತೆಗಳು, ರಾಜ್ಯಸರಕಾರಗಳು, ಅನುಮಾನಗಳನ್ನೂ, ಅಸಮಾಧಾನಗಳನ್ನೂ, ಪೀಡೆಗಳನ್ನೂ, ಮನವಿಯ, ಸಲ್ಲಿಸಿ, ಯಾಚಿಸುವ, ಪುನಃಪರಿಶೀಲನೆಯಾಗಿ, ಮಾರ್ಪಡಿಸಿಬಿಡುತ್ತವೆ, ಆಯೋಗವೂ, ತಾಳ್ಮೆಯಿಂದ, ಮಾಡಬೇಕಾಗುತ್ತದೆ, ಉತ್ತರಗಳನ್ನು, ನೀಡಿ, ತಕ್ಷಣ, ಕಾಲಹರಣವನ್ನೂ, ಮಾಡದೇ, ಗೆಜೆಟ್ಟಿನಲ್ಲಿ, ಪ್ರಕಟಿಸುತ್ತದೆಂದು, ಪರಿಶೀಲನೆಯ, ಸಲ್ಲಿಸಲು, ಬದ್ಧವಾಗಿ, ಆಯ್ಕೆ, ಸಂಹಿತೆಯ, ೧೯೫೬, ೧೯೯೨ರಲ್ಲಿ, ತಿದ್ದುಪಡಿಯನ್ವಯ, ತೀರ್ಪಾಗಿ, ನೀಡಲಾಗಿದೆ, ಸರ್ವೋಚ್ಚನ್ಯಾಯಾಲಯದ, ಸ್ವೀಕರಿಸುವ, ದಿಕ್ಕುಗಳಿಂದಲೂ, ಎಲ್ಲರೂ, ಅನ್ಯಾಯದ್ದು, ಅನ್ನುತ್ತಿದ್ದಾರೆ, ಪೀಡಿತ, ಅಂತಲೂ, ವಿವರಿಸಿದ್ದಾರೆ, ತಿರಸ್ಕರಿಸುವ, ಮಾತುಗಳೂ, ಕೇಳಿಬಂದಿವೆ, ಹೆಚ್ಚಿನಷ್ಟು, ಸ್ವಾಗತಿಸಿದ್ದಾರಾದರೂ, ಅಪಸ್ವರ, ಹಾಡಿದ್ದಾರೆ, ಪಕ್ಷಗಳಲ್ಲದೇ, ಸ್ವಾಗತಿಸಿದ, ದ್ರಾವಿಡ, ಮುನ್ನೇಟ್ರ, ಕಳಗಂ, ಡಿಎಂಕೆ, ಸರಕಾರವೂ, ಅಂಶ, ಸ್ಪಷ್ಟೀಕರಣ, ಬೇಕೆಂದು, ಹೇಳಿದೆ, ಪ್ರಮಾಣ, ಅಭಿಪ್ರಾಯವಿದೆ, ಪುದುಚ್ಚೇರಿಯನ್ನು, ರಾಜ್ಯಗಳೂ, ಪುನರ್ವಿಮರ್ಶಿಸಲು, ಮೇಲ್ಮನವಿ, ಸಲ್ಲಿಸುವುದಾಗಿ, ಹೇಳಿಕೆ, ನೀಡಿವೆ, ಸಲ್ಲಿಸಬೇಕೆಂಬ, ಅಭಿಪ್ರಾಯವನ್ನೂ, ವ್ಯಕ್ತ, ಪಡಿಸಿವೆ, ಉದ್ಭವಿಸಿರುವ, ವಿಚಾರಗಳನ್ನು, ಪ್ರಶ್ನೋತ್ತರದ, ಕೆಳಗೆ, ಚರ್ಚಿಸಲಾಗಿದೆ, ಪ್ರತಿಕ್ರಿಯೆಗಳು, ಆಧಾರ, ಎಂಜಿನಿಯರುಗಳಲ್ಲೇ, ಭಿನ್ನಾಭಿಪ್ರಾಯವಿದೆ, ನೂರು, ನಮೂದಿಸಿದ, ಸಮನಾಗಿ, ಅದಕ್ಕಿಂತ, ವಿಶ್ವಾಸ, ಮಟ್ಟ, ವ್ಯತ್ಯಾಸವೇನೂ, ಯಾವರಾಜ್ಯಕ್ಕೆ, ನೀರೆಂಬುದು, ಸಂಖ್ಯೆಯಾಧಾರದ, ಮೇಲಿರಬೇಕಾದ್ದರಿಂದ, ಸಂಖ್ಯಯನ್ನು, ಉಪಯೋಗಿಸಲ್ಪಟ್ಟಿದೆ, ಸಂಖ್ಯೆಗಿಂತ, ಲಭ್ಯವಿರುವಾಗ, ಯಾವರೀತಿ, ಹಂಚಿಕೆಯಾಗಬೇಕೆಂಬ, ನಿಯಮವಂತೂ, ಇರಲೇ, ವಿಶ್ವಸನೀಯತೆ, ಇದೇನೆಂದು, ವಿವರಿಸಲಾಗುವುದು, ೭೪೦, ಅಡಿಯಷ್ಟು, ಲಭ್ಯತೆಯಿರುತ್ತದೆ, ತಳಹದಿಯ, ಮಿಕ್ಕದ್ದು, ೧೪ಟಿಎಂಸಿ, ಪರಿಸರದ, ಕಾರಣಕ್ಕೆ, ಹರಿದುಬಿಡುವ, ನೀರೆಂದೂ, ಪರಿಗಣಿಸಲಾಗಿದೆ, ಬಿಳಿಗುಂಡ್ಲುವಿನಿಂದ, ಬಿಟ್ಟುಕೊಡಬೇಕು, ಪರಿಸರಕ್ಕಾಗಿ, ಮೀಸಲಾಗಿಡಲಾಗಿದೆ, ಹರಿಯುವುದು, ನೀರಿನೊಂದಿಗೆ, ಬಿಳಿಗುಂಡ್ಲು, ಮೆಟ್ಟೂರಿನ, ಲಭ್ಯವಾಗುವ, ಮೆಟ್ಟೂರಿನಲ್ಲಿ, ೨೦೭, ನೀರಿಗೂ, ಇದಕ್ಕೂ, ಅಂತರದ, ರಾಜ್ಯದಲ್ಲೇ, ಮಳೆಯ, ಪರಿಮಾಣಗಳ, ಹಂಚಿಕೊಳ್ಳಬೇಕೆಂದು, ತಿಂಗಳುವಾರು, ಬಿಡುಗಡೆಯ, ವೇಳಾಪಟ್ಟಿಯ, ಉಸ್ತುವಾರಿಗೆ, ಮಂಡಲಿಯನ್ನು, ಮಾಡಬೇಕೆಂದು, ಸೂಚಿಸಲಾಗಿದೆ, ಮಂಡಲಿ, ಕಮಿಟಿಗಳೊಂದಿಗೆ, ಉಸ್ತುವಾರಿ, ಮಾಡುವುದಲ್ಲದೇ, ನಿಯಂತ್ರಣಾ, ಪ್ರಾಧಿಕಾರವಾಗಿಯೂ, ನಿರ್ವಹಿಸಬೇಕಾಗಿದೆ, ಬಿಡುಗಡೆಮಾಡಬೇಕಾದ, ಅಡಿಯಲ್ಲಿ, ತಮಿಳುನಾಡಿಗೂ, ಪರಿಸರಕ್ಕೂ, ಲೆಕ್ಕ, ಹಾಕಿದ್ದರೂ, ಮರೆತಿದೆ, ಅದನ್ನೂ, ಹರಿಯಬೇಕಾದ, ೧೯೬, ಮಟ್ಟದಲ್ಲಿದ್ದಿರಬೇಕು, ಬಗೆಹರಿಯಲಾರದ, ಪಕ್ಷಗಳ, ಅಧಿಕಾರದ, ಲೆಕ್ಕಾಚಾರದಿಂದ, ಮೇಲಕ್ಕೇಳಲಾಗದ, ೧೯೯೨ರ, ಸೂಚಿಸಿದ್ದೇನೆಂದರೆ, ವಿಚಾರವಿನಿಮಯದೊಂದಿಗೆ, ಅಧಿಕಾರಶಾಹಿಯ, ಚೌಕಟ್ಟಿನ, ಹೊರಗೆ, ಸಮಸ್ಯೆಗೆ, ಪರಿಹಾರವನ್ನು, ಕಂಡುಹಿಡಿಯುವ, ೧೯೯೦ರ, ಪ್ರಾರಂಭದಲ್ಲಿ, ವಿಚಾರವಿನಿಮ, ಆಗಬೇಕೆನ್ನುವ, ನಿಟ್ಟಿನಲ್ಲಿದಿವಂಗತ, ಅವರನ್ನೊಳಗೊಂಡಂತೆ, ಅನೇಕರರು, ಮಾಡಿ, ಜನಪರ, ಸಭೆಗಳನ್ನು, ಆಯೋಜಿಸಿದರು, ಉತ್ಸಾಹದಿಂದ, ಆರಂಭವಾದ, ನಂತರದ, ದಿನಗಳಲ್ಲಿ, ಬೀಳಾಯಿತು, ೨೦೦೧, ೦೨ರಲ್ಲಿ, ರಾಜಕೀಯದ, ರಾಜ್ಯಗಳನಡುವಿನ, ಭಿನ್ನಾಭಿಪ್ರಾಯ, ಉತ್ತುಂಗಕ್ಕೇರಿದ್ದಾಗ, ಜನರೇ, ಪರಿಹಾರದತ್ತ, ಮುಂದಡಿಯಿಡಬೇಕೆಂದು, ಒತ್ತಯಿಸುತ್ತಾ, ಬರಹಗಳನ್ನು, ಬರೆದದ್ದು, ಉಂಟು, ದಿವಂಗತರಾಗಿರುವ, ಮುಖ್ಯನ್ಯಾಯಾಧೀಶರಾಗಿದ್ದ, ನಿಟ್ಟೂರು, ಶ್ರೀನಿವಾಸರಾಯರ, ಅನೌಪಚಾರಿಕ, ಸಭೆಯನ್ನೂ, ಆಯೋಜಿಸಿದ್ದೆವು, ಬುದ್ಧಿಜೀವಿಗಳ, ಸಭೆಯಾಗಿತ್ತು, ಬೇಕಾಗಿದ್ದದ್ದು, ರೈತರನ್ನೊಳಗೊಂಡ, ಆಲೋಚನಾಲಹರಿಯನ್ನು, ಅಂತರ್ಗತಮಾಡಿಕೊಂಡಿದ್ದ, ವಿಕಾಸಾಧ್ಯಯನ, ಸಂಸ್ಥೆ, ಎಂಐಡಿಎಸ್, ಒಳಗೂ, ವಿಚಾರವಿತ್ತು, ಜನಕರಾಜನ್, ವಿವಾದದಲ್ಲಿ, ಸಿಲುಕಿದ್ದ, ಮುಖ್ಯರಾಜ್ಯಗಳಾದ, ರೈತರನ್ನು, ಸೇರಿಸುವ, ಮಾಡಿದರು, ಸಫಲತೆಯನ್ನು, ಕಂಡಹಾಗಾಯಿತು, ಸಭೆಗೆ, ರಾಜ್ಯಗಳಿಂದ, ೧೦೦, ಏಪ್ರಿಲ್, ೨೦೦೩, ಚೆನ್ನೈ, ಎಂಜಿನಿಯರುಗಳು, ಸ್ವಯಂಸೇವಾ, ಪತ್ರಕರ್ತರು, ಬಂದಿದ್ದರು, ಸಭೆಯು, ಪರಿಕಲ್ಪನೆಯ, ಉದ್ಭವವಾಯಿತು, ಸಹಕಾರದಿಂದ, ಎಡ್ಜಸ್ಟ್, ಮೆಂಟ್, ಮಾಡಿಕೊಳ್ಳುತ್ತಾ, ಮುಂದುವರೆಯಬೇಕೆಂಬ, ಮಾತಾಯಿತು, ಆನಂತರ, ಮುಂದುವರೆಯುತ್ತಾ, ಇಬ್ಬದಿಯ, ನೆರೆರಾಜ್ಯಕ್ಕೆ, ಭೇಟಿಯಿತ್ತು, ದುಃಖ, ದುಮ್ಮಾನಗಳನ್ನು, ಯತ್ನ, ಇಬ್ಬದಿಯಲ್ಲಿರುವ, ಪೂರ್ತಿಯಾಗಲ್ಲದಿದ್ದರೂ, ಬಹಳಮಟ್ಟಿಗೆ, ಬಗೆಹರಿಸಿಕೊಳ್ಳುವ, ಕೆಲಸಮಾಡಿದೆ, ಪ್ರಕ್ರಿಯೆಯಿಂದ, ಪರಿಹಾರ, ದೊರೆಯಲಿಲ್ಲವಾದರೂ, ಪರಿವಾರಭಾವ, ಏರ್ಪಾಟಾದದ್ದು, ಗಮನಾರ್ಹವಾದ, ಎನ್ನಬಹುದಾದರೂ, ತೀರ್ಪಿನಿಂದ, ಉಂಟಾಗಿರುವ, ಪ್ರತಿಕ್ರಿಯೆಗಳ, ಭಾವನೆಗಳ, ಪೆಟ್ಟನ್ನು, ತಡೆದು, ಮುಂದಕ್ಕೂ, ಸಕಾರಾತ್ಮಕವಾದ, ಭೂಮಿಕೆಯನ್ನು, ನಿರ್ವಹಿಸುತ್ತದೆಂದು, ನಾವೆಲ್ಲರೂ, ನಮೂದಾಗುತ್ತಿದ್ದಂತೆಯೇ, ರದ್ದಾಗುವುದರಿಂದ, ಪೂರ್ವೇತಿಹಾಸಗಳನ್ನು, ಅವಶ್ಯಕತೆಯಿಲ್ಲ, ಅಂಶಗಳನ್ನು, ಚರ್ಚಿಸುವುದು, ಅವಶ್ಯ, ಮೊದಲನೆಯದೆಂದರೆ, ಮುಂಚಿನಿಂದಲೂ, ಅಮಲುಗೊಳಿಸುವಲ್ಲಿ, ಒಲವಿರಲಿಲ್ಲ, ಎಷ್ಟರಮಟ್ಟಿಗೆ, ಕರ್ನಾಟಕದ್ದಾಗಿತ್ತೆಂದರೆ, ಸುಗ್ರೀವಾಜ್ಞೆಯ, ಅಸಿಂಧುಗೊಳಿಸಲು, ಪ್ರಯತ್ನಿಸಿತ್ತು, ರಾಷ್ಟ್ರಪತಿಗಳ, ಅಭಿಪ್ರಾಯಕೋರಿಕೆಯ, ಸುಗ್ರೀವಾಜ್ಞೆ, ಸಂವಿಧಾನಬದ್ಧವಲ್ಲ, ನೀಡಿತ್ತು, ಘಟ್ಟದಲ್ಲಿ, ತೀರ್ಪನ್ನೂ, ಉಲ್ಲಂಘಿಸಿ, ನ್ಯಾಯಾಲಕ್ಕೆ, ಅಗೌರವ, ಸಲ್ಲಿಸಿದ, ಪ್ರಕರಣವನ್ನೂ, ಎದುರಿಸಬೇಕಾಯಿತು, ಅತೀವ, ಆಕ್ರೋಶವನ್ನೂ, ಜನಾಗ್ರಹವನ್ನೂ, ಉಂಟುಮಾಡಿತು, ಭಾಗಶಃ, ಇದನ್ನುಂಟುಮಾಡಲು, ಶಕ್ತಿಗಳು, ಹುನ್ನಾರ, ಹೂಡಿದ್ದವೆನ್ನಬಹುದು, ಆಕ್ರೋಶ, ದುರಂತಮಯ, ಹಿಂಸಾಚಾರದತ್ತ, ತಿರುಗಿ, ತಮಿಳರ, ಕನ್ನಡಿಗರ, ನಡುನಿನ, ಜಟಿಲಗೊಳಿಸಿತು, ವಿಪರೀತ, ಭಾವ, ತಣ್ಣಗಾಗಿ, ನಾಜೂಕಾದ, ಶಾಂತಿ, ನೆಲೆಸಿತ್ತಾದರೂ, ಹಿಂದಿನದೇ, ಕೋಪ, ರೋಷಗಳನ್ನು, ಉಂಟುಮಾಡಿದೆ, ಸದ್ಯಕ್ಕೆ, ನಡೆದಿಲ್ಲ, ಅನ್ನುವುದೇ, ಸಮಾಧಾನದ, ಮೂರನೆಯ, ಅಂಶವನ್ನು, ಕೈಗೆತ್ತಿಕೊಳ್ಳೋಣ, ನಿಂತ, ಪೈರನ್ನು, ಉಳಿಸಲು, ಅನುಷ್ಠಾನಗೊಳಿಸುವ, ಎದುರು, ಆಸಕ್ತಿಕರ, ಕಥೆಯನ್ನು, ಕ್ಷಣಕ್ಕೆ, ಬಿಡೋಣ, ಬಿಕ್ಕಟ್ಟನ್ನು, ಬಗೆಹರಿಸಲು, ನದಿ, ಪ್ರಾಧಿಕರಣ, ಏರ್ಪಾಟನ್ನು, ಮಾಡಲಾಯಿತು, ಅದರಿಂದೇನೂ, ಉಪಯೋಗವಾಗಲಿಲ್ಲ, ಎನ್ನಬೇಕು, ಏನಾದರಾಗಲೀ, ನಮೂದಾಗಿ, ಇಲ್ಲದಾದಾಗ, ಏರ್ಪಾಟೂ, ಇಲ್ಲವಾಗುತ್ತದೆ, ತಡವಾಗಬಹುದಾದ, ರಾಜ್ಯದಲ್ಲಿರುವ, ಪೂರೈಕೆಯ, ಸ್ವಲ್ಪವಾದರೂ, ಭರವಸೆ, ಮನವಿಗೆ, ಉತ್ತರವಾಗಿ, ೧೯೯೧ರ, ಪ್ರತಿವರ್ಷ, ೨೦೫, ಪುದುಚ್ಚೇರಿಗಾಗಿ, ಕಾದಿರಿಸಲಾಗಿತ್ತು, ಬಿಡಬೇಕೆಂದು, ಪ್ರತಿತಿಂಗಳೂ, ವೇಳಾಪಟ್ಟಿಯನ್ನೂ, ನೀಡಲಾಗಿತ್ತು, ಸಾರ, ನೀರಾವರಿಯಾಧಾರದ, ಕೃಷಿಯನ್ನು, ಕಾಲಾಂತರದಿಂದ, ಕೈಗೊಳ್ಳುತ್ತಾ, ಕಾರಣದಿಂದ, ಬಳಸುತ್ತಿರುವ, ನದಿಪ್ರವಾಹದ, ತುದಿಯಲ್ಲಿರುವ, ಪ್ರವಾಹದಾದಿಯಲ್ಲಿರುವ, ಯೋಜನೆಗಳನ್ನು, ಕೈಗೊಂಡ, ಪ್ರಗತಿ, ಸಾಧಿಸಿದ, ಕಾರಣಕ್ಕಾಗಿ, ಜಲಸಂಪನ್ಮೂಲದ, ಹತೋಟಿಯಿರುವ, ರಾಜ್ಯವಾದ, ಅವಶ್ಯಕತೆಗಳ, ಜಟಾಪಟಿಗೆ, ಜಲಸಂಪನ್ಮೂಲವನ್ನು, ಮಿತವಾಗಿ, ಕಟ್ಟಕಡೆಯಲ್ಲಿರುವ, ಸಂಪನ್ಮೂಲವನ್ನು, ಪುದುಚ್ಚೇರಿಗಳೂ, ಭಾಗಿಗಳಾಗಿದ್ದಾವೆ, ನ್ಯಾಯಯುತ, ಹಂಚಿಕೆಯ, ಯೋಜನೆ, ಮೈಗೂಡಿಸಿಕೊಂಡಿರಬೇಕು, ದುರಾದೃಷ್ಟವಶಾತ್, ಕಾರಣಗಳಿಂದಾಗಿ, ವರ್ಷಾನುಗಟ್ಟಲೆಯಿಂದ, ತೆಗೆದುಕೊಳ್ಳುತ್ತಾ, ನಾಡಿನ, ಅಸ್ಮಿತೆಯ, ಭಾವನೆಗಳೊಂದಿಗೆ, ವಿಷಯವನ್ನು, ಬೆಸೆದಿಟ್ಟಿದ್ದಾರಾದ್ದರಿಂದ, ರಿಯಾಯಿತಿಯನ್ನು, ತೋರಿಸುವುದಕ್ಕೆ, ಇಲ್ಲದಂತೆ, ಮಾಡಿಕೊಂಡುಬಿಟ್ಟಿದ್ದಾವೆ, ಪ್ರಸ್ತಾಪವೇ, ಪ್ರತಿಕ್ರಿಯೆಯನ್ನು, ಉಂಟುಮಾಡುವ, ಪರಿಸ್ಥಿತಿಗೆ, ಬಂದುಬಿಟ್ಟಿವೆ, ಚುನಾವಣೆಯ, ಉಪಯೋಗಿಸಲ್ಪಡುವ, ವಿಷಯವಾಗಿಬಿಟ್ಟಿದೆ, ಅಂಥಾ, ವಿಷಯವನ್ನಾಗಿಸಿಬಿಟ್ಟಿದ್ದಾರೆ, ಪಕ್ಷಗಳೂ, ತೆಗೆದುಕೊಂಡುಬಿಟ್ಟಿರುವುದರಿಂದ, ಅಧಿಕಾರಕ್ಕೆ, ಪಕ್ಷ, ಸಡಿಲಗೊಂಡರೆ, ವೈಫಲ್ಯ, ಒತ್ತೆಯಿಟ್ಟಂತೆ, ತೋರುವುದರಿಂದ, ಜಟಿಲವೂ, ಅಸಾಧ್ಯವೂ, ಬಂದುಬಿಟ್ಟಿದೆ, ರೂಪುರೇಶೆಗಳು, ಭಾರತೀಯ, ವ್ಯವಸ್ಥೆಯಡಿಯಲ್ಲಿ, ರಚಿಸಿರುವ, ಪರಿಹಾರದ, ಆಧಾರವಾಗಿದೆ, ಚೌಕಟ್ಟು, ಜಲಮೂಲಗಳ, ಪರಿಹರಿಸಿಕೊಳ್ಳಲು, ಕಾಯಿದೆಯನ್ವಯವೇ, ಕೃಷ್ಣಾ, ಗೋದಾವರಿ, ನರ್ಮದಾ, ಸ್ಥಾಪಿತವಾಗಿದ್ದು, ಕಾಯಿದೆಯಡಿಯಲ್ಲಿ, ಆಯೋಗವನ್ನೂ, ಸ್ಥಾಪಿಸಲಾಯಿತು, ಕೆಲಸಮಾಡುತ್ತಿದ್ದ, ಬೇಕಿದ್ದ, ಕಾಯಿದೆಗೆ, ೨೦೦೨ರಲ್ಲಿ, ತಂದ, ಬದಲಾವಣೆಗಳನ್ನು, ಅಗತ್ಯವಿಲ್ಲ, ಇತ್ಯರ್ಥದ, ಕಡಿದಾದದ್ದಾಗಿತ್ತು, ಅಂದಷ್ಟೇ, ಹೇಳಬಹುದು, ಆನಂತರವೂ, ಮುಂದುವರೆಸುತ್ತಲೇ, ಮುಖ್ಯಮಂತ್ರಿಗಳ, ಚರ್ಚೆಯೇ, ಆಗದಿದ್ದ, ಇತ್ಯರ್ಥವಾಗದೆಯೇ, ನಿಂತುಬಿಟ್ಟಿತು, ೧೯೮೬ರಲ್ಲಿ, ೧೯೫೬ರಡಿಯಲ್ಲಿ, ನಿಯಮಿಸಬೇಕೆಂದು, ತಕ್ಷಣವೇ, ನಿಯಮಿಸಲಿಲ್ಲ, ಮಾತುಕತೆಯಿಂದ, ಮಾಡಿಕೊಳ್ಳಬೇಕೆಂಬುದೇ, ಇರಾದೆಯಾಗಿತ್ತು, ಬಹಳದಿನಗಳಿಂದ, ನ್ಯಾಯಾಲಯದಲ್ಲಿ, ವಾಯಿದೆಬಿದ್ದಿದ್ದ, ಕಾವೇರಿಯಿಂದ, ಪೂರೈಸಬೇಕೆನ್ನುವ, ವಿಚಾರಣೆಗೆ, ಆವರೆಗೆ, ನಡೆದಿದ್ದ, ವಿಫಲತೆ, ನಿಯಮಿಸಬೇಕೆನ್ನುವ, ಹಾಗೇ, ಇದ್ದದ್ದನ್ನು, ದೃಷ್ಟಿಯಲ್ಲಿಟ್ಟುಕೊಂಡು, ತಿಂಗಳೊಳಗಾಗಿ, ನಿಯಮಿಸಬೇಕೆಂಬ, ಹೊರಡಿಸಿತು, ಜೂನ್, ೧೯೯೦ರಂದು, ಜಲಕ್ಕೆ, ನಿಯಮಿಸಿತು, ೧೯೭೦, ರಿಂದಾರಂಭವಾಗಿ, ದಶಕಗಳ, ವರೆಗೂ, ನಡೆಯುತ್ತಲೇ
Text of the page (random words):
ಅಂಶದ ಬಗ್ಗೆ ವಿವರಣೆ ಅಥವಾ ಮೊದಲು ಆಯೋಗದ ದೃಷ್ಟಿಗೆ ಬಂದಿರದ ವಿಷಯಗಳ ಬಗೆಗೆ ಮಾರ್ಗದರ್ಶನ ಬೇಕೆನ್ನಿಸಿದರೆ ಅದನ್ನ ಮೂರು ತಿಂಗಳುಗಳೊಳಗಾಗಿ ಆಯೋಗದ ದೃಷ್ಟಿಗೆ ತರಬಹುದಾಗಿದೆ ಇದು ಪುನಃಪರಿಶೀಲನೆಗೆ ಕೊಟ್ಟಿರುವ ಸಾಧ್ಯತೆ ಅಲ್ಲವೆಂಬುದನ್ನು ಗಮನಿಸಬೇಕು ಆದರೆ ರಾಜ್ಯ ಸರಕಾರಗಳನ್ನು ಈ ಪದಪ್ರಯೋಗದ ಒಳಸುಳಿಗಳು ಬಂಧಿಸಿಡುವ ಸಾಧ್ಯತೆಗಳು ಬಹಳ ಕಡಿಮೆ ರಾಜ್ಯಸರಕಾರಗಳು ಎಲ್ಲ ರೀತಿಯ ಅನುಮಾನಗಳನ್ನೂ ಅಸಮಾಧಾನಗಳನ್ನೂ ಪೀಡೆಗಳನ್ನೂ ಮತ್ತೆ ಆಯೋಗಕ್ಕೆ ಮನವಿಯ ರೂಪದಲ್ಲಿ ಸಲ್ಲಿಸಿ ವಿವರಣೆ ಯಾಚಿಸುವ ಪ್ರಕ್ರಿಯೆಯನ್ನು ಪುನಃಪರಿಶೀಲನೆಯಾಗಿ ಮಾರ್ಪಡಿಸಿಬಿಡುತ್ತವೆ ಆಯೋಗವೂ ಈ ಎಲ್ಲ ವಿಚಾರಗಳ ಬಗ್ಗೆ ಸಾಕಷ್ಟು ತಾಳ್ಮೆಯಿಂದ ಮರುಪರಿಶೀಲನೆ ಮಾಡಬೇಕಾಗುತ್ತದೆ ಈ ಉತ್ತರಗಳನ್ನು ಆಯೋಗ ತ್ವರಿತಗತಿಯಲ್ಲಿ ನೀಡಿ ಈ ತೀರ್ಪನ್ನು ಕೇಂದ್ರ ಸರಕಾರ ಆ ತಕ್ಷಣ ಯಾವ ಕಾಲಹರಣವನ್ನೂ ಮಾಡದೇ ಗೆಜೆಟ್ಟಿನಲ್ಲಿ ಪ್ರಕಟಿಸುತ್ತದೆಂದು ಆಶಿಸಬೇಕಾಗಿದೆ ಪ್ರಶ್ನೆ ೩ ಸರ್ವೋಚ್ಚ ನ್ಯಾಯಾಲಯದ ಬಾಗಿಲುಗಳನ್ನು ತಟ್ಟುವ ಅವಕಾಶವಿದೆಯೇ ಉ ಕರಾರುವಾಕ್ಕಾಗಿ ನೋಡಿದರೆ ಇದಕ್ಕೆ ಉತ್ತರ ಇಲ್ಲ ಎಂದೇ ಹೇಳಬೇಕಾಗುತ್ತದೆ ಸಂವಿಧಾನದ ೨೬೨ರ ಕಲಮಿನ ನಿಬಂಧನೆಯ ಪ್ರಕಾರ ಮತ್ತು ಜಲವಿವಾದಗಳ ಕಾಯಿದೆ ೧೯೫೬ರ ಅನ್ವಯ ವಿವಾದವನ್ನು ಆಯೋಗಕ್ಕೆ ಅರ್ಪಿಸಿದ ನಂತರ ಅದರಲ್ಲಿ ಹಸ್ತಕ್ಷೇಪ ಮಾಡಲು ಸರ್ವೋಚ್ಚ ನ್ಯಾಯಾಲಯವನ್ನೊಳಗೊಂಡು ಯಾವುದೇ ನ್ಯಾಯಾಲಯಕ್ಕೆ ಹಕ್ಕಿಲ್ಲ ಅನೇಕ ವರ್ಷಗಳಿಂದ ಈ ಲೇಖಕ ಈ ರೀತಿಯಾದ ಮರುಪರಿಶೀಲನೆಗೆ ಆಸ್ಪದವಿಲ್ಲದ ವ್ಯವಸ್ಥೆಯಿಂದ ರಾಜ್ಯಗಳಿಗೆ ಅಸಮಾಧಾನವಾಗಬಹುದೆಂಬ ವಿಚಾರವನ್ನು ಚರ್ಚಿಸಿರುವುದಿದೆ ಈಗ ಆಗಿರುವುದೂ ಅದೇ ಸರ್ವೋಚ್ಚ ನ್ಯಾಯಾಲಯ ಇದನ್ನು ಮರುಪರಿಶೀಲಿಸುವ ಹಕ್ಕನ್ನು ಕಾಯ್ದಿಡಬೇಕು ಎಂಬ ಸಲಹೆಯನ್ನು ಯಾರೂ ಪರಿಗಣಿಸಿಲ್ಲ ಈಗಿನ ಕಾಯಿದೆಯನ್ವಯ ಈ ಲೇಖಕ ಅರ್ಥೈಸಿರುವಂತೆ ಈಗ ನೀಡಿರುವ ಆದೇಶದ ವಿರುದ್ಧ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವುದಕ್ಕೆ ಆಸ್ಪದವಿಲ್ಲ ಆದರೆ ಸರ್ವೋಚ್ಚ ನ್ಯಾಯಾಲಯದ ಬಾಗಿಲನ್ನು ತಟ್ಟುವುದರಿಂದ ಯಾರನ್ನೂ ತಡೆಯಲು ಸಾಧ್ಯವಿಲ್ಲ ಹಾಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರೆ ಅದನ್ನು ಸ್ವೀಕರಿಸಬೇಕೋ ವಿಚಾರಣೆ ನಡೆಸಬೇಕೋ ಎನ್ನುವುದರ ಬಗ್ಗೆ ನ್ಯಾಯಾಲಯವೇ ಒಂದು ನಿಲುವು ತೆಗೆದುಕೊಳ್ಳಬೇಕಾಗುತ್ತದೆ ಆದರೆ ಸಂವಿಧಾನದ ೨೬೨ನೇ ಕಲಮು ಮತ್ತು ಜಲವಿವಾದಗಳ ಕಾಯಿದೆಯನ್ನು ಓದಿದಾಗ ಇಂಥಹ ಮನವಿಯನ್ನು ಯಾವ ಆಧಾರದ ಮೇಲೆ ಸರ್ವೋಚ್ಚ ನ್ಯಾಯಾಲಯ ಸ್ವೀಕರಿಸಬಹುದು ಅನ್ನುವುದು ಸ್ಪಷ್ಟವಾಗಿಲ್ಲ ಆದರೆ ಸಂವಿಧಾನದ ಇತರ ಕಲಮುಗಳ ಅನ್ವಯ ಕಾಯಿದೆಯಲ್ಲಿ ನ್ಯಾಯಾಲಯಕ್ಕೆ ಮರುಪರಿಶೀಲನೆಯ ಹಕ್ಕಿಗಿರುವ ಅಡ್ಡಗೋಡೆಯನ್ನು ಸರ್ವೋಚ್ಚ ನ್ಯಾಯಾಲಯ ದಾಟಬಹುದೆಂದು ಕೆಲ ಕಾನೂನ ತಜ್ಞರ ಅಭಿಪ್ರಾಯವಾಗಿದೆ ಈ ಬಗ್ಗೆ ಹೆಚ್ಚಿನ ಅಭಿಪ್ರಾಯವನ್ನು ನೀಡಲು ಈ ಲೇಖಕನಿಗೆ ಸಾಧ್ಯವಿಲ್ಲ ಪ್ರಶ್ನೆ ೪ ಕರ್ನಾಟಕಕ್ಕೆ ಅನ್ಯಾಯವಾಗಿದೆ ಅನ್ನುವ ಭಾವನೆಯಲ್ಲಿ ಹುರುಳಿದೆಯೇ ಉ ಈ ಭಾವನೆ ಐತಿಹಾಸಿಕ ಕಾರಣಗಳಿಗಾಗಿ ಕರ್ನಾಟಕದ ಜನತೆಯ ಮನಃಪಟಲದಲ್ಲಿ ಮನೆಮಾಡಿದೆ ಬಹಳ ಕಾಲದಿಂದಲೂ ೧೮೯೨ರ ಮತ್ತು ೧೯೨೪ರ ಮದ್ರಾಸು ಸರಕಾರ ಮತ್ತು ಮೈಸೂರು ಸಂಸ್ಥಾನ ಗಳ ನಡುವಿನ ಒಪ್ಪಂದಗಳಲ್ಲಿ ಮದ್ರಾಸು ಸರಕಾರ ನ್ಯಾಯಸಮ್ಮತವಲ್ಲದ ಹೇರಿಕೆಗಳನ್ನು ಸಂಸ್ಥಾನದ ಮೇಲೆ ತಳ್ಳಿದೆ ಅನ್ನುವ ಭಾವನೆ ಇದೆ ಈ ಭಾವನೆ ಸರಿಯೋ ತಪ್ಪೋ ಗೊತ್ತಿಲ್ಲವಾದರೂ ಅದರಲ್ಲಿ ಹುರುಳಿದೆ ೧೯೨೪ರ ಒಪ್ಪಂದ ಕೃಷ್ಣರಾಜಸಾಗರ ಮತ್ತು ಮೆಟ್ಟೂರು ಅಣೆಕಟ್ಟುಗಳ ನಿರ್ಮಾಣಕ್ಕೆ ಒಪ್ಪಿಗೆ ನೀಡಿತಾದರೂ ಅಲ್ಲಿಂದ ಮುಂದಕ್ಕೆ ಆಯಾ ರಾಜ್ಯಗಳಲ್ಲಿ ನೀರಾವರಿಯಡಿಯಲ್ಲಿ ಬರಬಹುದಾದ ಪ್ರದೇಶಗಳ ಮೇಲೆ ಪರಿಮಿತಿಗಳನ್ನೂಡ್ಡಿತ್ತು ಈ ಪರಿಮಿತಿಗಳ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ತಮಗೆ ಅನ್ಯಾಯವಾಗಿದೆ ಅನ್ನುವ ಭಾವನೆ ನೆಲೆಮಾಡಿಕೊಂಡಿದೆ ಆದರೆ ಒಂದು ಕಾಲಕ್ಕೆ ಆ ಭಾವನೆ ಸಕಾರಣವಾಗಿದ್ದೆನಿಸಿದ್ದರೂ ಇಂದಿಗೆ ಅದರ ಪ್ರಸ್ತುತತೆ ಇಲ್ಲ ಎರಡೂ ರಾಜ್ಯಗಳು ಒಪ್ಪಂದಕ್ಕಿಂತ ಹೆಚ್ಚಾದ ಜಮೀನನ್ನು ನೀರಾವರಿಯಡಿ ತಂದಿದ್ದಲ್ಲದೆ ಕರ್ನಾಟಕ ಕಬಿನಿ ಹೇಮಾವತಿಯಂತಹ ಅಣೆಕಟ್ಟುಗಳನ್ನು ನಿರ್ಮಿಸಿಬಿಟ್ಟಿತು ಈ ಮೂಲಕ ಕರ್ನಾಟಕಕ್ಕೆ ಕಾವೇರಿಯ ನೀರಿನ ಮೇಲೆ ಹೆಚ್ಚಿನ ಹತೋಟಿ ದೊರೆತು ಮುಂಚಿನ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಯಿತು ಹೀಗಾಗಿ ಅಲ್ಲಿಂದ ಮುಂದಕ್ಕೆ ಕರ್ನಾಟಕಕ್ಕೆ ಬೇಗುದಿ ಪಡಲು ಯಾವ ಕಾರಣವೂ ಇಲ್ಲದಾಯಿತು ಈ ಪರಿಸ್ಥಿತಿಯಲ್ಲಿ ಕಾವೇರಿ ನೀರಿನ ಬಗ್ಗೆ ಶಂಕೆಯಿಂದಾಗಿ ಸಕಾರಣವೋ ಅಲ್ಲವೋ ತಿಳಿಯದಾದರೂ ಅತೃಪ್ತಿಗೆ ಒಳಗಾಗಿದ್ದು ತಮಿಳುನಾಡು ಈ ಮಾತು ಚಾರಿತ್ರಿಕವಾದ ಹಿನ್ನೆಲೆಯನ್ನು ಕೊಡುವುದಕ್ಕಾಗಿ ಈ ಲೇಖಕ ಹೇಳುತ್ತಿದ್ದಾನೆಯೇ ಹೊರತು ಆ ಬಗ್ಗೆ ಯಾವ ನಿಲುವನ್ನೂ ತೆಗೆದುಕೊಳ್ಳುತ್ತಿಲ್ಲ ವರ್ತಮಾನಕ್ಕೆ ಬಂದರೆ ತಮಿಳುನಾಡು ಮತ್ತು ಕರ್ನಾಟಕ ಕೇರಳ ಮತ್ತು ಪುದುಚ್ಚೇರಿಯ ಬಗ್ಗೆಗೂ ಇದು ಅನ್ವಯವಾಗುತ್ತದೆ ಆಯೋಗದ ಮುಂದೆ ತಮ್ಮ ತಗಾದೆಯನ್ನು ಒಯ್ದರು ಎರಡೂ ರಾಜ್ಯಗಳು ಮತ್ತೊಂದಕ್ಕಿಂತ ಶಕ್ತಿಶಾಲಿಯಾಗಿ ಇರಲೂ ಇಲ್ಲ ತಮ್ಮ ದೃಕ್ಪಥವನ್ನು ಮತ್ತೊಂದು ರಾಜ್ಯದ ಮೇಲೆ ಹೇರಿ ಒಪ್ಪಿಸಲೂ ಸಾಧ್ಯವಾಗಲಿಲ್ಲ ಆಯೋಗ ಒಂದು ಕಾನೂನು ಬದ್ಧ ಏರ್ಪಾಟಾಗಿದ್ದು ಅದರ ಅಧಿಕಾರವನ್ನು ಸಂವಿಧಾನದ ಕಲಮಿನಡಿಯಲ್ಲಿ ಅದು ಪಡೆದಿತ್ತು ಆಯೋಗದಲ್ಲಿ ಮೂವರು ನ್ಯಾಯಮೂರ್ತಿಗಳಿದ್ದರು ಇವರಲ್ಲಿ ಯಾರೂ ವಿವಾದದ ಯಾವುದೇ ರಾಜ್ಯಕ್ಕೆ ಸೇರಿದವರಲ್ಲ ನ್ಯಾಯ ಮೂರ್ತಿಗಳು ಯಾವುದೇ ಒಂದು ರಾಜ್ಯದತ್ತ ಒಲವು ತೋರಿ ಮತ್ತೊಂದು ರಾಜ್ಯದ ವಿರುದ್ಧದ ನಿಲುವನ್ನು ತೆಗೆದುಕೊಳ್ಳಲು ಯಾವುದೇ ಕಾರಣಗಳಿರಲಿಲ್ಲ ಅಲ್ಲದೇ ನ್ಯಾಯವನ್ನೊದಗಿಸಲೆಂದೇ ಏರ್ಪಾಟಾದ ಈ ಆಯೋಗ ಅನ್ಯಾಯವೆಸಗಲು ಕಾರಣವೂ ಕಾಣಿಸುತ್ತಿಲ್ಲ ಹೀಗಾಗಿ ಆಯೋಗ ಪೂರ್ವಾಗ್ರಹ ಪೀಡಿತವಾಗಿತ್ತು ಅನ್ನುವ ಆರೋಪವನ್ನು ಪರಿಗಣಿಸಲು ಆಗುವುದಿಲ್ಲ ಆಯೋಗದ ಅಂತಿಮ ತೀರ್ಮಾನ ನ್ಯಾಯಸಮ್ಮತವಾದ ಮಾರ್ಗದಲ್ಲಿ ಎಲ್ಲ ಅಂಶಗಳನ್ನೂ ಪರಿಗಣಿಸಿ ನೀಡಿರುವುದರಿಂದ ತಕ್ಷಣಕ್ಕೆ ಇದು ಎಲ್ಲರಿಗೂ ನ್ಯಾಯವನ್ನೊದಗಿಸಿದೆ ಎನ್ನುವುದನ್ನು ಮೂಲಭೂತವಾಗಿ ಒಪ್ಪಿ ನಾವು ಮುಂದುವರೆಯಬೇಕಿದೆ ತಗಾದೆಯ ವಾದವಿವಾದಗಳು ನಡೆದ ದೀರ್ಘಕಾಲದಲ್ಲಿ ನಾಲ್ಕೂ ರಾಜ್ಯ ಸರಕಾರಗಳು ತಮ್ಮ ವಾದವಿವಾದಗಳನ್ನು ಮಂಡಿಸಲು ಸರ್ವರೀತಿಯಾದ ಪ್ರಯತ್ನಗಳನ್ನೂ ಮಾಡಿದುವು ಘಟಾನುಘಟಿಗಳಾದ ನಿಪುಣರನ್ನು ಸಲಹೆ ಕೇಳಿದರು ದೊಡ್ಡ ವಕೀಲರನ್ನು ತಮ್ಮ ಪರ ವಾದ ಮಾಡಲು ನಿಲ್ಲಿಸಿದರು ಆದಷ್ಟು ಹೆಚ್ಚು ದಸ್ತಾವೇಜುಗಳನ್ನು ಮಂಡಿಸಿದರು ಯಾವುದೇ ರಾಜ್ಯ ತಮ್ಮ ವಾದವನ್ನು ಆಯೋಗ ಸರಿಯಾಗಿ ಕೇಳಲಿಲ್ಲ ಅಲ್ಲಿ ಅನ್ಯಾಯವಾಗಿದೆ ಅನ್ನುವುದಕ್ಕೆ ಆಸ್ಪದವೇ ಇಲ್ಲ ಆದರೆ ನ್ಯಾಯಮೂರ್ತಿಗಳೂ ಒಮ್ಮೊಮ್ಮೆ ತಪ್ಪು ಮಾಡಬಹುದು ಹಾಗೆ ಮಾಡಿದರೆ ವ್ಯಾಜ್ಯ ಮಾಡುತ್ತಿರುವ ಕೆಲವರಿಗೆ ಅನ್ಯಾಯವಾದ ಭಾವನೆ ಉಂಟಾಗುವುದೂ ಸಹಜವೇ ಕರ್ನಾಟಕಕ್ಕೆ ಅನ್ಯಾಯವಾಗಿದೆ ಅನ್ನುವ ಅನೇಕರ ದೃಷ್ಟಿ ನಿಜವೇ ಎಂದು ಪರಿಗಣಿಸಿದರೆ ಆಯೋಗ ತಪ್ಪಾದ ತೀರ್ಮಾನವನ್ನು ನೀಡಿದೆ ಅದರಿಂದ ಆ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ನಾವು ಪರಿಗಣಿಸಲು ಸಾಧ್ಯವಿದೆ ಅದೇ ನಿಜವಾದಲ್ಲಿ ಅದಕ್ಕೆ ಒಂದು ಮಾರ್ಗವಂತೂ ಇದ್ದೇ ಇದೆ ಮೊದಲೇ ಹೇಳಿದಂತೆ ಮೂರು ತಿಂಗಳುಗಳೊಳಗಾಗಿ ಈ ಅನುಮಾನಗಳನ್ನು ತಿಳಿಸುತ್ತಾ ಆಯೋಗಕ್ಕೆ ಮನವಿಪತ್ರವನ್ನು ಆ ರಾಜ್ಯ ಸಲ್ಲಿಸಬಹುದು ಪ್ರ ೫ ಕರ್ನಾಟಕದಲ್ಲಿ ನಡೆಯುತ್ತಿರುವ ನಿರಸನ ಸರಿಯೇ ಉ ಸರ್ವೋಚ್ಚ ನ್ಯಾಯಾಲಯದ ಯಾವುದೇ ತೀರ್ಮಾನವನ್ನು ನಾವು ಟೀಕಿಸಬಹುದು ಅದೇ ವಾದಸರಣಿಯಲ್ಲಿ ಆಯೋಗದ ಆದೇಶವನ್ನೂ ನಾವು ಟೀಕಿಸಬಹುದು ಆದರೆ ಈ ಟೀಕೆ ಕಾನೂನಿನ ಚೌಕಟ್ಟಿನೊಳಗೆ ಸಂವಿಧಾನಕ್ಕೆ ಮತ್ತು ಅನೇಕ ರಾಜ್ಯಗಳಿರುವ ನಮ್ಮ ರಾಷ್ಟ್ರದ ಸಂಯುಕ್ತ ತತ್ವಕ್ಕೆ ಒಳಪಟ್ಟು ಇರಬೇಕಾದದ್ದು ಅವಶ್ಯಕ ಕರ್ನಾಟಕದಲ್ಲಿ ಆಗಿರುವ ಈಚಿನ ಕೆಲ ಬೆಳವಣಿಗೆಗಳು ಆತಂಕಕ್ಕೆ ಕಾರಣವಾಗುತ್ತದೆ ಬಂದ್ ಕರೆದು ಎಲ್ಲ ಕೆಲಸಗಳನ್ನೂ ತಡೆಗಟ್ಟುವುದು ತೀರ್ಪನ್ನು ನಿರಾಕರಿಸುವುದಕ್ಕೆ ಕರೆ ನೀಡುವುದೂ ಸಮಂಜಸ ಅನ್ನಿಸುವಂತಹ ಕ್ರಿಯಗಳಲ್ಲ ಸತ್ಯಾಗ್ರಹ ನಿರಶನ ಸರಿ ಆದರೆ ಜನಜೀವನ ಅಸ್ತವ್ಯಸ್ತಗೊಳಿಸುವಂತಹದ್ದೇನನ್ನೂ ಮಾಡಬಾರದು ಬಂದ್ ಶಾಂತಿಯುತವಾಗಿತ್ತು ಅಂದರೂ ಅದು ಜನಜೀವನಕ್ಕೆ ಅಡ್ಡಿಯುಂಟುಮಾಡಿದ್ದರಿಂದ ಹಿಂಸಾತ್ಮಕವಾದದ್ದು ತಮಿಳು ಚಿತ್ರಗಳ ಪ್ರದರ್ಶನವನ್ನು ನಿಲ್ಲಿಸಲು ಕರೆ ನೀಡವುದು ಸರಿಯೇ ಕರ್ನಾಟಕದ ವ್ಯಾಜ್ಯವಿರುವುದು ಆಯೋಗದ ತೀರ್ಪಿನ ಮೇಲೇ ವಿನಃ ಆಯೋಗದ ಮುಂದೆ ಕರ್ನಾಟಕದಂತೆಯೇ ಅಹವಾಲು ಅರ್ಪಿಸಿ ನಿಂತಿದ್ದ ತಮಿಳುನಾಡು ಸರಕಾರದ ಜೊತೆಗಲ್ಲ ತಮಿಳು ಜನರ ವಿರುದ್ಧವಂತೂ ಅಲ್ಲವೇ ಅಲ್ಲ ಆದರೆ ದುರಂತವೆಂದರೆ ಜನರನ್ನು ಈ ಬಗ್ಗೆ ಎಚ್ಚರಗೊಳಿಸುವುದಕ್ಕೆ ಬದಲಾಗಿ ನಾಯಕರು ರಾಜಕೀಯಕಾರಣಗಳಿಗಾಗಿ ತಪ್ಪುದಾರಿ ಹಿಡಿಸಿ ರೊಚ್ಚಿಗೆಬ್ಬಿಸುತ್ತಿದ್ದಾರೆ ಕರ್ನಾಟಕದ ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಕೃಷ್ಣ ಸರ್ವೂಚ್ಚ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಇಂತಹ ಕೆಲಸವನ್ನು ಮಾಡಿದ್ದರು ಈಗ ಕರ್ನಾಟಕದ ಓರ್ವ ಮಂತ್ರಿ ತನ್ನ ಕಾರನ್ನು ಜನ ಮಂಡ್ಯದಲ್ಲಿ ನಿಲ್ಲಿಸಿದಾಗ ಹೊರಬಂದು ಜನರಿಗೆ ತಿಳಿಹೇಳುವುದನ್ನು ಬಿಟ್ಟು ಅವರೊಂದಿಗೇ ನಿರಶನದಲ್ಲಿ ಭಾಗಿಯಾಗಿದ್ದಾರೆ ಆಯೋಗದ ತೀರ್ಪು ಸಾರಾಸಗಟು ಏಕಪಕ್ಷವಾದದ್ದು ಪೂರ್ವಾಗ್ರಹದಿಂದ ಕೂಡಿದ್ದು ನಿರಂಕುಶವಾದದ್ದು ಎಂದು ಬಣ್ಣಿಸಿದ ದೇಶದ ಮಾಜಿ ಪ್ರಧಾನಮಂತ್ರಿಗಳಾದ ದೇವೇಗೌಡರ ಮಾತುಗಳು ಅದಕ್ಕಿಂತಲೂ ಪ್ರಶ್ನಾರ್ಹವಾದ ಕ್ರಿಯೆ ಎನ್ನಬಹುದು ಹೀಗೆ ಬಿದ್ದಬೆಂಕಿಯನ್ನು ನಂದಿಸುವುದಕ್ಕೆ ಬದಲು ಅದಕ್ಕೆ ಇನ್ನಷ್ಟು ತುಪ್ಪ ಸುರಿದು ಪಾಕೃತಿಕ ಸಂಪನ್ಮೂಲಗಳ ಜೊತೆಗೆ ರಾಜಕೀಯ ಮಾಡುವ ಲಕ್ಷಣಗಳು ದೇಶದ ಐಕ್ಯತೆ ಗೆ ಒದಗಿರುವ ಅಪಾಯ ರಾಜ್ಯಗಳ ನಡುವಿನ ವಿವಾದಗಳನ್ನು ಪರಿಹರಿಸುವ ಆಯೋಗಗಳಂತಹ ಸಂಸ್ಥೆಗಳು ಕಳೆದುಕೊಳ್ಳುತ್ತಿರುವ ನಂಬಿಕೆ ಈ ರೀತಿಯ ಮಾತುಗಳನ್ನು ಆಡಿದ್ದಾರೆ ಅವರ ಕಪಟ ಸೋಗಿನ ಮಾತುಗಳಲ್ಲಿರುವ ವಿಡಂಬನೆಯನ್ನು ಜನರು ಗಮನಿಸಿಯೇ ಇರುತ್ತಾರೆ ಕಾನೂನನ್ನು ಬಲ್ಲ ಸಂವಿಧಾನವನ್ನೂ ಅರ್ಥಮಾಡಿಕೊಂಡಿರುವ ವಕೀಲರೂ ನ್ಯಾಯಾಲಯಗಳನ್ನು ಬಿಟ್ಟು ಬೀದಿಗಿಳಿದಿರುವುದು ಸೋಜಿಗದ ಮಾತೇ ಸರಿ ಅವರುಗಳ ನಡುವಿನಲ್ಲಿನ ಹಿರಿಯರು ಯಾರೂ ಅವರಿಗೆ ತಾವು ಮಾಡುತ್ತಿರುವ ಅಸಮಂಜಸ ಕೃತ್ಯದಬಗ್ಗೆ ಬುದ್ಧಿಮಾತು ಹೇಳಲಿಲ್ಲವೇ ಆಯೋಗದ ತೀರ್ಪಿನ ಬಗ್ಗೆ ತಮಿಳುನಾಡಿನಲ್ಲಿ ಇಷ್ಟೇ ಅಸಮಾಧಾನವಿದ್ದಿದ್ದರೆ ಇಂಥದೇ ಕೃತ್ಯಗಳು ತಮಿಳುನಾಡಿನಲ್ಲೂ ಆಗುವ ಸಾಧ್ಯತೆ ಇತ್ತು ಎಂದು ಹೇಳುವುದರಲ್ಲಿ ಅತಿರೇಕವೇನೂ ಇಲ್ಲ ಈಗಾಗಲೇ ಜಯಲಲಿತಾ ಕೆಲ ಜವಾಬ್ದಾರಿರಹಿತ ಮಾತುಗಳನ್ನಾಡಿಬಿಟ್ಟಿದ್ದಾರೆ ದೇವೇಗೌಡ ಮತ್ತು ಕರ್ನಾಟಕದ ವಕೀಲರು ಈ ತೀರ್ಪು ಕರ್ನಾಟಕಕ್ಕೆ ಅನ್ಯಾಯ ಉಂಟುಮಾಡುತ್ತಿರುವಂಥದ್ದು ಅನ್ನುವ ನಿರ್ಧಾರಕ್ಕೆ ಯಾವ ಆಧಾರದ ಮೇಲೆ ಬಂದಿದ್ದಾರೆ ಈ ಪ್ರಶ್ನೆಯನ್ನು ತಮಿಳುನಾಡಿನ ಸಂದರ್ಭದಲ್ಲಿ ಜಯಲಲಿತಾರನ್ನೂ ಕೇಳಬೇಕು ಇವುಗಳನ್ನು ನೋಡಿದರೆ ಈ ಮಾತುಗಳೆಲ್ಲಾ ಯೋಚಿಸದೇ ಆಡಿದವು ಅಥವಾ ಬೇರೊಬ್ಬರಿಂದ ಬಳುವಳಿಯಾಗಿ ಪಡೆದ ಅಥವಾ ಪೂರ್ವಾಗ್ರಹಪೀಡಿತ ಅಭಿಪ್ರಾಯಗಳು ಅಂತ ಅನ್ನಿಸುತ್ತದೆ ಮೊದಲಿನಿಂದಲೂ ಕರ್ನಾಟಕ ಸರಕಾರ ಮತ್ತು ಕರ್ನಾಟಕದಲ್ಲಿನ ರಾಜಕಾರಣಿಗಳು ನ್ಯಾಯಾಂಗ ಪ್ರಕ್ರಿಯೆಯನ್ನು ವಿರೋಧಿಸುತ್ತಲೇ ಬಂದಿದ್ದಾರೆ ನ್ಯಾಯಾಂಗದಿಂದ ಉತ್ತಮ ಫಲಿತಾಂಶ ಬರಬಹುದೆಂಬ ನಂಬಿಕೆಯೂ ಅವರಿಗಿರಲಿಲ್ಲವಾದ್ದರಿಂದ ಆದೇಶದಲ್ಲಿ ಅನ್ಯಾಯ ವನ್ನು ಅವರು ನಿರೀಕ್ಷಿಸಿದ್ದರು ಮತ್ತು ತೀರ್ಪಿನಲ್ಲಿ ಅದೇ ಅವರಿಗೆ ಕಾಣಿಸುತ್ತಿದೆ ತಮಿಳುನಾಡಿನ ಮಟ್ಟಿಗೆ ಹೇಳುವುದಾದರೆ ಕಾವೇರಿ ನೀರನ್ನು ತಮ್ಮ ರಾಜ್ಯವೇ ಹೆಚ್ಚಾಗಿ ಬಳಸುತ್ತಿದ್ದ ದಿನಗಳನ್ನು ಜನ ನೆನಪುಮಾಡಿಕೊಳ್ಳುತ್ತಾರೆ ಆ ಮಟ್ಟಕ್ಕೆ ತೀರ್ಪು ಆ ರಾಜ್ಯದ ಪರವಾಗಿ ಇಲ್ಲವಾದ್ದರಿಂದ ಅವರಿಗೂ ಇದನ್ನು ಒಪ್ಪುವುದು ಕಷ್ಟವಾಗುತ್ತದೆ ಎರಡೂ ರಾಜ್ಯಗಳು ತಮ್ಮ ಭೂತಕಾಲಗಳನ್ನು ಬಿಟ್ಟುಕೊಡದಿದ್ದಲ್ಲಿ ಈ ಬಗ್ಗೆ ಒಂದು ವಿವೇಚನಾಶೀಲ ನಿಲುವನ್ನು ತೆಗೆದುಕೊಳ್ಳುವ ಸಾಧ್ಯತೆ ಇಲ್ಲ ಪ್ರ ೬ ಈ ನಾಲ್ಕೂ ರಾಜ್ಯಗಳು ಆದೇಶದಿಂದ ಚಕಿತರಾಗುವುದಕ್ಕೆ ಕಾರಣವಿದೆಯೇ ಉ ಈ ಲೇಖಕನ ಉತ್ತರ ಈ ಪ್ರಶ್ನೆಗೆ ಇಲ್ಲ ಎನ್ನುವುದೇ ಆಗಿದೆ ಈ ಲೇಖಕನ ಅಸಾಂಪ್ರದಾಯಿಕ ದೃಷ್ಟಿಯಲ್ಲಿ ಈ ಸಂಖ್ಯೆಗಳಲ್ಲಿ ಅಂದರೆ ತಮಿಳುನಾಡಿಗೆ ೪೧೯ ಟಿಎಂಸಿ ಅಡಿ ಕರ್ನಾಟಕಕ್ಕೆ ೨೭೦ ಕೇರಳಕ್ಕೆ ೩೦ ಪುದುಚ್ಚೇರಿಗೆ ೭ ನಿಜಕ್ಕೂ ಯಾವ ಅರ್ಥವೂ ಇಲ್ಲ ಈ ಮಾತು ಆಶ್ಚರ್ಯಕರವಾಗಿರಬಹುದು ಹೀಗಾಗಿ ಇದನ್ನು ವಿವರಿಸುವ ಅಗತ್ಯವಿದೆ ಮೊದಲಿಗೆ ನದೀಮೂಲದ ಕಡೆಗಿರುವ ರಾಜ್ಯಗಳಿಗೆ ನಿಗದಿಮಾಡಿರುವ ಸಂಖ್ಯೆಗಳು ಕಾಲ್ಪನಿಕವಾದದ್ದು ಕೇರಳಕ್ಕೆ ಯಾರೂ ನೀರನ್ನು ಬಿಡುವುದಿಲ್ಲ ಅದು ಆಕಾಶದಿಂದ ಸುರಿಯುತ್ತದೆ ಕೇರಳದಿಂದ ಬಿಡುಗಡೆ ಯಾಗದ ಆದರೆ ಕಬಿನಿ ನದಿಯ ಮೂಲಕ ಸಹಜವಾಗಿ ಹರಿಯುವ ನೀರನ್ನು ಬಿಟ್ಟರೆ ಕರ್ನಾಟಕಕ್ಕೂ ಇದೇ ಮಾತು ವರ್ತಿಸುತ್ತದೆ ಹಾಗೆಯೇ ತಮಿಳುನಾಡಿಗೆ ನಿಗದಿಮಾಡಿರುವ ಹೆಚ್ಚಿನಂಶ ನೀರು ಪ್ರಕೃತಿಯ ದೇಣಿಗೆ ಹೀಗಾಗಿ ನಮಗೆ ಮುಖ್ಯವಾಗುವ ಸಂಖ್ಯೆ ಅಂದರೆ ಕರ್ನಾಟಕ ತಮಿಳುನಾಡಿಗೆ ಬಿಡ ಬೇಕಾದ ನೀರು ಮತ್ತು ತಮಿಳುನಾಡು ಕಾರೈಕಲ್ ಗೆ ಪುದುಚ್ಚೇರಿ ಬಿಡ ಬೇಕಾದ ನೀರು ಗಮ್ಮತ್ತಿನ ಮಾತೆಂದರೆ ಸಹಜವಾಗಿ ಹರಿಯುತ್ತಿದ್ದ ನೀರನ್ನು ಮೊದಲಿಗೆ ಅಣೆಕಟ್ಟುಗಳ ಹಿಂದೆ ತಡೆಹಿಡಿಯುವುದರಿಂದ ಈ ರಾಜ್ಯಗಳು ನೀರನ್ನು ಬಿಡು ವ ಅಥವಾ ಕೊಡು ವ ಹಕ್ಕನ್ನು ಕೈಗೂಡಿಸಿಕೊಂಡವು ಅನ್ನುವುದನ್ನು ನಾವು ಗಮನಿಸಬೇಕು ಎರಡನೆಯದಾಗಿ ಕೇರಳ ರಾಜ್ಯ ೫ ಟಿಎಂಸಿ ಅಡಿ ನೀರನ್ನು ಮಾತ್ರ ಉಪಯೋಗಿಸುತ್ತಿದೆ ಎಂದು ೧೯೭೦ರಲ್ಲಿ ಅಂದಾಜು ಮಾಡಲಾಗಿತ್ತು ಆಗಿನಿಂದ ನೀರಿನ ಉಪಯೋಗ ಹೆಚ್ಚಿರಬಹುದಾದರೂ ಅದಕ್ಕೆ ನಿಗದಿಮಾಡಿರುವ ೩೦ ಟಿಎಂಸಿ ಅಡಿ ನೀರನ್ನು ಆ ರಾಜ್ಯ ಉಪಯೋಗಿಸುವುದಕ್ಕೆ ಸಾಕಷ್ಟು ಕಾಲ ಹಿಡಿಯಲಿದೆ ಹೀಗಾಗಿ ನಮಗೆ ಗೋಚರಿಸುವ ಭವಿಷ್ಯದಲ್ಲಿ ಕೇರಳ ಮಿಕ್ಕ ರಾಜ್ಯಗಳ ಅವಶ್ಯಕತೆಗಳನ್ನು ಬಾಧಿಸದೇ ಹೇರಳವಾಗಿ ನೀರನ್ನು ಉಪಯೋಗಿಸಬಹುದೆಂದಾಯ್ತು ೩೦ಟಿಎಂಸಿ ಅಡಿ ನೀರಿಗಿಂತ ಅಧಿಕವಾಗಿ ಬಳಸಬೇಕಾದ ಪರಿಸ್ಥಿತಿ ಮುಂದೆಂದಾದರೂ ಭವಿಷ್ಯದಲ್ಲಿ ಉಂಟಾದರೆ ಆಗ ಈ ಪರಿಮಿತಿಯನ್ನು ಪುನಹ ಪರಿಶೀಲಿಸಲು ಕಾವೇರಿ ನಿರ್ವಹಣಾ ಪ್ರಾಧಿಕಾರವನ್ನು ಅದು ಕೇಳಬಹುದು ಅಥವಾ ಮತ್ತೂಂದು ಆಯೋಗವನ್ನು ರಚಿಸಲು ಮನವಿಮಾಡಿಕೊಳ್ಳಬಹುದು ಕರ್ನಾಟಕದ ಮಾತಿಗೆ ಬಂದರೆ ನಮಗೆ ಮುಖ್ಯವಾಗುವುದು ನಿಗದಿ ಮಾಡಿರುವ ೨೭೦ ಟಿಎಂಸಿ ಅಡಿ ನೀರಲ್ಲ ಬದಲಿಗೆ ತಮಿಳುನಾಡಿಗೆ ಬಿಡಬೇಕಾದ ೧೯೨ ಟಿಎಂಸಿ ಅಡಿ ನೀರು ಹೆಚ್ಚಿನ ವರ್ಷಗಳಲ್ಲಿ ಕರ್ನಾಟಕದಿಂದ ತಮಿಳುನಾಡಿಗೆ ಸಹಜವಾಗಿ ಹರಿಯುವ ನೀರು ಇದಕ್ಕಿಂತ ಹೆಚ್ಚಾಗಿಯೇ ಇರುತ್ತದೆ ಮಳೆ ಕಡಿಮೆ ಬಿದ್ದಾಗ ಮಾತ್ರ ಈ ಸಂಖ್ಯೆಯನ್ನು ನಿಭಾಯಿಸಲು ಕರ್ನಾಟಕಕ್ಕೆ ಕಷ್ಟವಾಗುತ್ತದೆ ಅಂದರೆ ಈ ಮೊದಲು ಅಮಲಿಗೊಳಿಸುವುದಕ್ಕಷ್ಟೇ ಮಹತ್ವವೆಂದಿದ್ದ ೧೯೨ ಟಿಎಂಸಿ ಅಡಿ ನೀರನ್ನು ಬಿಡುವುದು ಮಾಮೂಲು ವರ್ಷಗಳಲ್ಲಿ ಮಹತ್ವದ ಮಾತೇನೂ ಅಲ್ಲ ಎಲ್ಲರನ್ನೂ ಕಾಡುತ್ತಿರುವ ಮಹತ್ವದ ಮಾತೆಂದರೆ ಕೊರತೆಯ ವರ್ಷಗಳಲ್ಲಿ ನೀರನ್ನು ಹಂಚಿಕೊಳ್ಳುವುದು ಹೇಗೆಂಬ ವಿಷಯಕ್ಕೆ ಸಂಬಂಧಿಸಿದ್ದು ಇಲ್ಲಿ ಆಯೋಗ ಯಾವುದೇ ಸೂತ್ರವನ್ನು ನೀಡದೇ ಪರಿಮಾಣಕ್ಕನುಸಾರವಾಗಿ ಎಂದಷ್ಟೇ ಹೇಳಿ ವಿವರಗಳನ್ನು ಕಾವೇರಿ ನಿರ್ವಹಣಾ ಮಂಡಲಿಗೆ ಎಲ್ಲ ಕೆಲಸವನ್ನೂ ಬಿಟ್ಟುಕೊಟ್ಟಿದೆ ತಕ್ಷಣಕ್ಕೆ ಮಾಡಬೇಕಾದ ಕೆಲಸವೆಂದರೆ ಕೊರತೆಯಿರುವ ವರ್ಷಗಳಲ್ಲಿ ನೀರನ್ನು ಹಂಚಿಕೊಳ್ಳುವ ವಿಧಾನದ ಬಗ್ಗೆ ಒಂದು ಒಪ್ಪಂದದ ಚೌಕಟ್ಟನ್ನು ಏರ್ಪಾಟು ಮಾಡಿಕೊಳ್ಳುವುದು ನಾವು ಚರ್ಚಿಸಿದ ಮೇಲಿನ ಅಂಕಿ ಸಂಖ್ಯೆಗಳೆಲ್ಲಾ ಈ ಇಂಥ ಪರಿಸ್ಥಿತಿಯಗಳಲ್ಲಿ ಮಾತ್ರ ಅರ್ಥವನ್ನು ಪಡೆಯುತ್ತವೆ ಕಾವೇರಿ ನಿರ್ವಹಣಾ ಪ್ರಾಧಿಕಾರದ ರಚನೆಯಾದ ಕೂಡಲೇ ಅದು ಕೈಗೆತ್ತಿಕೊಳ್ಳಬೇಕಾದ ಮೊದಲ ಕೆಲಸ ಇದಾಗಬೇಕು ನಾವು ಆಯೋಗದ ತೀರ್ಪಿನಲ್ಲಿ ತಪ್ಪು ಕಂಡುಹಿಡಿಯಲೇ ಬೇಕು ಅನ್ನುವುದಾದರೆ ಕೊರತೆಯ ವರ್ಷಗಳಲ್ಲಿ ನೀರನ್ನು ಹಂಚಿಕೊಳ್ಳಲು ಒಂದು ವಿವರವಾದ ತಾಂತ್ರಿಕ ಮತ್ತು ಅಮಲುಗೊಳಿಸಲಾಗುವಂತಹ ಸೂತ್ರವನ್ನು ಅದು ನೀಡಲಿಲ್ಲ ಅನ್ನುವ ಅಂಶದ ಮೇಲೆ ಟೀಕಿಸಬಹುದು ಆದರೆ ಅದೂ ಒಳ್ಳೆಯದೇ ಆಗಿರಬಹುದು ಸ್ಪಷ್ಟವಾಗಿ ಬದಲಾಯಿಸಲಾಗದ ಒಂದು ನ್ಯಾಯಾಂಗದ ಅಮಲು ಪಡಿಸಲೇಬೇಕಾದ ತೀರ್ಮಾನಕ್ಕಿಂತ ಸಮಯಕ್ಕೆ ತಕ್ಕಂತೆ ಕಾವೇರಿ ನಿರ್ವಹಣಾ ಪ್ರಾಧಿಕಾರ ಆಯಾ ರಾಜ್ಯಗಳ ಜೊತೆ ಮಾತುಕತೆ ನಡೆಸಿ ತೀರ್ಮಾನ ಮಾಡಬಹುದಾಗಿದೆ ಈ ದೃಷ್ಟಿಯಿಂದ ನೋಡಿದರೆ ಕೋಪದ ಹಲ್ಲು ಕಡಿಯುವ ಎದೆ ಜಜ್ಜಿಕೊಳ್ಳುವ ಅವಶ್ಯಕತೆಯೇ ಇಲ್ಲ ಈಗ ನಡೆಯುತ್ತಿರುವ ನಿರಶನ ಸತ್ಯಾಗ್ರಹ ಎಲ್ಲವೂ ಅನವಶ್ಯಕ ಪ್ರ ೭ ಕಡೆಗೆ ಈ ಬಿಕ್ಕಟ್ಟಿನ ಮೂಲ ಏನು ಉ ಪ್ರತಿ ರಾಜ್ಯವೂ ತನಗೆ ಬೇಕಾದ ನೀರಿನ ಪರಿಮಾಣವನ್ನು ನಮೂದಿಸಿವೆ ಎಲ್ಲವನ್ನೂ ಕೂಡಿದರೆ ನದಿಯಲ್ಲಿರುವ ನೀರಿಗಿಂತ ಬೇಕೆನ್ನಲಾದ ನೀರಿನ ಪರಿಮಾಣ ಹೆಚ್ಚಾಗಿದೆ ಹೀಗಾಗಿ ಈ ಬಿಕ್ಕಟ್ಟು ಆದರೆ ಎಲ್ಲ ರಾಜ್ಯಗಳಿಗೂ ಇಷ್ಟು ನೀರು ಬೇಕೇ ಬೇಕೆ ಭವಿಷ್ಯದ ಅಗತ್ಯಗಳನ್ನು ಈಗಿನ ಬಳಕೆಯ ಆಧಾರದ ಮೇಲೆ ತುಸು ಪರಿಷ್ಕಾರಗಳೊಂದಿಗೆ ಕಲ್ಪಿಸಲಾಗಿದೆ ಆದರೆ ಬಹುಮಟ್ಟಿಗೆ ತಿಳಿದಿರುವ ವಿಷಯವೆಂದರೆ ಕೃಷಿ ಮತ್ತು ಇತರ ಉಪಯೋಗಗಳಿಗೆ ಈಗಿನ ನೀರಿನ ಬಳಕೆಯ ವಿಧಾನ ಸಮರ್ಪಕವಾದದ್ದೂ ಅಲ್ಲ ಗಿಟ್ಟುವ ಮಾತೂ ಅಲ್ಲ ಈಗಿನ ನಮ್ಮ ವಿಧಾನದಲ್ಲಿ ಬಹಳಷ್ಟು ನೀರನ್ನು ನಾವು ಪೋಲು ಮಾಡುತ್ತಿದ್ದೇವೆ ಈ ಬಗ್ಗೆ ಅನೇಕ ಬುದ್ಧಿಜೀವಿಗಳು ಆಯೋಗಗಳೂ ಟಿಪ್ಪಣಿಗಳನ್ನು ಮಾಡಿವೆ ನೀರನ್ನು ಸಮರ್ಪಕವಾಗಿ ಉಪಯೋಗಿಸಬೇಕೆನ್ನುವ ವಿವೇಕ ನಮಗೆ ಬರದೇ ಇದ್ದಲ್ಲಿ ಈ ಬಿಕ್ಕಟ್ಟುಗಳನ್ನು ತಡೆಗಟ್ಟುವ ಅಥವಾ ಪರಿಹರಿಸುವ ಯಾವುದೇ ಆಶಾಭಾವವನ್ನು ನಾವು ಹೊಂದಲು ಸಾಧ್ಯವೇ ಇಲ್ಲ ಎಂ ಎಸ್ ಶ್ರೀರಾಮ್ posted by ಎಂ ಎಸ್ ಶ್ರೀರಾಮ್ at 4 34 am no comments sunday march 8 2009 ನಾವೇಕೆ ಬ್ಲಾಗ್ ಮಾಡುತ್ತೇವೆ ನನ್ನ ಸಂದರ್ಶನ ನಿಮಗೆ ಬ್ಲಾಗ್ ಬರೆಯುವ ಐಡಿಯಾ ಬಂದದ್ದು ಹೇಗೆ ನನಗೆ ಬ್ಲಾಗ್ ಬರೆಯುವ ಐಡಿಯಾ ನನ್ನ ವಿದ್ಯಾರ್ಥಿಗಳಿಂದ ಬಂತು ಅಂತರ್ಜಾಲದಲ್ಲಿ ಅನೇಕ ವಿದ್ಯಾರ್ಥಿಗಳು ತಮ್ಮ ಅನುಭವವನ್ನು ಬರೆಯುವುದನ್ನ ಮುಖ್ಯವಾಗಿ ನನ್ನದೇ ಪಾಠಗಳ ಬಗ್ಗೆ ಬೆರೆಯುವುದನ್ನ ಕಂಡಾಗ ನನಗೆ ಅದರ ಅದ್ಭುತ ಸಾಧ್ಯತೆ ಗೋಚರವಾಯಿತು ಸಾಲದ್ದಕ್ಕೆ ನಾನು ಒಂದೆರಡು ವರ್ಷಗಳಿಂದ ಕನ್ನಡದಲ್ಲಿ ಬರವಣಿಗೆಯನ್ನು ನಿಲ್ಲಿಸಿಬಿಟ್ಟಿದ್ದೆ ಇದಕ್ಕೆ ಕಾರಣ ನನ್ನ ಇಂಗ್ಲೀಷ್ ಬರಹವನ್ನು ಕಂಪ್ಯೂಟರ್ನಲ್ಲಿ ಬರೆಯುತ್ತಿದ್ದುದರಿಂದ ಕಾಗದದ ಮೇಲೆ ಕೈನಲ್ಲಿ ಬರೆಯುವ ಅಭ್ಯಾಸ ತಪ್ಪಿಹೋಗಿತ್ತು ಕನ್ನಡದಲ್ಲಿ ನಾನು ಐ ಲೀಪ್ ಉಪಯೋಗಿಸುತ್ತಿದ್ದೆ ಅದನ್ನ ಪ್ರತಿಬಾರಿ ಉಪಯೋಗಿಸುವಾಗಲೂ ಅದರ ಸಿ ಡಿಯನ್ನು ಕಂಪ್ಯೂಟರ್ನಲ್ಲಿ ತೂರಿಸಿಬೇಕಾಗುತ್ತಿತ್ತು ಹೀಗಾಗಿ ಕನ್ನಡದ ನನ್ನ ಬರವಣಿಗೆ ನಿಂತೇ ಹೋಗಿತ್ತು ಬ್ಲಾಗ್ ಮಾಧ್ಯಮವನ್ನು ನಾನು ಕಂಡುಕೊಂಡಾಗ ನನಗೆ ಮತ್ತೆ ಅಕ್ಷರಲೋಕಕ್ಕೆ ಕಾಲಿಡುವ ಸಾಧ್ಯತೆ ಕಾಣಿಸಿತು ಜೊತೆಗೆ ಇದು ಹೊಸ ಮಾಧ್ಯಮವಾದ್ದರಿಂದ ಇದರಲ್ಲಿ ಪ್ರಯೋಗ ಮಾಡುವುದರಲ್ಲಿ ಒಂದು ಬಗೆಯ ಥ್ರಿಲ್ ಇತ್ತು ನೀವು ಬ್ಲಾಗ್ ಬರೆಯುವುದು ಏಕೆ ನಾನು ಮೂಲತಃ ಬರಹಗಾರ ನನಗೆ ಬರವಣಿಗೆಯ ಮಾಧ್ಯಮಗಳಲ್ಲಿ ಪ್ರಯೋಗ ಮಾಡಬೇಕೆನ್ನಿಸುವುದು ಸಹಜ ಕಥೆ ಕಾದಂಬರಿ ಕವಿತೆ ಪ್ರಬಂಧಗಳ ಪ್ರಕಾರಗಳ ಪ್ರಾಕಾರಗಳನ್ನು ಮಿತಿಗಳನ್ನು ಮೀರಲು ಬ್ಲಾಗ್ ನನಗೆ ಸಹಾಯ ಮಾಡಿದೆ ಬ್ಲಾಗ್ ಬರೆಯುತ್ತಾ ಬರೆಯುತ್ತಾ ನಿಮಗೆ ಏನು ಸಿಕ್ಕಿದೆ ನನಗೆ ಸಿಕ್ಕಿದ್ದು ಸಫಲತೆ ಸಂತೋಷ ಇದೇ ಸಮಯದಲ್ಲಿ ಒಂದು ಪತ್ರಿಕೆ ನನ್ನನ್ನು ಒಂದು ಕಾಲಂ ಬರೆಯಲು ಕೇಳಿದರು ಆದರೆ ನನ್ನ ನೌಕರಿಯ ಮಿತಿಯಲ್ಲಿ ನನಗೆ ಇರುವ ಓಡಾಟದ ಒತ್ತಡದಲ್ಲಿ ಕನ್ನಡನಾಡಿನಿಂದ ದೂರವಿರುವುದರಿಂದ ಕನ್ನಡದ ಸಂದರ್ಭಕ್ಕೆ ಸಮರ್ಪಕವೆನ್ನಿಸುವ ರೀತಿಯಲ್ಲಿ ಕಾಲಂ ಬರೆಯಲು ಸಾಧ್ಯವಿಲ್ಲವೆಂದು ನನಗೆ ಮನದಟ್ಟಾಯಿತು ಜೊತೆಗೆ ಪತ್ರಿಕೆಗಳಲ್ಲಿ ಬರೆಯುವಾಗ ಇರುವ ಪದಮಿತಿಯ ಬಂಧನವೂ ನನ್ನ ಮನಸ್ಸಿನಲ್ಲಿತ್ತು ಆಗ ನನಗೆ ಬ್ಲಾಗಿನಲ್ಲಿ ಅತ್ಯಂತ ಅದ್ಭುತವಾದ ಮಾಧ್ಯಮ ದೊರೆಯಿತು ಯಾಕೆಂದರೆ ಇದು ಒಂದು ರೀತಿಯಲ್ಲಿ ಅನಿಯತಕಾಲಿಕವಾಗ ಬಹುದು ಪದಮಿತಿಯಿಲ್ಲಿದೇ ಬರೆಯಬಹುದು ಇದಕ್ಕೆ ಬೇಕಾದ ಚಿತ್ರಗಳನ್ನು ಇದರ ವಿನ್ಯಾಸವನ್ನೂ ನಾನೇ ರೂಪಿಸಬಹುದಿತ್ತು ಆಸಕ್ತಿ ಹುಟ್ಟಿಸುವ ಲೇಖನಗಳಿಗ ಕೊಂಡಿಯನ್ನೂ ಕೊಡಲು ಸಾಧ್ಯವಿತ್ತು ಜೊತೆಗೆ ಇಲ್ಲಿಯೂ ಸಲ್ಲದ ಅಲ್ಲಿಯೂ ಸಲ್ಲದ ಲೇಖನಗಳನ್ನು ನಾನು ಬರೆಯಲು ಸಾಧ್ಯವಾಯಿತು ನನ್ನ ಬರಹದಲ್ಲಿ ಕೆಲ ಲೇಖನಗಳನ್ನು ದಿನ ವಾರ ಪತ್ರಿಕೆಗಳು ಪ್ರಕಟಿಸಲು ಇಷ್ಟಪಡುವಂಥವುದಲ್ಲ ಸಾಹಿತ್ಯಿಕ ಪತ್ರಿಕೆಗಳು ಇರುವುದು ಬೆರಳೆಣಿಕೆಯಷ್ಟು ಅವೂ ಅನಿಯತಕಾಲಿಕಗಳಾದ್ದರಿಂದ ಯಾವಾಗ ಪ್ರಕಟಗೊಳ್ಳುವುದೋ ತಿಳಿಯದು ಹೀಗಾಗಿ ಈ ಮಾಧ್ಯಮ ನನಗೆ ಹಿಡಿಸಿತು ನಾನು ಕನ್ನಡದಲ್ಲಲ್ಲದೇ ಇಂಗ್ಲೀಷಿನಲ್ಲೂ ಒಂದು ಬ್ಲಾಗ್ ಪ್ರಾರಂಭಿಸಿದೆ ಕೆಲ ಲೇಖನಗಳು ಎರಡು ಭಾಷೆಗಳಲ್ಲೂ ಹಚ್ಚಿರುವೆನಾದರೂ ಕೆಲವು ಆಯಾ ಭಾಷೆಯ ಸಂದರ್ಭಕ್ಕೆ ಒಗ್ಗುವವು ಅನ್ನಿಸಿದೆ ಓದುಗರ ಸ್ಪಂದನ ಹೇಗಿದೆ ಚೆನ್ನಗಿದೆ ಆದರೆ ಸಾಲದು ಬ್ಲಾಗಿನ ಅದ್ಭುತವೆಂದರೆ ಒಂದು ಚರ್ಚೆ ಸಂಭಾಷಣೆ ನಡೆಸಲು ಸಾಧ್ಯ ಆದರೆ ನನ್ನ ಬ್ಲಾಗಿಗೆ ಮೊದಲು ಬಂದಷ್ಟು ಪ್ರತಿಕ್ರಿಯಗಳು ಈಗೀಗ ಬರುತ್ತಿಲ್ಲ ಅದಕ್ಕೆ ಕಾರಣ ಬಹುಶಃ ಅಲ್ಲಿನ ಲೇಖನಗಳು ತುಸು ಗಂಭೀರವಾಗಿರುವುದೇ ಆಗಿರಬಹುದು ಸಾಮಾನ್ಯವಾಗಿ ಈ ಮಾಧ್ಯಮವನ್ನು ಉಪಯೋಗಿಸುವವರು ಇದನ್ನ ಒಂದು ದಿನಚರಿಯ ಪುಟದಂತೆ ಲೈಟಾಗಿ ಉಪಯೋಗಿಸುತ್ತಾರೆ ಉದಾಹರಣೆಗ ಸೌರವ್ ಗಂಗೂಲಿಯ ಕಪ್ತಾನಿಯ ಬಗ್ಗೆ ಬರೆದರೆ ಅದಕ್ಕೆ ಬಹುಶಃ ಹೆಚ್ಚು ಪ್ರತಿಕ್ರಿಯೆ ಬರಬಹುದು ಆದರೆ ನಾನು ಬ್ಲಾಗಿನ ಮಾಧ್ಯಮವನ್ನು ಉಪಯೋಗಿಸುತ್ತಿರುವುದು ತುಸು ಭಿನ್ನ ರೀತಿಯಲ್ಲಿ ಹೀಗಾಗಿ ನನ್ನ ಆಶಯದಷ್ಟು ಪ್ರತಿಕ್ರಿಯೆ ಬರುತ್ತಿಲ್ಲವೆಂಬ ನನ್ನ ಅಸಮಾಧಾನ ಸಹಜವೇ ಆಸೆಗೂ ಮಿತಿಯಿರಬೇಕು ದೇಸೀ ಭಾಷೆಯೊಂದನ್ನು ಬೆಚ್ಚಗಿಡುವಲ್ಲಿ ಬ್ಲಾಗ್ ಪಾತ್ರ ಏನು ನನಗೆ ಬ್ಲಾಗ್ ಈ ಥರದ ಮಹತ್ತರ ಸಾಧನೆ ಮಾಡುತ್ತದೆ ಅನ್ನಿಸುವುದಿಲ್ಲ ಆಯಾ ಭಾಷೆಗೆ ಇರುವ ಅನೇಕ ಪರಿಕರಗಳಲ್ಲಿ ಇದೂ ಒಂದು ಅಂತ ಅನ್ನಿಸುತ್ತದೆ ಆದರೆ ಕನ್ನಡದಲ್ಲಿ ಬ್ಲಾಗ್ ಮಾಡುವಾಗ ನಮಗಿರುವ ಪರಿಕರಗಳು ಕಡಿಮೆ ಉದಾಹರಣೆಗೆ ವಿನ್ಯಾಸಕ್ಕಿರುವ ಪರಿಕರ ಟೆಂಪ್ಲೇಟ್ ಇಂಗ್ಲೀಶ್ ಭಾಷೆಗೆ ಅನುಗುಣವಾಗಿ ಇದೆ ಹೆಚ್ಟಿ ಎಂಎಲ್ ಜಾವಾ ತಿಳಿಯದ ನನ್ನಂಥವರಿಗೆ ಅದನ್ನು ಕನ್ನಡಿಸುವ ಕೆಲಸ ಕಷ್ಟದ್ದು ಆದರೂ ನಾನು ಸಾಧ್ಯವಾದಷ್ಟು ಅದರವಿನ್ಯಾಸವನ್ನು ಕನ್ನಡಿಸಿದ್ದೇನೆ ಆದರೂ ತಾರೀಖು ತಿಂಗಳುಗಳ ಹೆಸರುಗಳು ಇನ್ನೂ ಇಂಗ್ಲೀಷಿನಲ್ಲೇ ಇವೆ ಈ ಮಾಧ್ಯಮದಲ್ಲಿ ಕನ್ನಡದ ಪರಿಕರಗಳನ್ನು ಹುಟ್ಟಿಸುವ ಕೆಲಸ ಆಗಬೇಕಾಗಿದೆ ಸಧ್ಯಕ್ಕೆ ಕೈಬೆರೆಳೆಣಿಕೆಯಷ್ಟು ಜನ ಬ್ಲಾಗ್ ಬರೆಯುತ್ತಿದ್ದಾರೆ ನಿಮ್ಮ ಮೆಚ್ಚಿನ ಬ್ಲಾಗ್ ಗಳು ಯಾವುವು ಮಜಾವಾಣಿ majavani blogspot com ಎಂಬ ಫೇಕ್ ಪತ್ರಿಕೆಯನ್ನು ವಾರ್ತಾವಿದೂಷಕ ಎಂಬವರು ನಡೆಸುತ್ತಿದ್ದಾರೆ ಅತ್ಯುತ್ತಮ ಹಾಸ್ಯಕ್ಕೆ ನಾನು ಆ ಬ್ಲಾಗನ್ನು ಓದುತ್ತೇನೆ ಓ ಎಲ್ ನಾಗಭೂಷಣಸ್ವಾಮಿ ತಮ್ಮ ಬ್ಲಾಗನ್ನು ಸಂಪದ ಎಂಬ ಸಮೂಹದಲ್ಲಿ ಬರೆಯುತ್ತಾರೆ sampada net ಅದೂ ನನಗೆ ಮೆಚ್ಚುಗೆಯೇ ಇಂಗ್ಲೀಷಿನಲ್ಲಿ ಉಮಾ ದಾಸ್ಗುಪ್ತಾ ಬರೆಯುವ ಬ್ಲಾಗೂ ನನಗೆ ಇಷ್ಟ indianwriting blogspot com ನನಗೆ ಇಷ್ಟವಾದ ಅಂತರ್ಜಾಲದ ಪುಟಗಳ ಕೊಂಡಿಗಳನ್ನು ನನ್ನ ಬ್ಲಾಗಿನಲ್ಲೇ ಕೊಟ್ಟಿದ್ದೇನೆ ಎಂ ಎಸ್ ಶ್ರ...
|